ಕೂಲರ್ ನಂತರ ಅಗ್ಗದ ಎಸಿ, ಸ್ಮಾರ್ಟ್ ಟಿವಿ ಬಿಡುಗಡೆಗೆ ಮುಖೇಶ್ ಅಂಬಾನಿ ಮಗಳ ಹೊಸ ಪ್ಲಾನ್
ಭಾರತದ ಶ್ರೀಮಂಕ ವ್ಯಕ್ತಿ ಮುಕೇಶ್ ಅಂಬಾನಿ ಏನೇ ಮಾಡಿದ್ರೂ ಸದಾ ಸುದ್ದಿಯಲ್ಲಿರುತ್ತಾರೆ. ಅಂಬಾನಿ ಕುಟುಂಬ ಜನ ಪರ ಕಾರ್ಯಗಳನ್ನು ಮಾಡುತ್ತಾ ಸುದ್ದಿಯಲ್ಲಿ ಇರುತ್ತದೆ. ಭಾರತೀಯ ಟೆಲಿಕಾಮ್ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಸಾಧಿಸಿರುವ ರಿಲಯನ್ಸ್ ಕಂಪನಿಯ ಜಿಯೋ, ಕಂಪನಿ ಈಗ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಮುಂದಾಗಿದೆ.
ಜಿಯೊ ನೆಟ್‌ವರ್ಕ್ ಮೂಲಕ ಟೆಲಿಕಾಮ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಹೊಂದಿರುವ ರಿಲಯನ್ಸ್, ಅತಿ ಶೀಘ್ರದಲ್ಲೇ ಮುಖೇಶ್ ಅಂಬಾನಿ ಪುತ್ರಿ ಇಶಾ ಹೊಸ ಎಸಿ, ಫ್ರಿಡ್ಜ್ ಮತ್ತು ಟಿವಿ ಕಂಪನಿಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಈ ಮೂಲಕ ಹೋಮ್ ಅಪ್ಲೈನ್ಸ್ ಸೆಗ್ಮೆಂಟ್‌ಗೂ ಕಾಲಿಡಲು ಮುಂದಾಗಿದೆ.

ಇಶಾ ಮುಂದಾಳತ್ವದ ಕಂಪನಿ ಯಾವುದು?
ಮುಖೇಶ್ ಅಂಬಾನಿ ಪುತ್ರಿ ಇಶಾ ಹೊಸ ಕಂಪನಿ ಸ್ಥಾಪಿಸಲು ಮುಂದಾಗಿದ್ದಾರೆ. ಇವರು ವೈಜರ್ (Wyzr)ಎಂಬ ಕಂಪನಿಯನ್ನು ಆರಂಭಿಸಿದ್ದು, ಈ ಕಂಪನಿಯ ಅಡಿಯಲ್ಲಿ ಹಲವು ಉಪಯುಕ್ತ ಮನೆ ಬಳಿಕೆ ವಸ್ತುಗಳನ್ನು ಕಡಿಮೆ ದರದಲ್ಲಿ ವಿತರಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಮುಖೇಶ್ ಅಂಬಾನಿ ಪುತ್ರಿ ಇಶಾ ಎಸಿ, ಫ್ರಿಜ್ ಮತ್ತು ಸ್ಮಾರ್ಟ್ ಟಿವಿಯನ್ನು ತರಲು ಯೋಜಿಸಿದ್ದಾರೆ.
ಇದಕ್ಕಾಗಿ ಒನಿಡಾ ಮಾತೃಸಂಸ್ಥೆಯೊಂದಿಗೂ ವೈಜರ್ (Wyzr) ಮಾತುಕತೆ ನಡೆಸುತ್ತಿದೆ. ಇದಲ್ಲದೇ ಸ್ವಂತ ಸ್ಥಾವರ ಸ್ಥಾಪಿಸುವ ಚಿಂತನೆಯಲ್ಲಿದೆ. ಕೆಲ ಸಮಯದ ಹಿಂದೆ ಇಶಾ ಕಂಪನಿ ವೈಜರ್‌ನಿಂದ ಕಡಿಮೆ ಬೆಲೆಯ ಕೂಲರ್ ತರಲಾಗಿತ್ತು. ಈಗ ಈ ಮಾರುಕಟ್ಟೆಗೂ ರಿಲಯನ್ಸ್ ಕಂಪನಿ ಪ್ರವೇಶಿಸಿದಂತಾಗಿದೆ.
ಗೃಹೋಪಯೋಗಿ ವಸ್ತುಗಳು ಭಾರತದಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿವೆ. ಈ ಕಾರಣಕ್ಕಾಗಿಯೇ ಇಶಾ ಅಂಬಾನಿ ಈ ನಿರ್ಧಾರ ಕೈಗೊಂಡಿದ್ದಾರೆ. ಆದಾಗ್ಯೂ, ಪ್ರಸ್ತುತ ಕಂಪನಿಯು ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. ಒಂದು ವೇಳೆ ಇಶಾ ಮುಂದಾಳತ್ವದ ಕಂಪನಿ ಇದನ್ನು ಮಾಡುವಲ್ಲಿ ಯಶಸ್ವಿ ಆದಲ್ಲಿ ಬೇರೆ ಬ್ರ್ಯಾಂಡ್‌ಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವರದಿ ಹೇಳುತ್ತದೆ.
ಕೂಲರ್ ಬೆಲೆ ಎಷ್ಟು?
Wyzr ಕೂಲರ್ ಖರೀದಿಸಲು ಸುಮಾರು 12 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ. ವೈಜರ್ ಕಂಪನಿಯು ಅನೇಕ ಕೂಲರ್‌ಗಳನ್ನು ಕೈ ಗೆಟಕುವ ದರದಲ್ಲಿ ರಿಲೀಸ್ ಮಾಡಿದೆ. 11,490 ರಿಂದ 16,990 ರೂ.ವರೆಗಿನ ಕೂಲರ್‌ಗಳಿದ್ದವು.
ಇನ್ನು ಇಶಾ ಕಂಪನಿಯ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಉತ್ಪನಗಳು ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಪಪ್ರಭುತ್ವ ಮೆರೆಯಲಿದೆ.












Click it and Unblock the Notifications