ಶಕ್ತಿ ಯೋಜನೆಯಿಂದ ಖಾಸಗಿ ಅವರಿಗೆ ತೊಂದರೆ ಆಗಿರುವುದು ನಿಜ- ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಸೆಪ್ಟೆಂಬರ್ 11: ಖಾಸಗಿ ಬಸ್ ಮಾಲೀಕರ ತೊಂದರೆ ನಿವಾರಿಸುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿರೋಧಿಸಿ ಖಾಸಗಿ ವಾಹನ ಬಂದ್ ಮಾಡಲಾಗಿದ್ದು, ಖಾಸಗಿ ಅವರಿಗೆ ತೊಂದರೆ ಆಗಿರುವುದು ನಿಜ. ಬಡ ಜನ ಇರುವುದರಿಂದ ಸರ್ಕಾರ ಗಮನ ಕೊಡಬೇಕು. ಕರ್ನಾಟಕ ರಾಜ್ಯ ಸಾರಿಗೆಗೆ ಕೂಡ ಸರ್ಕಾರ ದುಡ್ಡು ಕೊಡುತ್ತಿಲ್ಲ. ಅದು ಕೂಡ ನಷ್ಟದಲ್ಲಿದೆ. ಅದರ ಬಗ್ಗೆಯೂ ಸರ್ಕಾರ ಗಮನ ಕೊಡಬೇಕು. ಉಚಿತ ಕೊಡುತ್ತಿದ್ದೇವೆ ಎಂದು ಮನಬಂದಂತೆ ನಡೆದುಕೊಳುತ್ತಿದ್ದಾರೆ ಇದು ಸರಿ ಅಲ್ಲಾ ಎಂದರು.

ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷ ಮೈತ್ರಿ ಇನ್ನೂ ಫೈನಲ್ ಆಗಿಲ್ಲ. ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಮೈತ್ರಿ ಅನಿವಾರ್ಯ ಎಂದು ಬಸವರಾಜ ಬೊಮ್ಮಯಿ ಅವರು ಸ್ಥಳೀಯವಾಗಿ ಹೇಳಿರಬಹುದು, ಆದರೆ ನಾನು ಕೇಂದ್ರದಲ್ಲಿ ಮಂತ್ರಿಯಾಗಿ ನಮ್ಮ ಪಕ್ಷದ ವರಿಷ್ಠರು ಹೇಳುವವರೆಗೆ ಈ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ಇನ್ನು G-20 ಭಾರತದ 75 ವರ್ಷದ ಇತಿಹಾಸದಲ್ಲಿ ಬಾರಿ ದೊಡ್ಡ ಮೈಲುಗಲ್ಲು ಆಗಿದ್ದು. ಮುಖ್ಯವಾಗಿ ಭಿನ್ನಾಭಿಪ್ರಾಯ ಬರದಂತೆ ಘೋಷಣೆ ಮಾಡಿದ್ದೆ ಬಹುದೊಡ್ಡ ಸಾಧನೆ. ಭಾರತ ನೇತೃತ್ವವನ್ನು ಇತರ ದೇಶ ಒಪ್ಪುತ್ತಿದೆ ಎನ್ನುವುದರ ಸ್ಪಷ್ಟ ಸಂಕೇತ. ಆಫ್ರಿಕನ್ ಒಕ್ಕೂಟ ಒಗ್ಗೂಡಿಸಲು ಭಾರತದ ಪ್ರಪೋಸಲ್ ಬಂದಾಗ ಇದನ್ನು ಸ್ವೀಕಾರ ಮಾಡಿದ್ದಾರೆ. ಮಧ್ಯ ಪ್ರಾಚ್ಯ ಹೊಸ ಕಾರಿಡಾರ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ, ನಾಯಕರಿಗೆ ದಾರಿದ್ರ್ಯತೆ ಬಂದಿದೆ. ರಾಹುಲ್ ಗಾಂಧಿ ಜಯರಾಮ್ ರಮೇಶ್ ಅವರಿಗೆ ಎಂತಹ ಧರಿದ್ರತೆ ಬಂದಿದೆ ಎಂದರೆ, ಮಳೆ ನೀರು ನಿಂತಿರುವುದನ್ನು ಟ್ವೀಟ್ ಮಾಡುತ್ತಾರೆ. ಇಡೀ ಜಗತ್ತು ಭಾರತವನ್ನು ಹೋಗಳುತ್ತದೆ. ಆದರೆ ಕಾಂಗ್ರೆಸ್ ಮಾತ್ರ ತೆಗಳುತ್ತದೆ. ಇದು ಮಾನಸಿಕ ರೋಗ. ದೇಶಕ್ಕೆ ಒಳ್ಳೆಯದಾದರೆ ಅದನ್ನು ಸಹಿಸೋಕೆ ಆಗದ ಸ್ಥಿತಿಗೆ ಕಾಂಗ್ರೆಸ್ ಅವರು ಬಂದು ತಲುಪಿಸಿದ್ದಾರೆ. ಮೋದಿ ವಿರೋಧ ಮಾಡುವ ಭರದಲ್ಲಿ ದೇಶವನ್ನೇ ವಿರೋಧ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.












Click it and Unblock the Notifications