ನಮ್ಮಿಂದ ತಪ್ಪಾಗಿದೆ ಎಂದು ಕಣ್ಣೀರು ಹಾಕಿದ ಮಾಜಿ ಪ್ರಧಾನಿ ದೇವೇಗೌಡರು

Recommended Video

      ನಮ್ಮಿಂದ ತಪ್ಪಾಗಿದೆ ಎಂದು ಕಣ್ಣೀರು ಹಾಕಿದ ಮಾಜಿ ಪ್ರಧಾನಿ ದೇವೇಗೌಡರು | HD Deve Gowda | Oneindia Kannada

      ಬೆಂಗಳೂರು, ಜುಲೈ 28: ಜೆಡಿಎಸ್ ನ ಅತೃಪ್ತ ಶಾಸಕ ಗೋಪಾಲಯ್ಯ ಅವರ ಕ್ಷೇತ್ರ ಮಹಾಲಕ್ಷ್ಮಿ ಲೇಔಟ್ ಹಾಗೂ ಕಾಂಗ್ರೆಸ್ ನ ಅತೃಪ್ತ ಶಾಸಕ ಎಸ್. ಟಿ. ಸೋಮಶೇಖರ್ ಅವರ ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಭಾನುವಾರ ದೇವೇಗೌಡರು ನಡೆಸಿದರು. ಆ ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರ ಮಾತಿನ ಮುಖ್ಯಾಂಶಗಳು ಹೀಗಿವೆ.

      * ನಮ್ಮಿಂದ ತಪ್ಪಾಗಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಪರಿಸ್ಥಿತಿ ಕಠಿಣವಾಗಿದ್ದ ಕಾರಣ ಹೋರಾಟ ಮಾಡಿದ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಕೊಡಿಸಲು ಆಗಲಿಲ್ಲ್. ಇನ್ನು ಮುಂದೆ ಹಾಗೆ ಆಗದಂತೆ ನೋಡಿಕೊಳ್ಳುತ್ತೇನೆ (ಕಣ್ಣೀರು ಹಾಕಿದ ದೇವೇಗೌಡರು).

      * ಬಿಜೆಪಿ ಸರಕಾರದಲ್ಲಿ ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ನ ನಾಯಕರಾಗಿ ಸಿದ್ದರಾಮಯ್ಯ ಇರುತ್ತಾರೆ. ಜೆಡಿಎಸ್ ನಾಯಕರಾಗಿ ಕುಮಾರಸ್ವಾಮಿ ಇರುತ್ತಾರೆ. ಸೋಮವಾರದಂದು ಹಣಕಾಸು ವಿಧೇಯಕಕ್ಕೆ ಅಡ್ಡಿ ಮಾಡುವುದಿಲ್ಲ.

      We Made A Mistake, Jds Supremo Hd Deve Gowda Break Down In Press Meet

      * ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕು ಎಂದು ಒತ್ತಡ ಹೇರಿದ್ದವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ. ಈಗ ಸರಕಾರ ಪತನವಾಗಿದೆ. ಮೈತ್ರಿ ಮುಂದುವರಿಸುವ ನಿರ್ಧಾರದಲ್ಲಿ ಕಾಂಗ್ರೆಸ್ ನಾಯಕರ ತೀರ್ಮಾನ ಕಾದು ನೋಡುತ್ತೇವೆ.

      * ಯಶವಂತಪುರ- ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿಗಳನ್ನು ಹಾಕಲು ತೀರ್ಮಾನ. ಪಕ್ಷ ಉಳಿಸುವುದೇ ನನಗೆ ಮುಖ್ಯ ಎಂದ ದೇವೇಗೌಡರು, ಮತ್ತೆ ಪಕ್ಷ ಸಂಘಟನೆಗಾಗಿ ತೀರ್ಮಾನ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+