ಹುಬ್ಬಳ್ಳಿ-ಧಾರವಾಡ ನಗರಗಳಿಗೆ ನಿರಂತರ ಕುಡಿಯುವ ನೀರು

Posted By:
Subscribe to Oneindia Kannada

ಹುಬ್ಬಳ್ಳಿ, ಅಕ್ಟೋಬರ್, 28: ದಿನದ 24ಗಂಟೆ ಮತ್ತು ವಾರದ 7ದಿನ ವಾಣಿಜ್ಯ ನಗರ ಹುಬ್ಬಳ್ಳಿ ಹಾಗೂ ಸಾಂಸ್ಕೃತಿಕ ನಗರ ಧಾರವಾಡಕ್ಕೆ ನಿರಂತರವಾಗಿ ನಿರಪೂರೈಸಲು ಹುಬ್ಬಳ್ಳಿ ಧಾರವಾಡ ಮುನ್ಸಿಪಲ್ ಕಾರ್ಪೊರೇಷನ್ ಯೋಜನೆ ರೂಪಿಸಿದೆ.

ವಿಶ್ವಬ್ಯಾಂಕ್ ನೆರವಿನಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, 2020ಕ್ಕೆ ಉಭಯ ನಗರಗಳ ಒಟ್ಟು 67 ವಾರ್ಡ್ ಗಳಿಗೆ 24X7 ನಿರಂತರವಾಗಿ ನೀರು ಪೂರೈಸಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಸಿದ್ದಯ್ಯ ಹಿರೇಮಠ ಗುರುವಾರ (ಅ.27) ತಿಳಿಸಿದರು.

24x7 scheme will ensure surplus water supply in Hubballi and Dharwad

ಗುರುವಾರ ನಗರಕ್ಕೆ ಭೇಟಿ ನೀಡಿದ ವಿಶ್ವಬ್ಯಾಂಕ್ ತಜ್ಞರ ತಂಡ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಪ್ರಗತಿ ಕುರಿತು ಗುರುವಾರ ಚರ್ಚಿಸಿದರು.

ಯೋಜನೆಯ ಮೊದಲ ಹಂತ 2020ಕ್ಕೆ ಕೊನೆಗೊಳ್ಳಲಿದ್ದು, ಒಟ್ಟು 763ಕೊಟಿರೂ. ಹಣ ಯೋಜನೆಗೆ ವಿನಿಯೋಗಿಸಲಾಗುತ್ತಿದೆ. ಇದಕ್ಕಾಗಿ ವಿಶ್ವಬ್ಯಾಂಕ್ ಶೇ.67ರಷ್ಟು, ರಾಜ್ಯ ಸರ್ಕಾರ ಶೇ. 7 ಹಾಗೂ ಪಾಲಿಕೆ ಶೇ. 26ರಷ್ಟು ವೆಚ್ಚ ಭರಿಸಲಿದೆ ಎಂದು ಅವರು ತಿಳಿಸಿದರು.

ಮುಂದಿನ ಎಂಟು ವರ್ಷಗಳ ಕಾಲ ನೀರಿನ ಯೋಜನೆಯ ನಿರ್ವಹಣೆ ಪಾಲಿಕೆ ವ್ಯಾಪ್ತಿಯಲ್ಲೇ ನಡೆಯಲಿದೆ. ಎಂಟು ವರ್ಷಗಳ ನಂತರ ಈ ಪಾಲಿಕೆ ಸ್ವಾಮ್ಯದ ಸಂಸ್ಥೆ ಯೋಜನೆಯ ನಿರ್ವಹಣೆ ಮಾಡಲಿದೆ ಎಂದು ಹಿರೇಮಠ್ ಅವರು ತಿಳಿಸಿದರು.

ಪ್ರಸ್ತುತ ಉಭಯ ನಗರಗಳಿಗೆ 190 ಮಿಲಿಯನ್ ಲೀಟರ್ಸ್ ನೀರು ಪ್ರತಿದಿನ ಪೂರೈಸಲಾಗುತ್ತಿದೆ. ಆದರೆ ವಿಶ್ವಸಂಸ್ಥೆ ಅಭಿಪ್ರಾಯದಂತೆ ದಿನವೊಂದಕ್ಕೆ ಪ್ರತಿ ವ್ಯಕ್ತಿಗೆ 120ರಿಂದ 130 ಲೀ. ಪೂರೈಸಬೇಕಾಗುತ್ತದೆ. ಆದರೆ ಪ್ರಸ್ತುತ ಒಬ್ಬ ವ್ಯಕ್ತಿಗೆ 90ಲೀ. ನೀರು ಪೂರೈಸಲಾಗುತ್ತಿದ.

ಈ ಯೋಜನೆ ಪೂರ್ಣಗೊಂಡ ನಂತರ ಉಭಯ ನಗರಗಳ ಜನರಿಗೆ ನಿರಂತರವಾಗಿ ನೀರು ಪೂರೈಕೆಯಾಗಲಿದೆ ಎಂದು ಮತ್ತು ಮೋಟಾರ್ ಪಂಪ್ ಗಳ ಸೌಲಭ್ಯವನ್ನೂ ಮತ್ತಷ್ಟು ಉತ್ತಮಗೊಳಿಸಲಾಗುವುದು ಎಂದು ಹಿರೇಮಠ ಅವರು ತಿಳಿಸಿದರು.

ಯೋಜನೆ ಸಾಕರಗೊಂಡ ಬಳಿಕ ಸರ್ಕಾರ ಮತ್ತು ಪಾಲಿಕೆ ಎರಡೂ ಒಟ್ಟಿಗೆ ಚರ್ಚಿಸಿ ನೀರನ ದರವನ್ನು ನಿಗದಿಪಡಿಸಲಾಗುವುದು ಎಂದು ಪ್ರತಿ ಮೂರು ವರ್ಷಕ್ಕೊಮ್ಮೆ ದರ ಪರಿಷ್ಕರಣೆ ಮಾಡಲಾಗುವುದು ಎಂದು ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The third component of the 24x7 water supply scheme, which will cover 41 municipal wards, will begin in May 2017, said Hubballi-Dharwad Municipal Corporation (HDMC) Commissioner Siddhalingayya Hiremath on Thursday.
Please Wait while comments are loading...