ಇನ್ಫೋಸಿಸ್‌ ಮಂಡಳಿಯಿಂದ ಕಿರಣ್‌ ಮಜುಂದಾರ್‌ ಶಾ ನಿವೃತ್ತಿ, ಏನಿದು ಬೆಳವಣಿಗೆ?

ನವದೆಹಲಿ, ಮಾರ್ಚ್‌ 23: ಕಿರಣ್ ಮಜುಂದಾರ್-ಶಾ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಿದ್ದಂತೆ ಮಾರ್ಚ್ 22ರಿಂದ ಜಾರಿಗೆ ಬರುವಂತೆ ಇನ್ಫೋಸಿಸ್‌ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರ ಹುದ್ದೆಯಿಂದ ನಿವೃತ್ತರಾಗಿದ್ದಾರೆ ಎಂದು ಹೇಳಿದ್ದಾರೆ.

ಬಯೋಕಾನ್‌ನ ಕಿರಣ್ ಮಜುಂದಾರ್-ಶಾ ಅವರು ಇನ್ಫೋಸಿಸ್ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿ ನಿವೃತ್ತರಾಗಲಿದ್ದಾರೆ ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿಯೂ ತಿಳಿಸಲಾಗಿದೆ. ಇನ್ಫೋಸಿಸ್‌ ಮಂಡಳಿಯು ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಮಾರ್ಚ್ 23, 2023ರಿಂದ ಕಂಪನಿಯ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಡಿ ಸುಂದರಂ ಅವರನ್ನು ನೇಮಿಸಿದೆ.

Kiran Majumdar Shah retires from Infosys board, what is the development

ಶಾ ಅವರ ಅಧಿಕಾರಾವಧಿಯು ಮಾರ್ಚ್ 22, 2023 ರಂದು ಕೊನೆಗೊಂಡಿದೆ. ಕಿರಣ್ ಮಜುಂದಾರ್ ಶಾ ಅವರು 2014 ರಲ್ಲಿ ಇನ್ಫೋಸಿಸ್ ಬೋರ್ಡ್‌ಗೆ ಸ್ವತಂತ್ರ ನಿರ್ದೇಶಕರಾಗಿ ಮತ್ತು 2018ರಲ್ಲಿ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಅವರು ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ ಮತ್ತು ಸಿಎಸ್‌ಆರ್ ಸಮಿತಿಯ ಅಧ್ಯಕ್ಷರಾಗಿ ಮತ್ತು ಅಪಾಯ ನಿರ್ವಹಣೆ ಮತ್ತು ಮಂಡಳಿಯ ಇಎಸ್‌ಜಿ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಇನ್ಫೋಸಿಸ್ ಕುಟುಂಬದ ಇಂತಹ ಅವಿಭಾಜ್ಯ ಸದಸ್ಯರಾಗಿರುವ ಕಿರಣ್ ಅವರಿಗೆ ನಾವು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇವೆ, ಕಳೆದ ವರ್ಷಗಳಲ್ಲಿ ಮಂಡಳಿಗೆ ಅಮೂಲ್ಯವಾದ ಮಾರ್ಗದರ್ಶನ ಮತ್ತು ನಾಯಕತ್ವವನ್ನು ನಾವು ಮೆಚ್ಚಿದ್ದೇವೆ. 2017ರ ಆಗಸ್ಟ್‌ನಲ್ಲಿ ನಾನು ಇನ್ಫೋಸಿಸ್‌ಗೆ ಮರುಸೇರ್ಪಡೆಯಾದಾಗಿನಿಂದ ಅವರು ಮಂಡಳಿಯಲ್ಲಿ ಮಹತ್ವದ ಮಿತ್ರ ಮತ್ತು ಅದ್ಭುತ ಸಹೋದ್ಯೋಗಿಯಾಗಿರುವುದರಿಂದ ನಾನು ಅವರಿಗೆ ವೈಯಕ್ತಿಕವಾಗಿ ತುಂಬಾ ಕೃತಜ್ಞನಾಗಿದ್ದೇನೆ ಎಂದು ಇನ್ಫೋಸಿಸ್‌ನ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ.

Kiran Majumdar Shah retires from Infosys board, what is the development

2014ರಲ್ಲಿ ಕಿರಣ್‌ ಮಜುಂದಾರ್‌ ಶಾ ಅವರು ಇನ್ಫೋಸಿಸ್‌ಗೆ ಸ್ವತಂತ್ರ ನಿರ್ದೇಶಕರಾಗಿ ಆಯ್ಕೆಯಾಗಿದ್ದರು, ಬಳಿಕ 2018ರಲ್ಲಿ ಮಂಡಳಿಯ ಮುಖ್ಯ ಸ್ವತಂತ್ರ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಮಜುಂದಾರ್ ಶಾ ಅವರು ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ ಮತ್ತು ಸಿಎಸ್‌ಆರ್ ಸಮಿತಿಯ ಅಧ್ಯಕ್ಷರಾಗಿ ಮತ್ತು ಮಂಡಳಿಯ ಅಪಾಯ ನಿರ್ವಹಣೆ ಮತ್ತು ಇಎಸ್‌ಜಿ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ ಇನ್ಫೋಸಿಸ್‌ ಕಂಪೆನಿಯು ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ ತನ್ನ ಮಂಡಳಿಯು ಈಗ ಡಿ ಸುಂದರಂ ಅವರನ್ನು ಪ್ರಮುಖ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಿದೆ. ಸುಂದರಂ ಅವರು 2017ರಿಂದ ಇನ್ಫೋಸಿಸ್ ಮಂಡಳಿಯಲ್ಲಿದ್ದಾರೆ ಎಂದು ಇನ್ಫೋಸಿಸ್ ತಿಳಿಸಿದೆ. ಅವರ ಪರಿಣತಿ ಮತ್ತು ಹಣಕಾಸು ಮತ್ತು ಕಾರ್ಯತಂತ್ರದಲ್ಲಿ ಅಪಾರ ಅನುಭವದೊಂದಿಗ, ಸುಂದರಂ ಅವರು ಪ್ರಸ್ತುತ ಆಡಿಟ್ ಸಮಿತಿ, ಅಪಾಯ ನಿರ್ವಹಣಾ ಸಮಿತಿ, ಮಧ್ಯಸ್ಥಗಾರರ ಸಂಬಂಧ ಸಮಿತಿ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ ಮತ್ತು ಸೈಬರ್‌ಸೆಕ್ಯುರಿಟಿ ರಿಸ್ಕ್ ಉಪಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸುಂದರಂ ಅವರನ್ನು ಮುಖ್ಯ ಸ್ವತಂತ್ರ ನಿರ್ದೇಶಕರಾಗಿ ನೇಮಿಸಿದ್ದಕ್ಕಾಗಿ ನಾವು ಅಭಿನಂದಿಸುತ್ತೇವೆ ಮತ್ತು ಇನ್ಫೋಸಿಸ್ ತನ್ನ ಬೆಳವಣಿಗೆ ಮತ್ತು ಪರಿವರ್ತನೆಯ ಪ್ರಯಾಣವನ್ನು ಮುಂದುವರೆಸುತ್ತಿರುವಾಗ ಅವರ ನಿರಂತರ ಒಳನೋಟ ಮತ್ತು ದೃಢವಾದ ಬೆಂಬಲವನ್ನು ಎದುರು ನೋಡುತ್ತಿದ್ದೇವೆ" ಎಂದು ನಿಲೇಕಣಿ ಹೇಳಿದ್ದಾರೆ.

ಕಿರಣ್ ಮಜುಂದಾರ್-ಶಾ ಅವರು ಬಯೋಕಾನ್ ಲಿಮಿಟೆಡ್ ಮತ್ತು ಬಯೋಕಾನ್ ಬಯೋಲಾಜಿಕ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ್ದಾರೆ. ಅವರು ಬೆಂಗಳೂರು ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಮಾಜಿ ಅಧ್ಯಕ್ಷರು ಕೂಡ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+