ಚಾಮರಾಜನಗರ ಜಿಲ್ಲೆಯಲ್ಲಿ ಸೂಕ್ತ ದಾಖಲೆಯಿಲ್ಲದ ₹37,00,000 ಹಣ ಪತ್ತೆ
ಚಾಮರಾಜನಗರ, ಜೂನ್, 17: ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ 37 ಲಕ್ಷ ರೂಪಾಯಿ ಹಣವನ್ನು ಗುಂಡ್ಲುಪೇಟೆ ತಾಲೂಕಿನ ಕೇರಳ ರಸ್ತೆಯ ಮದ್ದೂರು ಚೆಕ್‌ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳದ ಕೋಝಿಕೋಡ್ ನಿವಾಸಿಗಳು ಮತ್ತು ಹೊಟೆಲ್ ಉದ್ಯಮಿಗಳಾದ ಪಿ.ಆರ್.ರಾಹುಲ್(33) ಮತ್ತು ಸಿ.ಕೆ.ತಾಲ್ವಿನ್(33) ಹಣ ಕೊಂಡೋಯ್ಯುತ್ತಿದ್ದವರು.

ಬಕ್ರೀದ್ ಹಿನ್ನೆಲೆಯಲ್ಲಿ ಮದ್ದೂರು ಪೊಲೀಸ್ ಚೆಕ್ ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಕೇರಳಕ್ಕೆ ತೆರಳಲು ಗುಂಡ್ಲುಪೇಟೆ ಕಡೆಯಿಂದ ಬಂದ ಕಾರು(ಎಲ್-57 ವಿ1379) ಇಂಜಿನ್ ಬಳಿ ಲೆದರ್ ಬ್ಯಾಗ್‍ವೊಂದು ಕಂಡು ಬಂದಿತು.
ಬ್ಯಾಗ್‍ನಲ್ಲಿ ಏನಿದೆ ಎಂದು ವಶಕ್ಕೆ ಪಡೆದು ನೋಡಿದಾಗ 20 ಲಕ್ಷ ರೂಪಾಯಿ ಹಣ ಇರುವುದು ಕಂಡು ಬಂದಿತು. ಅನುಮಾನಗೊಂಡು ಪರಿಶೀಲಿಸಿದಾಗ ಹಿಂಬದಿ ಸೀಟಿನ ಮೇಲೆ ಇಟ್ಟಿದ್ದ ಬ್ಯಾಗ್‍ನಲ್ಲೂ 17 ಲಕ್ಷ ಹಣ ಇತ್ತು. ಹಣ ಯಾವುದೆಂದು ವಿಚಾರಿಸಿದಾಗ ಯಾವುದೇ ದಾಖಲೆ ಇರಲಿಲ್ಲ. ನಂತರ ಹಣ ಮತ್ತು ಕಾರನ್ನು ಪೊಲೀಸದು ವಶಪಡಿಸಿಕೊಂಡಿದ್ದಾರೆ. ಇನ್ನು ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications