Bidar South Constituency : ಜೆಡಿಎಸ್‌ಗೆ ಅಳಿವು-ಉಳಿವಿನ ಕ್ಷೇತ್ರ? ಕಮಲ-ದಳಕ್ಕೆ ಟೈಟ್ ಫೈಟ್.ಇಲ್ಲಿದೆ ವರದಿ
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು ಬಂಡೆಪ್ಪ ಖಾಶೆಂಪುರ್. ಆದರೆ ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಟೈಟ್ ಫೈಟ್ ಏರ್ಪಡುವ ಸಾದ್ಯತೆ ಇದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ? ಎಂಬುದು ಕುತೂಹಲದ ವಿಚಾರವಾಗಿದೆ.
ಬೆಂಗಳೂರು,ಫೆಬ್ರವರಿ21: ಬೀದರ್ ಜಿಲ್ಲೆಯ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ಸಂಪೂರ್ಣ ಹಳ್ಳಿಗಳಿಂದ ಕೂಡಿರುವ ಕ್ಷೇತ್ರವಾಗಿದ್ದು, ಸದ್ಯ ಜೆಡಿಎಸ್ ತೆಕ್ಕೆಯಲ್ಲಿದೆ. 2008 ರಲ್ಲಿ ಹುಮನಾಬಾದ್ ಕ್ಷೇತ್ರದಿಂದ ಬೇರ್ಪಟ್ಟು ಹೊಸ ಕ್ಷೇತ್ರವಾಗಿ ಉದಯಿಸಿದ್ದೆ ಬೀದರ್ ದಕ್ಷಿಣ ಕ್ಷೇತ್ರ.
ಇದುವರೆಗೂ ಬೀದರ್ ದಕ್ಷಿಣದಲ್ಲಿ ಮೂರು ಚುನಾವಣೆಗಳು ನಡೆದಿದ್ದು, ಎರಡು ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆದ್ದಿದ್ದರೆ, ಒಂದು ಬಾರಿ ಕರ್ನಾಟಕ ಮಕ್ಕಳ ಪಕ್ಷ ಗೆದ್ದಿದೆ. ಇನ್ನೂ ಇದರುವೆಗೂ ಕಾಂಗ್ರೆಸ್ ಹಾಗೂ ಬಿಜೆಪಿ ಖಾತಯನ್ನ ತೆರೆದಿಲ್ಲ. ಆದರೆ ಈ ಬಾರಿ ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪುರ್ ಹಾಗೂ ಬಿಜೆಪಿಯ ಡಾ. ಶೈಲೆಂದ್ರ ಬೆಲ್ದಾಳೆ ಅವರ ನಡುವೆ ಜಿಲ್ಲಾಜಿದ್ದಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ.

ಜೆಡಿಎಸ್‌ನ ಅಳಿವು ಉಳಿವಿನ ಪ್ರಶ್ನೆಯಾಗಿರುವ ಬೀದರ್ ದಕ್ಷಿಣ
ಉತ್ತರ ಕರ್ನಾಟಕದಲ್ಲಿ ಇದು ಜೆಡಿಎಸ್‌ಗೆ ಅಳಿವು-ಉಳಿವಿನ ಕ್ಷೇತ್ರ. ಬೀದರ್ ಜಿಲ್ಲೆಯಲ್ಲಿ ಜೆಡಿಎಸ್ ನೆಚ್ಚಿದ ಏಕೈಕ ಕ್ಷೇತ್ರ ಬೀದರ್ ದಕ್ಷಿಣ. ಶಾಸಕ ಬಂಡೆಪ್ಪ ಖಾಶೆಂಪುರ ಮತ್ತೊಮ್ಮೆ ಜೆಡಿಎಸ್ನಿಂದ ಸ್ಪರ್ಧಿಸಲಿದ್ದರೆ, ಕಳೆದ ಬಾರಿ ಜೆಡಿಎಸ್‌ಗೆ ಪ್ರಬಲ ಸ್ಪರ್ಧೆ ನೀಡಿದ್ದ ಬಿಜೆಪಿಯ ಡಾ ಶೈಲೆಂದ್ರ ಬೆಲ್ದಾಳೆ ಮತ್ತೆ ಬಿಜೆಪಿ ಟಿಕೆಟ್ ನೀಡಲಿದ್ದು, ಜಿಜೆಪಿ ಹಾಗೂ ಜೆಡಿಎಸ್ ನೇರಾನೇರ ಫೈಟ್ ಎದುರಾಗಲಿದೆ.
ಹಾಲಿ ಶಾಸಕ ಬಂಡೆಪ್ಪ ಖಾಶೆಂಪುರ ಕ್ಷೇತ್ರದಲ್ಲಿ ಉತ್ತಮ ನೆಟ್ವರ್ಕ್ ಹೊಂದಿದ್ದು, ಮತ್ತೊಮ್ಮೆ ಗೆಲ್ಲುವ ತವಕದಲ್ಲಿ ಪ್ರಚಾರಕಾರ್ಯ ನಡೆಸಿದ್ದಾರೆ. ಕಳೆದ ಬಾರಿ ಸೋತು ಎರಡನೇ ಸ್ಥಾನದಲ್ಲಿದ್ದ ಬಿಜೆಪಿಯ ಡಾ ಶೈಲೇಂದ್ರ ಬೆಲ್ದಾಳೆ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗುವುದರಲ್ಲಿ ಸಂಶಯವೇ ಇಲ್ಲ. ಸೋತರೂ ಕೆಎಸ್ಐಐಡಿಸಿ ನಿಗಮದ ಅಧ್ಯಕ್ಷರಾಗಿ ಕ್ಷೇತ್ರದಲ್ಲಿ ನಿರಂತರ ಸುತ್ತಾಡುತ್ತಾ ಸಂಘಟನೆಯಲ್ಲಿ ತೊಡಗಿದ್ದು, ಈ ಬಾರಿ ಶತಾಯ ಗತಾಯ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕಮಲವನ್ನು ಅರಳಿಸುವ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ಬೀದರ್ ದಕ್ಷಿಣದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಬಾರೀ ಫೈಪೋಟಿ
ಇನ್ನೂ ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮಾಜಿ ಶಾಸಕ ಅಶೋಕ್ ಖೇಣಿ ಮೂರನೇ ಸ್ಥಾನವನ್ನ ಪಡೆದುಕೊಂಡಿದ್ದರು. ಆದರೆ 2023 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದು, ಇತ್ತ ಮಾಜಿ ಸಿಎಂ ಧರಂ ಸಿಂಗ್ ಅವರ ಅಳಿಯ ಚಂದ್ರಾಸಿಂಗ್ ಕೂಡ ಕಾಂಗ್ರೆಸ್ ಟಿಕೆಟ್ ಗಾಗಿ ಕಣ್ಣಿಟ್ಟಿದ್ದಾರೆ. ಅದು ಅಲ್ಲದೇ ಸ್ಥಳೀಯ ಕಾಂಗ್ರೆಸ್ ಮುಖಂಡರು ಟಿಕೆಟ್ ಗಾಗಿ ಅರ್ಜಿಯನ್ನ ಸಲ್ಲಿಸಿದ್ದಾರೆ. ಹೀಗಾಗಿ ಬೀದರ್ ದಕ್ಷಿಣದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಭ್ಯರ್ಥಿಗಳ ಪಟ್ಟಿಯ ಬಿಡುಗಡೆಯ ನಂತರವೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೆಂದು ಸ್ಪಷ್ಟವಾಗಲಿದೆ.

ಬಿಜೆಪಿಯ ಚುನಾವಣಾ ರಣತಂತ್ರ ಚುರುಕು
ಈ ಬಾರಿಯ ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತರುವ ಹಿನ್ನೆಲೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಚುನಾವಣಾ ರಣತಂತ್ರ ಚುರುಕುಗೊಂಡಿದೆ. ಜೆಡಿಎಸ್ ಹಾಲಿ ಶಾಸಕ ಬಂಡೆಪ್ಪ ಖಾಶೆಂಪುರ ಅವರನ್ನು ಸೋಲಿಸಿ ಕ್ಷೇತ್ರದಲ್ಲಿ ಕಮಲ ಅರಳಿಸಬೇಕೆಂಬ ಸಂಕಲ್ಪತೊಟ್ಟಿರುವ ಬಿಜೆಪಿ ನಾಯಕರು ಹಲವು ಕಾರ್ಯತಂತ್ರವನ್ನ ರೂಪಿಸಿದ್ದಾರೆ ಎನ್ನಲಾಗಿದೆ.
ತಮ್ಮ ಪಕ್ಷ ಸಂಘಟನೆ ಬಲಗೊಳಿಸಲು ಕಾರ್ಯಕರ್ತರ ಸತತ ಪರಿಶ್ರಮದಿಂದ ನಾವು ಕ್ಷೇತ್ರವನ್ನ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಪ್ಲಾನ್ ರೂಪಿಸಿಕೊಂಡಿದ್ದಾರೆ. ಇನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳ[ನ್ನ ಕ್ಷೇತ್ರ ಪ್ರತಿ ಮನೆ ಮನೆಗಳಿಗೂ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಮಾಡುವ ಸಿದ್ದತೆ ನಡೆಸಿದೆ. ಇನ್ನೂ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಹಾಲಿ ಶಾಸಕ ಬಂಡೆಪ್ಪ ಖಾಶೆಂಪುರ 53,347 ಮತ ಪಡೆದು ಗೆಲುವು ಸಾಧಿಸಿದ್ದರು, ಬಿಜೆಪಿಯ ಡಾ ಶೈಲೇಂದ್ರ ಬೆಲ್ದಾಳೆ 41,239 ಮತ ಪಡೆದು ಸೋತಿದ್ದರೆ, ಕಾಂಗ್ರೆಸ್‌ನ ಅಶೋಕ್ ಖೇಣಿ 34 ಸಾವಿರ ಮತಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದರು.t

ಬೀದರ್ ದಕ್ಷಿಣದಲ್ಲಿ ಎಎಪಿಯಿಂದ ಕಣಕ್ಕೆ ಯಾರು.?
ಬೀದರ್ ದಕ್ಷಿಣದಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷದಿಂದ ಕೆಲವು ಬದಲಾವಣೆಗಳಾಗುವ ಸಾದ್ಯತೆ ಇದೆ. ಮಾಜಿ ಸಚಿವ ಮಿರಾಜುದ್ದಿನ್ ಪಟೇಲ್ ಸಹೋದರ ನಸೀಮ್ ಪಟೇಲ್ ಈ ಬಾರಿ ಎಎಪಿಯಿಂದ ಇಲ್ಲಿ ಕಣಕ್ಕಿಳಿಯಲ್ಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದ ನಸೀಮ್ ಪಟೇಲ್ ಜೆಡಿಎಸ್ ತೊರೆದು ಆಮ್ ಆದ್ಮಿ ಪಾರ್ಟಿಯನ್ನ ಸೇರ್ಪಡೆಯಾಗಿದ್ದು, ಬೀದರ್ ದಕ್ಷಿಣದಿಂದ ಸ್ಪರ್ಧೆ ಮಾಡುವ ಸಾದ್ಯತೆ ಇದೆ. ನಸೀರ್ ಪಟೇಲ್ ಮುಸ್ಲಿಂ ಸಮುದಾಯದವರಾಗಿರುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಮತಗಳಿಗೆ ಕೈ ಹಾಕಿ, ಬಿಜೆಪಿಗೆ ಸಹಾಯ ಮಾಡೋ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications