Bengaluru Traffic Advisory: ಮಳೆಯಿಂದಾಗಿ ಈ ರಸ್ತೆಗಳಲ್ಲಿ ಸಂಚಾರ ಸಮಸ್ಯೆ, ಟ್ರಾಫಿಕ್! ಸವಾರರು ಗಮನಿಸಿ
ಬೆಂಗಳೂರು, ಮೇ 19: ಬೆಂಗಳೂರಿನಲ್ಲಿ ಸುರಿದ ನಿರಂತರ ಜೋರು ಮಳೆಯಿಂದಾಗಿ ಅಲ್ಲಲ್ಲಿ ಸಾಕಷ್ಟು ಸಮಸ್ಯೆ ಆಗಿದೆ. ಯಲಹಂಕ, ಹೆಬ್ಬಾಳ, ಕೋರಮಂಗಲ ಸೇರಿದಂತೆ ವಿವಿಧೆಡೆ ರಸ್ತೆಗಳು ಜಲಾವೃತವಾಗಿವೆ. ಅನೇಕ ಕಡೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಹೆಣ್ಣೂರಿನ ಸಾಯಿ ಬಡಾವಣೆಯು ಅಕ್ಷರಶಃ ಮಳೆಗೆ ನಲುಗಿದೆ. ಪ್ರಮುಖ ರಸ್ತೆಗಳಲ್ಲಿ ವಾಟರ್‌ಲಾಗಿಂಗ್ ಸಮಸ್ಯೆ ಉದ್ಭವಿಸಿದೆ. ಒಳಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ಸಮಸ್ಯೆ ಆಗುತ್ತಿದೆ. ಈ ಸಂಬಂಧ ಸೋಮವಾರಕ್ಕೆ ಅನ್ವಯವಾಗುವಂತೆ ಬೆಂಗಳೂರು ಸಂಚಾರಿ ಪೊಲೀಸರು 'ಸಂಚಾರ ಸಲಹೆ' ನೀಡಿದ್ದಾರೆ. ವಾಹನ ಸವಾರರು ಗಮನಿಸಿ ಸಂಚರಿಸಬೇಕಿದೆ.
ಬೆಂಗಳೂರಿನ ಈ ಕೆಳಕಂಡ ರಸ್ತೆಗಳಲ್ಲಿ ಮಳೆ ನೀರು ನಿಂತು ಸಮಸ್ಯೆ ಆಗಿದೆ. ಹೀಗಾಗಿ ಕೆಲವೆಡೆ ಸಂಚಾರ ದಟ್ಟಣೆ ನಿಧಾನವಾಗಿರುತ್ತದೆ. ಅದನ್ನು ಗಮನಿಸಿ ಸಂಚರಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸವಾರರಿಗೆ ತಿಳಿಸಿದ್ದಾರೆ. ವಿವಿಧ ರಸ್ತೆಗಳಲ್ಲಿ ಟ್ರಾಫಿಕ್ ದಟ್ಟಣೆ ಕಂಡು ಬರುತ್ತಿದೆ. ಒಂದೆರಡು ಕಡೆಗಳಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.

ಸಂಚಾರ ಸಲಹೆ: ಇಲ್ಲಿ ನಿಧಾನಗತಿಯ ಸಂಚಾರ
* ಭಾಷ್ಯಂ ವೃತ್ತದಿಂದ ಕಾವೇರಿ ಜಂಕ್ಷನ್ ಕಡೆಗೆ ನಿಧಾನಗತಿ ಸಂಚಾರ ಕಂಡು ಬರಲಿದೆ.
* ಅಲ್ಲಸಂದ್ರ ವೃತ್ತದಿಂದ ಯಲಹಂಕ ಜಂಕ್ಷನ್ ಕಡೆಗೆ.
* ಕಸ್ತೂರಿ ನಗರ 2ನೇ ಮುಖ್ಯರಸ್ತೆಯಿಂದ ಸದಾನಂದ ಸೇತುವೆ ಕಡೆಗೆ.
* ಸಿಬಿ ರಸ್ತೆಯಿಂದ ಎ.ಎಸ್.ಸಿ.
* ಆರ್ ಎಂ ನಗರದಿಂದ ಚಿಕ್ಕ ಬಾಣಸವಾಡಿ ಕಡೆಗೆ.
* ಅಯ್ಯಪ್ಪ ದೇವಸ್ಥಾನದ ಕಡೆಗೆ ಹೊಸ ಬೆಲ್ ರಸ್ತೆ
* ಸರಯಪಾಳ್ಯ ಕಡೆಗೆ ನಾಗವಾರ ಬಸ್ ನಿಲ್ದಾಣ.
* ಅಲ್ಲಸಂದ್ರದಿಂದ ಯಲಹಂಕ ವೃತ್ತ.
* ಜ್ಞಾನಭಾರತಿ ಯಿಂದ ರಾಜರಾಜೇಶ್ವರಿ ನಗರ ಆರ್ಚ್ ಕಡೆಗೆ ಹೋಗುವ ಮಾರ್ಗದಲ್ಲಿ ಸಂಚಾರ ನಿಧಾನವಾಗಿದೆ.
* ಸರ್ಜಾಪುರ ವಿಪ್ರೋ ಜಂಕ್ಷನ್ ನಿಂದ ಇಬ್ಲೂರು ಕಡೆಗೆ ಮತ್ತು ಇಬ್ಲೂರು ನಿಂದ ಸರ್ಜಾಪುರ ವಿಪ್ರೋ ಜಂಕ್ಷನ್ ಕಡೆಗೆ.
* ASC ಮತ್ತು Hosmat ಆಸ್ಪತ್ರೆ ರಸ್ತೆಯ ಕಡೆಗೆ ಆರ್ಎಂ ರಸ್ತೆಯಲ್ಲಿ ನಿಧಾನ ಸಂಚಾರ.
* KINO ಜಂಕ್ಷನ್ ಕಡೆಗೆ ಆನಂದ ರಾವ್ ವೃತ್ತದವರೆಗೆ ಸಂಚಾರ ಮೊದಲಿನಂತಿಲ್ಲ.
* ವಡ್ಡರಪಾಳ್ಯ ಹೆಣ್ಣೂರು ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಸಂಚಾರ ನಿಧಾನವಾಗಿದೆ.
* ರಾಷ್ಟ್ರೋತ್ಥಾನ ಜಂಕ್ಷನ್ ಅಶ್ವಥ್ ನಗರ ಜಂಕ್ಷನ್ ಕಡೆಗೆ.
* ಆಟೋ ಮಾರ್ಟ್ ನಿಂದ ಅಗರ ಕಡೆಗೆ.
* ಶಾಹಿ ಗಾರ್ಮೆಂಟ್ಸ್, ಬನ್ನೇರುಘಟ್ಟ ರಸ್ತೆಯಿಂದ ಹುಳಿಮಾವು ಗೇಟ್ ಕಡೆಗೆ.
* ಸಿಲ್ಕ್ ಬೋರ್ಡ್ ನಿಂದ ಅಗರ ಸಿಗ್ನಲ್ ಕಡೆಗೆ
* ಕೆನ್ಸಿಂಗ್ಟನ್ ನಿಂದ ಗುರುದ್ವಾರ ಕಡೆಗೆ ಸಂಚಾರ ನಿಧಾನವಾಗಿದೆ.
* ಬೇಲಿಮಠ ಜಂಕ್ಷನ್ ನಿಂದ ಬಿನ್ನಿಮಿಲ್ ಕಡೆಗೆ ಸಂಚಾರ ದಟ್ಟಣೆ ಕಂಡು ಬರಲಿದೆ.
* ಆದರ್ಶ ಜಂಕ್ಷನ್ ನಿಂದ ರಾಮಯ್ಯ ಜಂಕ್ಷನ್ ಕಡೆಗೆ.
* ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಬೆಳ್ಳಂದೂರು ಕಡೆಗೆ.
* ಲೌರಿ ಅಂಡರ್ಪಾಸ್ ನಿಂದ ಮಹದೇವಪುರ ಕಡೆಗೆ.
* ಪ್ರಸನ್ನ ಚಿತ್ರ ಮಂದಿರದಿಂದ ಬಸವ ಮಂಟಪ ಸಿಗ್ನಲ್ ಕಡೆಗೆ.
* ಸೋನಿ ವರ್ಲ್ಡ್ ಸಿಗ್ನಲ್ ನಿಂದ ಮಹಾರಾಜ ಸಿಗ್ನಲ್ ಕಡೆಗೆ.
* ಶಿರಸಿ ವೃತ್ತದ ಬಳಿ ಮರ ಬಿದ್ದ ಉಮಾ ಥಿಯೇಟರ್ ಕಡೆಗೆ ನಿಧಾನಗತಿಯ ಸಂಚಾರವಿದೆ.
* ಅನಿಲ್ ಕುಂಬ್ಳೆ ಜಂಕ್ಷನ್ ನಿಂದ BRV ಜಂಕ್ಷನ್ ಕಡೆಗೆ ಓಡಾಡುವವರು ಗಮನಿಸಬೇಕು.
* ಬೇಲಿಮಠದಿಂದ ಜಂಕ್ಷನ್ ಬಿನ್ನಿಮಿಲ್ ಕಡೆಗೆ
* ಮಾರ್ಕೆಟ್ ಫ್ಲೈಓವರ್ ಡೌನ್‌ರಾಂಪ್ ಮತ್ತು ಅಪ್ಪರ್ ರ್ಯಾಂಪ್ ನಿಂದ ಸಂಚಾರ ಕ್ಲಿಷ್ಟವಾಗಿದೆ.
* ಮೈಸೂರು ರಸ್ತೆ ಟೋಲ್ ಗೇಟ್ ನಿಂದ ಹಳೇ ಗುಡ್ಡದಹಳ್ಳಿ ಕಡೆಗೆ
* ಆರ್ ವಿ ಟೀಚರ್ಸ್ ಕಾಲೋನಿಯಿಂದ ಅಶೋಕ ಸ್ತಂಭದ ಕಡೆಗೆ ನಿಧಾನಗತಿಯ ಸಂಚಾರ ಇರಲಿದೆ.
ಈ ಕೆಳಕಂಡ ಸ್ಥಳಗಳಲ್ಲಿ ಮಳೆ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 19, 2025
1. ಗೆದ್ದಲಹಳ್ಳಿ ರೈಲ್ವೆ ಸೇತುವೆಯಿಂದ ವಡ್ಡರಪಾಳ್ಯ ಕಡೆಗೆ
2. ಟಿನ್ ಫ್ಯಾಕ್ಟರಿಯಿಂದ ವಿಜಾನ ಪುರ ರೈಲ್ವೆ ಸೇತುವೆ ಕಡೆ
3. ಎಚ್.ಬಿ.ಆರ್ ಲೇಔಟ್ 17ನೇ ಮುಖ್ಯಯಿಂದ 18ನೇ ಮುಖ್ಯ ರಸ್ತೆ ಕಡೆಗೆ
4. ವಿಪ್ರೋ ಜಂಕ್ಷನ್ ಕೋರಮಂಗಲದಿಂದ ಮಹಾರಾಜ ಜಂಕ್ಷನ್ ಕಡೆಗೆ
ಮೇಲ್ಸೇತುವೆ ಕಾಮಗಾರಿ: ಸಂಚಾರ ಸಮಸ್ಯೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ವತಿಯಿಂದ ಕೆ.ಆರ್.ಪುರ ಕಡೆಯಿಂದ ಮೇಖಿ ವೃತ್ತದ ಕಡೆಗೆ ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲೇತುವೆಗೆ ಹೆಚ್ಚುವರಿ ರಾಂಪ್‌ಗಳನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಕಾರಣದಿಂದಾಗಿ ಹಳಿಗಳ ಮೇಲೆ 33.5 ಮೀ ಉದ್ದದ 07 ಉಕ್ಕಿನ ಗರ್ಡರ್‌ಗಳನ್ನು ಅಳವಡಿಸುವ ಕಾಮಗಾರಿ ಮೇ 17ರಿಂದ 21 ವರೆಗೆ ಪ್ರತಿದಿನ 3 ಗಂಟೆಗಳ ಕಾಲ ರಾತ್ರಿ 12:00 ರಿಂದ ಬೆಳಗಿನ ಜಾವ 03:00 ವರೆಗೆ ನಡೆಸಲಾಗುತ್ತದೆ. ಹೀಗಾಗಿ ಒಂದಷ್ಟು ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಸಂಚಾರ ನಿರ್ಬಂಧ
ಹೆಬ್ಬಾಳ ಮೇಲೇತುವೆಯಲ್ಲಿ ಎಸ್ಟೀಮ್ ಮಾಲ್ ನಿಂದ ಮೇಖಿ ವೃತ್ತದ ಕಡೆಗೆ ರಾತ್ರಿ 12 ಗಂಟೆಯಿಂದ ಬೆಳಗ್ಗೆ 3ಗಂಟೆವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇದಕ್ಕೆ ಪರ್ಯಾಯ ಮಾರ್ಗ ನೋಡುವುದಾದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟ್ರೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಿ, ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಐಎಲ್ ರಸ್ತೆ ಮೂಲಕ ಮೇಖಿ ವೃತ್ತವನ್ನು ತಲುಪುವಂತೆ ಸೂಚನೆ ನೀಡಲಾಗಿದೆ.
ಶಾಶ್ವತ ಪರಿಹಾರ ಕ್ರಮ
ಇನ್ನೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗುವ ಸ್ಥಳಗಳಿಗೆ ಶಾಶ್ವತ ಪರಿಹಾರ ಕ್ರಮ ವಹಿಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಮಳೆ ಬಾಧಿತ ಪ್ರದೇಶಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇಂದು ವಿಕಾಸಸೌಧದ ಕೊಠಡಿ ಸಂಖ್ಯೆ 422 ರಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಲೆಕ್ಟ್ರಾನಿಕ್ ಸಿಟಿ ಹತ್ತಿರ ಪಾಲಿಕೆ ವ್ಯಾಪ್ತಿಗೆ ಬರುವ ನ್ಯಾಷನಲ್ ಹೈವೇ ರಸ್ತೆಯಲ್ಲಿ ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ನ್ಯಾಷನಲ್ ಹೈವೇ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಸೈಡ್ ಡ್ರೈನ್ ಗಳಲ್ಲಿ ಹೂಳೆತ್ತಿ ಸ್ವಚ್ಛತೆ ಕಾಪಾಡಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications