ಫಲಿತಾಂಶ ಅತಂತ್ರದ ಭೀತಿ : ಸೆನ್ಸೆಕ್ಸ್ ನಲ್ಲಿ ಕುಸಿತ, ಷೇರುಪೇಟೆ ತಲ್ಲಣ
ಮುಂಬೈ, ಡಿಸೆಂಬರ್ 11: ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಹಿನ್ನಲೆಯಲ್ಲಿ ಷೇರುಪೇಟೆಯಲ್ಲಿ ಏರಿಳಿತ ದಿನದ ಆರಂಭದಲ್ಲೇ ಕಾಣಿಸಿಕೊಂಡಿದೆ. ಮಂಗಳವಾರದ ದಿನದ ಆರಂಭಿಕ ವಹಿವಾಟಿನಲ್ಲೇ 350 ಅಂಕಗಳನ್ನು ಕಳೆದುಕೊಂಡಿದೆ.ಇಂದು ಷೇರುಪೇಟೆ ವಹಿವಾಟು ಆರಂಭವಾಗುತ್ತಿದ್ದಂತೆ ಬೆಳಿಗ್ಗೆ 9.40ರ ವೇಳೆಗೆ ಸೆನ್ಸೆಕ್ಸ್ 555.72 ಅಂಕ ಕುಸಿತಗೊಂಡು 35,114.93 ಅಂಶ ಕುಸಿತಕ್ಕೀಡಾಯಿತು.
ಸೋಮವಾರದಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆಯಿಂದ ಷೇರುಪೇಟೆಯಲ್ಲಿ ಭಾರಿ ಕುಸಿತ ಉಂಟಾಗಿತ್ತು. ಇಂದು ಬಿಜೆಪಿ ಆಡಳಿತ ರಾಜ್ಯಗಳಲ್ಲಿನ ಫಲಿತಾಂಶದ ಟ್ರೆಂಡಿಂಗ್ ನಲ್ಲಿ ಅತಂತ್ರ ಸ್ಥಿತಿ ಕಾಣಿಸಿದ್ದರಿಂದ ಕೆಲ ಷೇರುಗಳು ಆರಂಭಿಕ ಕುಸಿತ ಕಂಡಿವೆ.
What disgusting markets. Cannot even fall properly on what is made out as horrible news. So untrustworthy.
— Deepak Shenoy (@deepakshenoy) December 11, 2018
ರುಪಾಯಿ ಮೌಲ್ಯ: ಮಂಗಳವಾರ 72.46 ರು ಪ್ರತಿ ಡಾಲರ್ ನಂತೆ ವಹಿವಾಟು ಆರಂಭವಾಗಿದೆ. ಸೋಮವಾರದಂದು 50 ಪೈಸೆ ಕಳೆದುಕೊಂಡು 71.32ರು ನಂತೆ ಇತ್ತು. ಜಾಗತಿಕ ಮಾರುಕಟ್ಟೆ ವ್ಯತ್ಯಯ, ಊರ್ಜಿತ್ ಪಟೇಲ್ ರಾಜೀನಾಮೆ, ವಿದೇಶಿ ವಿನಿಯಮ ವ್ಯತ್ಯಾಸ ಎಲ್ಲವೂ ಕಾರಣವಾಗಿತ್ತು. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಿ

ಸೆನ್ಸೆಕ್ಸ್ 34,458.86 ಅಂಕಗಳಿಗಳಿಷ್ಟಿದ್ದು, 500 ಅಂಕಗಳಷ್ಟು ಕುಸಿತ ಕಂಡಿದೆ ಎಂದು ತಿಳಿದುಬಂದಿದೆ. ಅಂತೆಯೇ ನಿಫ್ಟಿ 10371.80 ಅಂಕಗಳಷ್ಟಿದ್ದು, 116.70 ಅಂಕಗಳಿಗೆ ಕುಸಿತವಾಗಿದೆ. ಕಳೆದ ಕೆಲ ದಿನಗಳಿಂದಲೂ ಷೇರು ಮಾರುಕಟ್ಟೆ ಕುಸಿಯುತ್ತಲೇ ಇದ್ದು, ಚೇತರಿಕೆ ಕಾಣುವ ಲಕ್ಷಣಗಳಿಲ್ಲ.












Click it and Unblock the Notifications