ಬಂದ್ ದಿನದ ಹುಬ್ಬಳ್ಳಿ ಚಿತ್ರಗಳು, ಜನರ ಚಿಂತೆ, ಪರದಾಟ...

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಸೆಪ್ಟೆಂಬರ್ 2: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಾರ್ಮಿಕರ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದೆ. ಸಾರಿಗೆ ಸಂಸ್ಥೆಯ ಮತ್ತು ಖಾಸಗಿ ಸಂಸ್ಥೆಯ ಬಸ್ ಗಳು ಸಂಚರಿಸದೇ ಪ್ರಯಾಣಿಕರು ಪರದಾಡಿದರು,

ಗ್ರಾಮೀಣ ಪ್ರದೇಶದ ವಸತಿ ಬಸ್ ಗಳು ಬೆಳಗ್ಗೆ ನಗರಕ್ಕೆ ಬಂದಿದ್ದರಿಂದ ವಿದ್ಯಾರ್ಥಿಗಳು- ಉದ್ಯೋಗಿಗಳು ನಗರದ ಬಸ್ ನಿಲ್ದಾಣಕ್ಕೆ ಬಂದಿಳಿದು, ನಗರ ಸಾರಿಗೆ ಬಸ್ ಇಲ್ಲದೇ ಪರದಾಡುವಂತಾಯಿತು.[ಕಾರ್ಮಿಕರ ಕಷ್ಟಕ್ಕೆ ಕಣ್ಣೀರು ಹಾಕದ ಬೆಂಗಳೂರು]

ದುಪ್ಪಟ್ಟು ಹಣ ವಸೂಲಿ

ದುಪ್ಪಟ್ಟು ಹಣ ವಸೂಲಿ

ಆಟೋ ಚಾಲಕರ ಸಂಘದವರು ಬೆಂಬಲ ಸೂಚಿಸಿದ್ದರೂ ಬಂದ್ ನ ಲಾಭ ಪಡೆಯಲು ಕೆಲ ಆಟೋ ಚಾಲಕರು ದುಪ್ಪಟ್ಟು ಹಣ ಪಡೆದುಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಂಡರು. ಕೆಲವೆಡೆ ಪೊಲೀಸರು ಮಧ್ಯಪ್ರವೇಶಿಸಿ ನಿಗದಿತ ದರ ತೆಗೆದುಕೊಳ್ಳುವಂತೆ ಚಾಲಕರಿಗೆ ಹೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಟರಾಜ ಸರ್ವೀಸ್

ನಟರಾಜ ಸರ್ವೀಸ್

ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸದಿರುವುದರಿಂದ ವಿದ್ಯಾರ್ಥಿಗಳಿಗೆ ನಡೆದುಕೊಂಡೇ ಶಾಲಾ, ಕಾಲೇಜುಗಳಿಗೆ ತೆರಳಿದರು.

ಕಚೇರಿಗಳು ಖಾಲಿ

ಕಚೇರಿಗಳು ಖಾಲಿ

ಕೆಲ ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆಯಿತ್ತು. ಆದರೂ ಜನರಿಲ್ಲದೇ ಬಿಕೋ ಎನ್ನುತ್ತಿದ್ದ ಸರಕಾರಿ ಕಚೇರಿಗಳಿಗೆ ಪ್ರತಿಭಟನಾಕಾರರು ಬಂದು ಬಂದ್ ಗೆ ಬೆಂಬಲ ಸೂಚಿಸುವಂತೆ ಕೇಳಿದರು.

ವಹಿವಾಟು ಬಂದ್

ವಹಿವಾಟು ಬಂದ್

ಮಾಲ್ ಗಳು, ಪೆಟ್ರೋಲ್ ಪಂಪ್, ಮದ್ಯದ ಅಂಗಡಿಗಳು ಬಂದ್ ಗೆ ಬೆಂಬಲ ಸೂಚಿಸಿ ವಹಿವಾಟು ನಿಲ್ಲಿಸಿದವು.

ಮಾತಿನ ಚಕಮಕಿ

ಮಾತಿನ ಚಕಮಕಿ

ಕೇಂದ್ರ ಸರಕಾರದ ಸಾರಿಗೆ ನೀತಿ ವಿರುದ್ಧದ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದವು, ಕೆಲವರು ಪೊಲಿಸರ ಜತೆಗೆ ಮಾತಿನ ಚಕಮಕಿ ನಡೆಸಿದರು.

ಬನ್ರಪ್ಪಾ ಬನ್ರಪ್ಪಾ...

ಬನ್ರಪ್ಪಾ ಬನ್ರಪ್ಪಾ...

ನಗರದ ಹಳೇ ಬಸ್ ನಿಲ್ದಾಣದಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಅಧಿಕಾರಿ ನಮಾಜಿ, ಮುಷ್ಕರ ಹಿಂಪಡೆದು ಬಸ್ ಸಂಚರಿಸಲು ಅನುಕೂಲ ಮಾಡಿಕೊಡಬೇಕೆಂದು ಸಾರಿಗೆ ನೌಕರರಿಗೆ ಕೇಳಿಕೊಂಡರು.

ನಿಂತವು ಬಸ್ ಗಳು

ನಿಂತವು ಬಸ್ ಗಳು

ಕೆಎಸ್ ಆರ್ ಟಿಸಿ ನೌಕರರೂ ಬಂದ್ ಬೆಂಬಲಿಸಿದ್ದರಿಂದ ಬಸ್ ಗಳನ್ನೆಲ್ಲ ಒಂದು ಕಡೆ ನಿಲ್ಲಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All india strike called by trade unions completed in Hubballi. KSRTC and city transporation stopped service.
Please Wait while comments are loading...