ಮಹಿಳೆಗೆ ಕಪಾಳಮೋಕ್ಷ: ಕ್ಷಮೆ ಕೇಳಿದ ಸಚಿವ ವಿ.ಸೋಮಣ್ಣ

ಚಾಮರಾಜನಗರ: ಹಕ್ಕುಪತ್ರ ಕೇಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಕ್ಷಮೆಯಾಚನೆ ಮಾಡಿದ್ದಾರೆ.

ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ಕಪಾಳಮೋಕ್ಷ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿತ್ತು. ನಿವೇಶನದ ಹಕ್ಕು ಪತ್ರ ಸಿಗದ ಹಿನ್ನಲೆ ಬೇಸತ್ತ ಕೆಂಪಮ್ಮ ಎಂಬಾಕೆ ಏರು ಧ್ವನಿಯಲ್ಲಿ ಸಚಿವರನ್ನು ಕೇಳಿದ್ದಕ್ಕೆ ಸಚಿವರು ಕಾಪಾಳಮೋಕ್ಷ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಕಪಾಳಕ್ಕೆ ಹೊಡೆಸಿಕೊಂಡರೂ ಸಚಿವರ ಕಾಲಿಗೆ ಬಿದ್ದು ಸಮಸ್ಯೆ ಹೇಳಿಕೊಳ್ಳುವುದು ವೀಡಿಯೋದಲ್ಲಿ ಸೆರೆಯಾಗಿತ್ತು.

ಈ ಘಟನೆ ಹಿನ್ನೆಲೆಯಲ್ಲಿ ಸಚಿವ ಸೋಮಣ್ಣ ವರ್ತನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕಪಾಳ ಮೋಕ್ಷಕ್ಕೆ ಸಂಬಂಧಿಸಿದಂತೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರಣಯ್ ಜೊತೆ ವಿಡಿಯೋ ಮಾಡಿದ್ದ ಕೆಂಪಮ್ಮ, ಪದೇಪದೆ ಸಚಿವರ ಕಾಲಿಗೆ ನಮಸ್ಕರಿಸುತ್ತಿದ್ದಾಗ ಬೇಡ ಎಂದು ತಿಳಿಸಿದರು. ಆ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಭಾವುಕಳಾದೆ, ತಕ್ಷಣವೇ ಸಚಿವರು ಸಮಾಧಾನಪಡಿಸಿ ನಿನಗೆ ವಸತಿ ಕಲ್ಪಿಸಿ ಕೊಡುತ್ತೇನೆಂದು ಸೂಚಿಸಿದರು, ಅವರು ತನಗೆ ಒಳ್ಳೆಯದು ಮಾಡಿದ್ದಾರೆಯೇ ಹೊರತು ಕೆಟ್ಟದು ಮಾಡಿಲ್ಲ ಎಂದು ವಿಡಿಯೋ ಹೇಳಿಕೆಕೊಟ್ಟಿದ್ದರು.

Minister Somanna Apologises After Viral Video Shows Him Slapping Woman

ಘಟನೆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಸೋಮಣ್ಣ, " ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಹೆಣ್ಣು ಮಗಳು ಪದೇಪದೇ ವೇದಿಕೆ ಮೇಲೆ ಬರುತ್ತಿದ್ದಳು. ತಾಯಿ ಎಷ್ಟು ಸರಿ ಬರುತ್ತೀಯಾ ಅಂತ ವಿಚಾರಿಸಿದೆ. ನಿನ್ನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆ ಅಷ್ಟೇ ವಿನಃ ಇನ್ನೇನು ಉದ್ದೇಶ ಇರಲ್ಲಿಲ್ಲ. ನನಗೆ ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವವಿದೆ" ಎಂದು ಸ್ಪಷ್ಟನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+