ಬಂಡೀಪುರಕ್ಕೆ ತೆರಳಿ ಸಹಾಯ ಮಾಡಲು ಇಚ್ಛಿಸುವವರಿಗೆ ಇಲ್ಲಿದೆ ಮಾಹಿತಿ

ಚಾಮರಾಜನಗರ, ಫೆಬ್ರವರಿ 25: ಬಂಡೀಪುರದಲ್ಲಿ ಸುಮಾರು 8 ಸಾವಿರ ಎಕರೆ ಪ್ರದೇಶ ಬೆಂಕಿ ಹೊತ್ತು ಉರಿಯುತ್ತಿದೆ. ಅದನ್ನು ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ವಯಂ ಪ್ರೇರಿತವಾಗಿ ಅನೇಕರು ಬಂದು ಸಹಾಯ ಮಾಡುತ್ತಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿಗೆ ಮತ್ತಷ್ಟು ನುರಿತ ಸ್ವಯಂ ಸೇವಕರ ಅವಶ್ಯಕತೆಯಿದೆ.

ಹಾಗಾಗಿ ಸ್ವಯಂ ಸೇವಕರು, ಸಹಾಯ ಮಾಡುವ ಮನಸ್ಸುಳ್ಳವರು ಅಲ್ಲಿಗೆ ತೆರಳಬಹುದಾಗಿದೆ.ಅಂದಾಜು 100ಕ್ಕೂ ಹೆಚ್ಚು ಸ್ವಯಂ ಸೇವಕರ ಅಗತ್ಯವಿದ್ದು, ಅವರೆಲ್ಲರೂ ಬೆಂಕಿ ಬಿದ್ದ ಪ್ರದೇಶಗಳಿಗೆ ತೆರಳಿ ಸಣ್ಣಪುಟ್ಟ ಸಹಾಯವನ್ನು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಕೈ ಜೋಡಿಸಿಬೇಕು.

ಈಗಾಗಲೇ ಸ್ವಯಂ ಸೇವಕರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿ 600ಕ್ಕೂ ಹೆಚ್ಚು ಜನ ಅಲ್ಲಿ ಕಾರ್ಯುನಿರ್ವಹಿಸುತ್ತಿದ್ದಾರೆ. ಅದರ ಹೊರತಾಗಿಯೂ ಅರಣ್ಯ ಸಿಬ್ಬಂದಿಗೆ ಊಟ, ತಿಂಡಿ, ನೀರನ್ನು ಹಂಚಲು ಸಹ ಮತ್ತಷ್ಟು ಜನರ ಅವಶ್ಯಕತೆ ಇದೆ.

ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ

Volunteer is required in Bandipur

ನಿಮಗೆ ಸಹಾಯ ಮಾಡಬೇಕೆಂಬ ಮನಸ್ಸಿದ್ದರೆ ಈಗಲೇ ನೀವು ನಿಮ್ಮ ಸ್ನೇಹಿತರೊಂದಿಗೆ ಬಂಡೀಪುರ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿಯೇ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು. ಅವರು ನಿಮ್ಮ ಕೆಲಸವೇನು ಎಂಬುದನ್ನು ಗೈಡ್ ಮಾಡಲಿದ್ದಾರೆ. ಇಲ್ಲವಾದರೆ ಈಗಲೇ 9036798010 ( ಓಬಣ್ಣ, ಫಾರೆಸ್ಟ್ ಗಾರ್ಡ್) ಅವರನ್ನು ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+