ಚಂದ್ರಯಾನ -3 ಯಶಸ್ವಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜನರ ಸಂಭ್ರಮಾಚರಣೆ ಹೀಗಿತ್ತು
ಹುಬ್ಬಳ್ಳಿ, ಆಗಸ್ಟ್, 23: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಇಂದು ಸಂಜೆ ಸುಮಾರು 6.04ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು, ಈ ಹಿನ್ನೆಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜನರು ಸಂಭ್ರಮಾಚರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳಾ ಉದ್ಯೋಗಿಗಳು ತಮ್ಮದೇ ಆದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ ಮೂರನೆಯ ಚಂದ್ರಯಾನ-3 ಉಡಾವಣೆ ಯಶಸ್ವಿಗೆ ಬಹಳಷ್ಟು ವಿಜ್ಞಾನಿಗಳ ಶ್ರಮ ಇದೆ. ನಮೆಲ್ಲರ ಕನಸು, ನಿರೀಕ್ಷೆಗಳು ಚಂದ್ರನೆಡೆಗೆ ಸಾಗುತ್ತಿದ್ದು, ಭಾರತ ಹೆಮ್ಮೆಪಡುತ್ತದೆ. 45 ದಿನಗಳ ಐತಿಹಾಸಿಕ ಚಂದ್ರಯಾನ-3 ಯಶಸ್ವಿಯಾಗಿ ಆರಂಭವಾಗಿದೆ. 2.35ಕ್ಕೆ ಆಂಧ್ರದ ಶ್ರೀಹರಿಕೋಟಾದಿಂದ ಚಂದಿರನ ಅಂಗಳಕ್ಕೆ ನೌಕೆಯನ್ನು ಉಡಾವಣೆ ಮಾಡಿದ ಇಸ್ರೋ ಈ ಪ್ರಯತ್ನದಲ್ಲಿ ಪೂರ್ಣ ಯಶಸ್ಸು ಸಾಧಿಸಲಿದೆ ಎಂಬ ವಿಶ್ವಾಸ ನನ್ನದಾಗಿದೆ ಎಂದರು.

ಅದೇ ರೀತಿ ಚಂದ್ರಯಾನ-3ಕ್ಕೂ ಕರುನಾಡಿನ ಕಾಣಿಕೆ ಅಪಾರವಾಗಿದೆ. ಜಗತ್ತು ಭಾರತವನ್ನು ಕರ್ನಾಟಕದ ಮೂಲಕ ನೋಡುವ ಈ ಅವಿಸ್ಮರಣೀಯ ಕ್ಷಣದ ದೃಶ್ಯವನ್ನು ನಾನು ಕಣ್ತುಂಬಿಕೊಂಡೆ. ಉಡಾವಣೆಯಾದ ಕೆಲ ಕ್ಷಣಗಳಲ್ಲೇ ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರಿದ್ದು, ಈ ಮೂಲಕ ಉಪಗ್ರಹವನ್ನು ಚಂದ್ರನ ಮೇಲೆ ಇಳಿಸುವ 6 ವಾರಗಳ ರೋಮಾಂಚನಕಾರಿ ಮಿಷನ್‌ಗೆ ಚಾಲನೆ ದೊರೆತಿದೆ.
ಚಂದ್ರನತ್ತ ಹೊರಟ ರಾಕೆಟ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, 3 ನೇಯ ಬಾರಿ ಚಂದ್ರನತ್ತ ಇಸ್ರೋ ತನ್ನ ಪಯಣ ಆರಂಭಿಸಿದೆ. ಕೋಟ್ಯಂತರ ಭಾರತೀಯರ ಹಾರೈಕೆಯೊಂದಿಗೆ ನಭಕ್ಕೆ ಚಿಮ್ಮಿದ ಚಂದ್ರಯಾನ-3 ರಾಕೆಟ್ ಚಂದ್ರನ ಅಂಗಳದಲ್ಲಿ ಕಾಲಿಟ್ಟಿದೆ. ಈ ಮಿಷನ್ ಸಾಧ್ಯವಾಗಿಸಲು ಹಗಲಿರುಳು ಶ್ರಮಿಸಿದ ಸಾವಿರಾರು ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹಾಸನದಲ್ಲಿ ಸಂಭ್ರಮಾಚರಣೆ
ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಕೊನೆಗೂ ಚಂದ್ರನ ಮೇಲೆ ಲ್ಯಾಂಡ್ ಆಗಿದ್ದು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಅಲ್ಲದೇ ದೇಶದೆಲ್ಲೆಡೆ ಚಂದ್ರಯಾನ-3ರ ಯಶಸ್ವಿ ಸಂಭ್ರಮ ಮನೆ ಮಾಡಿದೆ. ಹಾಗೆಯೇ ಹಾಸನದಲ್ಲಿಯೂ ಜನರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಹಾಸನದ ಎಂಜಿ ರಸ್ತೆಯಲ್ಲಿ ಜನರು ಪಟಾಕಿ ಸಿಡಿಸಿ ಜೈ ಇಸ್ರೋ ಎಂದು ಘೋಷಣೆ ಕೂಗುವುದಲ್ಲದೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.












Click it and Unblock the Notifications