ಮೂರು ಬೇರೆ ಕಥೆಗಳ ಸಂಗಮ, ರಂಗ ಪ್ರಯೋಗ ತಪ್ಪದೇ ನೋಡಿ
ಬೆಂಗಳೂರು, ಆಗಸ್ಟ್ 06: ಬೆಂಗಳೂರಿನ ಜನಪ್ರಿಯವಾದ ವಿಮೂವ್ ಥಿಯೇಟರ್ ನಾಟಕ ಸಂಸ್ಥೆಯು ಕಳೆದ ಹದಿಮೂರು ವರ್ಷಗಳಿಂದ ದೇಶಾದ್ಯಂತ ತನ್ನ ನಾಟಕಗಳ ಪ್ರದರ್ಶನ ಹಾಗೂ ರಂಗ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ವಿ ಮೂವ್ ತಂಡ ತನ್ನ 15ನೇ ರಂಗಪ್ರಯೋಗವಾಗಿ, 'ಕಥೆಗಳು' ಎಂಬ ಹೊಸ ಕನ್ನಡ ನಾಟಕವನ್ನು ರಂಗದ ಮೇಲೆ ತರುತ್ತಿದೆ.
ನಾಟಕದ ಬಗ್ಗೆ: ಕಥೆಗಳು, ಮೂರು ಬೇರೆ ಬೇರೆ ಕಥೆಗಳ ಸಂಗಮವಾಗಿದ್ದು. ಈ ಮೂರು ಕಥೆ/ನಾಟಕಗಳನ್ನು ವಿ ಮೂವ್ ತಂಡದ ಮೂವರು ನಿರ್ದೇಶಕರು ನಿರ್ದೇಶಿಸಿದ್ದು, ಇತ್ತೀಚಿನ ದಿನಗಳಲ್ಲಿ ಕನ್ನಡ ರಂಗಭೂಮಿಯಲ್ಲಿ ಇಂತಹ ವಿಶಿಷ್ಟ ರಂಗಪ್ರಯೋಗ ಎಲ್ಲಿಯೂ ಆದದ್ದಿಲ್ಲ. ಈ ನಾಟಕವು ಮಾನವತೆ, ದುರಾಸೆ, ದ್ವೇಷ, ಸ್ಪೂರ್ತಿ, ಹತಾಶೆ, ಭರವಸೆ, ಆಸೆ, ಮುಂತಾದ ಭಾವಗಳ ಛಾಯೆಯ ಮಿಶ್ರಣವಾಗಿದ್ದು, ಭೂತ, ವರ್ತಮಾನ ಮತ್ತು ಭವಿಷ್ಯದೆಳೆಗಳ ಸಾರವಾಗಿದೆ.

ನಾಟಕ: ಕಥೆಗಳು
ಎಲ್ಲಿ?: ರಂಗ ಶಂಕರ, ಜೆಪಿ ನಗರ, ಬೆಂಗಳೂರು
ಯಾವಾಗ?: ಆಗಸ್ಟ್ 09, 2019
ಸಮಯ : ಸಂಜೆ 7.30
ಕಥೆ 1 : ನಿರ್ದೇಶಕ: ರಂಜನ್ ಎಸ್.
ಕಥೆ 2: ನಿರ್ದೇಶಕ: ಸೂರಜ್ ಕಿರಣ್.
ಕಥೆ 3: ಸಿಂಧು ಹೆಗಡೆ.
ನಮ್ಮ ಮೆಟ್ರೋ, ನನ್ನವಳ ಕಾಗದ, ಪಿ.ಎಸ್ ಐ ಡೋಂಟ್ ಲವ್ ಯು, ತತ್ಯನ ಮೋಹ, ಮಾಗಡಿ ಡೇಸ್, ಕಾಕ್ ಟೇಲ್ ಮುಂತಾದ ನಾಟಕಗಳ ಮೂಲಕ ಬೆಂಗಳೂರು, ಮೈಸೂರು, ಚೆನ್ನೈ ಹಾಗೂ ಹೈದರಾಬಾದಿನ ನಾಟಕ ಪ್ರಿಯರ ಮನಸ್ಸಿನಲ್ಲಿ ವಿಮೂವ್ ಥೀಯೇಟರ್ ತಂಡ ಮನೆ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ನೀತಿಶಿಕ್ಷಣ ಸಾರುವ ನಾಟಕಗಳನ್ನು ಪ್ರದರ್ಶಿಸಿ ಕಲಿಕೆಗೆ ಪೂರಕ ವೇದಿಕೆ ರೂಪಿಸುವ ಯೋಜನೆಯನ್ನು ವಿಮೂವ್ ತಂಡ ಹೊಂದಿದೆ.












Click it and Unblock the Notifications