ದರ್ಶನ್‌ ಬಗ್ಗೆ ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಬಂಧನ ವಾಗಿದೆ. ಈ ಸುದ್ದಿ ಸದ್ಯ ರಾಜ್ಯದಲ್ಲಿ ಕಿಚ್ಚು ಹಚ್ಚಿದೆ. ಎಲ್ಲಿ ನೋಡಿದರೂ ಇದೇ ಸುದ್ದಿಯ ಚರ್ಚೆ. ಈ ಎಲ್ಲದರ ಮಧ್ಯೆ ಅವರೊಬ್ಬರು ಇದ್ದಿದ್ದರೆ ಏನು ಬರೆಯುತ್ತಿದ್ದರು ಎಂದು ಲೇಖಕ ಅಭಿಮಾನಿಗಳು ಕುತೂಹಲ ಮೂಡಿಸಿದ್ದಾರೆ.

ಅಂಡರ್‌ ವರ್ಲ್ಡ್‌ ಅನ್ನು ರಾಜ್ಯದ ಜನರಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ವತ್ರಕರ್ತರಲ್ಲಿ ರವಿ ಬೆಳೆಗೆರೆ ಸಹ ಒಬ್ಬರು. ಕಪ್ಪು ಸುಂದರಿಯನ್ನು ರಾಜ್ಯಕ್ಕೆ ಪರಿಚಯಿಸಿ, ತಮ್ಮ ಬರವಣಿಗೆಯ ಗೀಳನ್ನು ಜನರಿಗೆ ಹೆಚ್ಚಿದ್ದರು. ಹಾಯ್‌ ಬೆಂಗಳೂರು ಪತ್ರಿಕೆ ಪ್ರಕಟವಾಗುತ್ತಿದ್ದಂತೆ ಭರ್ಜರಿ ಸೇಲ್ ಆಗುತ್ತಿತ್ತು. ಇದಕ್ಕೆ ಅವರ ಬರವಣಿಗೆ ಹಾಗೂ ಅವರು ನೀಡುತ್ತಿದ್ದ ಶೀರ್ಷಿಕೆ ಕಾರಣ.

What did famous journalist Ravi Belgere say about kannada actor Darshan

ಅಂದೇ ಬೆಳಗೆರೆ ನೀಡಿದ್ದರು ಕಿವಿ ಮಾತು

ರವಿ ಬೆಳಗೆರೆ ಇಹ ಲೋಕ ತ್ಯಜಿಸಿ ವರ್ಷಗಳೇ ಕಳೆದಿವೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಅವರೊಬ್ಬರು ಇದ್ದಿದ್ದರೇ ಹೇಗೆ ಇರುತ್ತಿತ್ತು ಎಂದು ಅಭಿಮಾನಿಗಳು ಊಹೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಅಲ್ಲದೆ ಬಹಳ ವರ್ಷಗಳ ಹಿಂದೆ ದರ್ಶನ್‌ ಬಗ್ಗೆ ರವಿ ಬೆಳಗೆರೆ ಮಾತನಾಡಿದ್ದು ಸಖತ್‌ ವೈರಲ್‌ ಆಗುತ್ತಿದೆ.

ಪ್ರಿಯ ವೀಕ್ಷಕರೆ ಎಂದು ರಾತ್ರಿ ತಪ್ಪದೇ ಬರುತ್ತಿದ್ದ ರವಿ ಬೆಳಗೆರೆ ಮುಂದಾಳತ್ವದ ಕಾರ್ಯಕ್ರಮ, ಸಖತ್ ಫೇಮಸ್‌. ಇವರ ವೈಸ್‌ ಹಾಗೂ ನರೇಶನ್‌ ಕೇಳಲು ಜನರ ಕಾದು ಕುಳಿತ್ತಿದ್ದರು. ರವಿ ಅವರ ಹೇಳುವ ಧಾಟಿ, ಅಬ್ಬಾ.. ಇವರು ಹೇಳುತ್ತಿದ್ದರೆ ಘಟನೆ ನಡೆದ ನೈಜ ಚಿತ್ರಣ ನಮ್ಮ ಕಣ್ಣು ಮುಂದೆ ಬಂದಂತೆ ಕಾಣುತ್ತಿತ್ತು. ಕ್ರೈಮ್‌ನ್ನು ಹೇಳುವ ಇವರ ಸ್ಟೈಲ್‌ಗೆ ಅಭಿಮಾನಿಗಳು ಫುಲ್‌ ಫಿದಾ.

ರವಿ ಬೆಳಗೆರೆ ಹೇಳಿದ್ದೇನು?

ರಾಜ್ಯದಲ್ಲಿ ಯಾವುದೇ ಒಂದು ಅಪರಾಧ ಸುದ್ದಿ ನಡೆದರೂ, ರವಿ ಬೆಳಗೆರೆ ನೆನಪಾಗದೇ ಇರದು. ಇನ್ನು ದರ್ಶನ್‌ ಪ್ರಕರಣದಲ್ಲಿ ಇವರು ನೆನಪು ಆಗದೇ ಇರುತ್ತಾ. ಇಂತಹದ್ದೇ ಒಂದು ಪ್ರಕರಣ ಈ ಹಿಂದೆ ನಡೆದಿತ್ತು. ಆಗ ರವಿ ಬೆಳಗೆರೆ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ಆ ಒಂದು ಕ್ಲೀಪ್‌ ಈಗ ಸಖತ್ ವೈರಲ್ ಆಗುತ್ತಿದೆ.

What did famous journalist Ravi Belgere say about kannada actor Darshan

ಹ್ಯಾಂಡ್‌ಸಮ್‌.. ಗುಡ್‌ ಲುಕ್ಕಿಂಗ್ ಬಾಯ್‌ ಎಂದೇ ತಮ್ಮ ಖದರ್‌ನಲ್ಲಿ ಸ್ಟಾರ್ಟ್‌ ಮಾಡುವ ರವಿ ಬೆಳಗೆರೆ, ಕ್ರಮೇಣ ದರ್ಶನ್‌ ಅವರ ವಿಶ್ವರೂಪ ದರ್ಶನವನ್ನು ಮಾಡಿಸಿದ್ದರು. ಅದು ಸಹ ತಮ್ಮದೇ ಸ್ಟೈಲ್‌ನಲ್ಲಿ, ಈ ಹುಡುಗನಿಗೆ ಯಾಕ್ರಿ ಹೆಡ್ತಿಯನ್ನು ಹೊಡೆಯುವ ಚಟಾ.. ಬಡಬಾರದ ಕಾಲದಲ್ಲಿ, ಬರಬಾರದ ರೀತಿಯಲ್ಲಿ, ಬರಬಾರದು ದುಡ್ಡು ಬಂದರೆ ಹೀಗೆ ಆಗುತ್ತೆ ಎಂದು ಹೇಳಿದ್ದರು.

ಆಗಲೇ ದರ್ಶನ್‌ ಅವರಿಗೆ ಪರ್ಸನಲ್‌ ಲೈಫನ್ನು ಚೆನ್ನಾಗಿ ಇಟ್ಟುಕೊಳ್ಳುವಂತೆ ರವಿ ಬೆಳಗೆರೆ ಸಲಹೆ ನೀಡಿದ್ದರು. ಅಲ್ಲದೆ ನೀನು ಯಾರ ಜೊತೆಗಾದ್ರೂ ಇರು ಮೊದ್ಲು ಸೆಟ್ಲ್‌ಮೆಂಟ್ ಮಾಡಿಕೊಂಡು ಬಿಡು ಎಂದು ರವಿ ತಿಳಿಸಿದ್ದರು.

ರವಿ ಬೆಳಗೆರೆಯ ಈ ವಿಡಿಯೋ ಈಗ ಸಖತ್‌ ವೈರಲ್ ಆಗುತ್ತಿದೆ. ಅಲ್ಲದೆ ಕಂಚಿನ ಕಂಠವನ್ನು ಅಭಿಮಾನಿಗಳು ಮಿಸ್‌ ಮಾಡ್ಕೊಳ್ತಾ ಇರುವುದಂತೂ ಸುಳ್ಳು ಅಲ್ಲವೇ ಅಲ್ಲ.

ನಟ ದರ್ಶನ ಸದ್ಯ ತನ್ನ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನ್ನುಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿದ್ದಾನೆ. ಪ್ರೇಯಸಿ ಪವಿತ್ರಾ ಗೌಡ್‌ರಿಗೆ ಕೆಟ್ಟದಾಗಿ ಮೆಸೇಜ್‌ ಮಾಡಿದಕ್ಕೆ, ಚಿತ್ರದುರ್ಗದಿಂದ ಅಭಿಮಾನಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವ ಆರೋಪವನ್ನು ದರ್ಶನ್‌ ಹೊತ್ತಿದ್ದಾರೆ. ಈ ಸಂಬಂಧ ವಿಚಾರಣೆ ನಡೆಯುತ್ತಿದೆ.

ದರ್ಶನ್‌ ಯಾವ ಚಿತ್ರವನ್ನು ರವಿ ನೋಡಿದ್ದಾರೆ ಗೊತ್ತಾ?

ಮತ್ತೆ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ವೈರಲ್ ಆಗುತ್ತಿದೆ. ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಬೆಳಗೆರೆ ವಾರಕ್ಕೊಂದು ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಒಂದು ಟೈಮ್‌ ದರ್ಶನ್‌ ವಿಚಾರವನ್ನು ಮಾತನಾಡಿದ್ದಾರೆ. ನನ್ನ ಪ್ರೀತಿಯ ರಾಮು ಚಿತ್ರವನ್ನು ಒಂಚೂರು ನೋಡಿದ್ದು ಬಿಟ್ಟರೆ, ಬೇರೆ ಯಾವುದೇ ಸಿನಿಮಾ ನೋಡಿಲ್ಲ ಎಂದಿದ್ದಾರೆ.

ನಟ ದರ್ಶನ್‌ಗೆ ಏನಾಗಿದೆ ಗೊತ್ತಾಗುತ್ತಿಲ್ಲ. ಸುರಸುಂದರ ನಟನಿಗೆ ಒಳ್ಳೆಯ ಮಾರ್ಕೆಟ್‌ ಬೇರೆ ಇದೆ. ಒಳ್ಳೆಯ ಜೀವನವನ್ನು ಬಿಟ್ಟು ಪವಿತ್ರಾ ಗೌಡ ಅಂತೆ, ಆಯಮ್ಮನ ಜೊತೆಗಿರ್ತಾನೆ. ಒಂದು ಹಂತಕ್ಕೆ ಬಂದ ಮೇಲೆ ವೈಯಕ್ತಿಕ ಜೀವನವನ್ನು ಸೆಲೆಬ್ರಿಟಿಗಳು ಚೆನ್ನಾಗಿ ಇಟ್ಟುಕೊಳ್ಳಬೇಕು. ಇವನ ಪತ್ನಿ ಸಹ ನಿರೂಪಕಿಯಾಗಿ ಕೆಲಸ ಮಾಡಿರುವ ಅನುಭವಿದೆ. ಯಾರ ಬಳಿ ಸಹ ತನ್ನ ಗಂಡನ ಕಿರುಕುಳದ ಬಗ್ಗೆ ಮಾತನಾಡಿಲ್ಲ. ಗಂಡ ಹೆಂಡತಿ ಜಗಳ ಅಂತಾ ಹೇಳುತ್ತಾ ಇದ್ದಳು.

ದರ್ಶನ್‌ ಒಬ್ಬ ಕಮಿಟೆಡ್‌ ಮೆನ್‌. ಯಾವುದಾದರೂ ಕೆಲಸವನ್ನು ಕೈಯಲ್ಲಿ ಹಿಡಿದರೆ ಮಾಡಿ ಮುಗಿಸುವ ಧಮ್ ಅವನಲ್ಲಿದೆ. ಆದರೆ ಆದ್ಯಾಕೋ ಅವನಿಗೆ ಹೆಂಡತಿಯನ್ನು ಹೊಡೆಯುವ ಚಟವಿದೆ. ಪತ್ನಿಯನ ಕೈ ಯನ್ನು ಕಾರ್‌ ಡೋರ್‌ಗೆ ಇಟ್ಟು ಕೈಗೆ ಪೆಟ್ಟು ಮಾಡಿದ್ದ ಎಂದು ರವಿ ಬೆಳಗೆರೆ ಆ ಪ್ರಕರಣವನ್ನು ಮೆಲಕು ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+