23 ವಿಮೆ ಯೋಜನೆಗಳನ್ನು ಬಂದ್ ಮಾಡಲಿರುವ LIC
ನವದೆಹಲಿ, ಜನವರಿ 21: ಬಡ್ಡಿದರ ಕುಸಿತ, ಸುಸ್ಥಿರ ರಿಟರ್ನ್ಸ್ ಸಲ್ಲಿಕೆ ಕಾರಣದಿಂದ ಜೀವನ್ ಅಕ್ಷಯ್ ಜನಪ್ರಿಯ ಯೋಜನೆ ಬಂದ್ ಆಗಿರುವುದು ಗೊತ್ತಿರಬಹುದು. ಈಗ ನಾನಾ ಕಾರಣಗಳಿಗಾಗಿ ಸುಮಾರು 23 ವಿಮೆ ಯೋಜನೆಗಳನ್ನು ಬಂದ್ ಮಾಡುತ್ತಿದೆ.
ವಿಮಾ ನಿಯಂತ್ರಣ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸಿ ಈ ಯೋಜನೆಗಳನ್ನು ಫೆಬ್ರವರಿ 1 ರಂದು ಹೊಸದಾಗಿ ಪ್ರಾರಂಭಿಸಲಾಗುವುದು, ಹಾಲಿ ಎಲ್‌ಐಸಿ ಹೊಸ ಜೀವನ್ ಆನಂದ್, ಜೀವನ್ ಉಮಾಂಗ್ ಯೋಜನೆಗಳನ್ನು ಬಂದ್ ಮಾಡಲಾಗುತ್ತದೆ. ಲಿಂಕ್ ಮಾಡದ ವೈಯಕ್ತಿಕ ವಿಮಾ ಯೋಜನೆ, ಯುನಿಟ್ ಲಿಂಕ್ಡ್ ಇಂಡಿವಿಜುವಲ್ ಇನ್ಶುರೆನ್ಸ್ ಪ್ಲಾನ್, ರೈಡರ್ ಪ್ಲಾನ್ ಸೇರಿದೆ.
ಜೀವನ್ ಆನಂದ್, ಜೀವನ್ ಲಕ್ಷ್ಯ, ಜೀವನ್ ಗಯಾ, ಜೀವನ್ ಮಂಗಳ್, ಭಾಗ್ಯಲಕ್ಷ್ಮಿ, ಆಧಾರ್ ಪಿಲ್ಲರ್, ಜೀವಂಗ್ ಉಮಂಗ್, ಸಣ್ಣ ಉಳಿತಾಯ ಹೀಗೆ ಪಟ್ಟಿ ಬೆಳಯಲಿದೆ. ಆದರೆ ಎಲ್ ಐಸಿ ಬಂದ್ ಮಾಡಿರುವ ಯೋಜನೆಗಳನ್ನು ಮತ್ತೊಮ್ಮೆ ಕಡಿಮೆ ಬಡ್ಡಿದರದೊಂದಿಗೆ ಪುನಃ ಮಾರುಕಟ್ಟೆಗೆ ತಂದರೂ ಅಚ್ಚರಿಯೇನಿಲ್ಲ.

ಎಲ್ಐಸಿ ಏಜೆಂಟರುಗಳು ಜನವರಿ 31 ರ ಮೊದಲು ಈ ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಲು ಗ್ರಾಹಕರಿಗೆ ಹೆಚ್ಚೆಚ್ಚು ಸಲಹೆ ನೀಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೊಸ ಯೋಜನೆಗಳಿಂದ ಪ್ರೀಮಿಯಂಗಳು ಹೆಚ್ಚಾಗಲಿದೆ.












Click it and Unblock the Notifications