EPFO: ಇಪಿಎಫ್ ವರ್ಗಾವಣೆ ಈಗ ಇನ್ನೂ ಸುಲಭ; ಹೊಸ ನಿಯಮ ಜಾರಿಗೆ
ಇಪಿಎಫ್‌ಒ ಸದಸ್ಯರಿಗಾಗಿ ಹೊಸ ನಿಯಮ ಜಾರಿಯಾಗಿದ್ದು ಈಗ ಸದಸ್ಯರು ವೈಯಕ್ತಿಕ ವಿವರಗಳನ್ನು ಬದಲಾಯಿಸುವುದನ್ನು ಸುಲಭವಾಗಿಸಿದೆ. ಉದ್ಯೋಗ ನೀಡಿದ ಕಂಪನಿಯ ಹಸ್ತಕ್ಷೇಪವಿಲ್ಲದೆ ಆನ್‌ಲೈನಲ್‌ನಲ್ಲಿ ಇಪಿಎಫ್ ಅನ್ನುವ ವರ್ಗಾಯಿಸಲು ಅವಕಾಶ ನೀಡಲಾಗಿದೆ.
ಇಪಿಎಫ್ಒ ಸಂಸ್ಥೆಯ 7.6 ಕೋಟಿಗೂ ಹೆಚ್ಚು ಸದಸ್ಯರಯ ಈಗ ತಮ್ಮ ಹೆಸರು, ಜನ್ಮ ದಿನಾಂಕ ಸೇರಿದಂತೆ ಹಲವು ವೈಯಕ್ತಿಕ ವಿವರಗಳನ್ನು ಪರಿಶೀಲನೆ ಅಥವಾ ಇಪಿಎಫ್‌ಒ ಅನುಮೋದನೆಯಿಲ್ಲದೆ ಆನ್‌ಲೈನ್‌ನಲ್ಲಿ ಬದಲಾಯಿಸಬಹುದಾಗಿದೆ. ಶನಿವಾರದಿಂದ ಈ ಹೊಸ ಸೌಲಭ್ಯ ಜಾರಿಗೆ ಬಂದಿದೆ.

ಇ-ಕೆವೈಸಿ ಇಪಿಎಫ್ ಖಾತೆಗಳನ್ನು ಹೊಂದಿರುವ ನೌಕರರ ಇಪಿಎಫ್‌ಒ ಸದಸ್ಯರು ತಮ್ಮ ಇಪಿಎಫ್ ವರ್ಗಾವಣೆ ಹಕ್ಕುಗಳನ್ನು ಆಧಾರ್ ಒಟಿಪಿ ಮೂಲಕ ಆನ್‌ಲೈನ್‌ನಲ್ಲಿ ನೇರವಾಗಿ ತಾವು ಕೆಲಸ ಮಾಡುವ ಅಥವಾ ಮಾಡಿದ ಕಂಪನಿಯ ಹಸ್ತಕ್ಷೇಪದ ಅಗತ್ಯವಿಲ್ಲದೆ ಸಲ್ಲಿಸಲು ಕೂಡ ಅವಕಾಶವಿರುತ್ತದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ ಎರಡು ಹೊಸ ಸೇವೆಗಳನ್ನು ಪರಿಚಯಿಸಿದ್ದಾರೆ. ಸದಸ್ಯರು ಸಲ್ಲಿಸುವ ಸುಮಾರು 27% ದೂರುಗಳು ಸದಸ್ಯರ ವೈಯಕ್ತಿಕ ವಿವರ ಮತ್ತು ಕೆವೈಸಿಗೆ ಸಮಸ್ಯೆಗೆ ಸಂಬಂಧಿಸಿದ್ದಾಗಿದ್ದು ಹೊಸ ನಿಯಮ ಜಾರಿಗೆ ಬಂದ ನಂತರ ಸಮಸ್ಯೆ ಕಡಿಮೆಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೆಲಸ ನೀಡುವ ಕಂಪನಿಗಳ ಹೊರೆ ಕೂಡ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ವೈಯಕ್ತಿಕ ವಿವರ ಬದಲಾವಣೆ ಸುಲಭ
ಇನ್ನು ಮುಂದೆ ಇಪಿಎಫ್‌ಒ ಪೋರ್ಟಲ್‌ನಲ್ಲಿ ತಿದ್ದುಪಡಿ ಪ್ರಕ್ರಿಯೆಯನ್ನು ಸರಳವಾಗಿಸಿದೆ. ಖಾತೆದಾರರು ತಮ್ಮ ಹೆಸರು, ಜನ್ಮ ದಿನಾಂಕ, ಲಿಂಗ, ರಾಷ್ಟ್ರೀಯತೆ, ತಂದೆ, ತಾಯಿ ಹೆಸರು, ವಿವಾಹ, ಸಂಗಾತಿಯ ಹೆಸರು, ಸೇರ್ಪಡೆ ದಿನಾಂಕ ಮತ್ತು ಮುಕ್ತಾಯದ ದಿನಾಂಕದಂತಹ ವೈಯಕ್ತಿಕ ವಿವರಗಳ ಸಾಮಾನ್ಯ ತಪ್ಪುಗಳನ್ನು ಕೆಲಸ ಮಾಡುವ ಕಂಪನಿಯ ಪರಿಶೀಲನೆ ಅಥವಾ ಇಪಿಎಫ್‌ಒ ಅನುಮೋದನೆಯಿಲ್ಲದೆ ಸರಿಪಡಿಸಲು ಉದ್ಯೋಗಿಗಳು ಅವಕಾಶ ಹೊಂದಿರುತ್ತಾರೆ.
ಅಕ್ಟೋಬರ್ 1, 2017ರ ಬಳಿಕ ಆಧಾರ್ ಲಿಂಕ್ ಕಡ್ಡಾಯಗೊಳಿಸಿದ ಬಳಿಕ ಯುಎಎನ್ ಪಡೆದಿರುವ ಸದಸ್ಯರಿಗೆ ಈ ಸೌಲಭ್ಯ ಲಭ್ಯವಿರುತ್ತದೆ. ಅಕ್ಟೋಬರ್ 1, 2017ರ ಮೊದಲು ಯುಎಎನ್ ಪಡೆದಿದ್ದರೆ ಕಂಪನಿಗಳು ಇಪಿಎಫ್‌ಒ ಅನುಮೋದನೆಯಿಲ್ಲದೆ ವಿವರಗಳನ್ನು ಸರಿಮಾಡಬಹುದು.
ಆಧಾರ್ ಸಂಖ್ಯೆ ಜೊತೆ ಯುಎಎನ್ ಲಿಂಕ್ ಮಾಡದಿದ್ದರೆ ಮಾತ್ರ ಯಾವುದೇ ತಿದ್ದುಪಡಿಯನ್ನು ಬೌತಿಕವಾಗಿ ಉದ್ಯೋಗದಾತರಿಗೆ ಸಲ್ಲಿಸಬೇಕಾಗುತ್ತದೆ. ಪರಿಶೀಲನೆ ಬಳಿಕ ಅನುಮೋದನೆಗಾಗಿ ಇಪಿಎಫ್‌ಒಗೆ ಸಲ್ಲಿಸಬೇಕಾಗುತ್ತದೆ.
ಉದ್ಯೋಗಕ್ಕೆ ಸೇರುವ ಸಮಯದಲ್ಲಿ ಯುಎಎಎನ್ ನೋಂದಣಿಯನ್ನು ಕಂಪನಿಗಳು ಮಾಡುತ್ತವೆ. ಅನೇಕ ಉದ್ಯೋಗಿಗಳ ನೋಂದಣಿ ಸಮಯದಲ್ಲಿ ವೈಯಕ್ತಿತ ಮಾಹಿತಿಗಳನ್ನು ಕೆಲವು ತಪ್ಪುಗಳು ಆಗಿರುತ್ತವೆ. ಈ ತಪ್ಪುಗಳನ್ನು ಸರಿಪಡಿಸಲು ಅಗತ್ಯ ದಾಖಲೆಗಳ ಜೊತೆ ಆನ್‌ಲೈನ್‌ನಲ್ಲಿ ಮನವಿ ಮಾಡಬೇಕಿತ್ತು, ಬದಲಾವಣೆ ಮಾಡಲು ಮೊದಲು ಮನವಿಯನ್ನು ಕಂಪನಿಗಳು ಪರಿಶೀಲನೆ ಮಾಡಬೇಕು. ನಂತರ ಅನುಮೋದನೆಗಾಗಿ ಇಪಿಎಫ್‌ಒಗೆ ರವಾನಿಸಬೇಕಿತ್ತು, ಇದನ್ನು ಜಂಟಿ ಘೋಷಣೆ ಎಂದು ಕರೆಯಲಾಗುತ್ತಿತ್ತು.
ಇಪಿಎಫ್‌ಒಗೆ ದಿನನಿತ್ಯ ಸಾವಿರಾರು ತಿದ್ದುಪಡಿ ಮನವಿಗಳು ಬರುತ್ತಿದ್ದವು ಈಗ ಈ ಸಮಸ್ಯೆಯನ್ನು ಸರಿಪಡಿಸುವ ಸಲುವಾಗಿ ಹೊಸ ನಿಯಮ ಜಾರಿ ಮಾಡಲಾಗಿದೆ.












Click it and Unblock the Notifications