ಬೆಂಗಳೂರು ಮಹಿಳೆಯ ಸ್ಪೂರ್ತಿದಾಯಕ ಕಥೆ ಹೇಳಿದ ವಿವಿಎಸ್ ಲಕ್ಷ್ಮಣ್
ಬೆಂಗಳೂರು, ಮೇ 21: ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಭರತನಾಟ್ಯ ರಂಗಪ್ರವೇಶ ಮಾಡಬೇಕಿದ್ದ ಬೆಂಗಳೂರಿನ ಮಹಿಳೆಯ ಸ್ಪೂರ್ತಿದಾಯಕ ಕಥೆ ಇದಾಗಿದೆ.
ಬೆಂಗಳೂರಿನ ಜೆ. ಪಿ. ನಗರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಮಹಿಳೆಯ ಕಥೆ ಇದು. ಈ ಪೋಸ್ಟ್ ಅನ್ನು 5.4ಕೆ ಜನರು ಇಷ್ಟಪಟ್ಟಿದ್ದಾರೆ. 891 ಜನರು ರಿ ಟ್ವೀಟ್ ಮಾಡಿದ್ದಾರೆ. ಖ್ಯಾತ ಫುಡ್ ಬ್ಲಾಗರ್ Kripal Amanna ಸಹ ಶೇರ್ ಮಾಡಿಕೊಂಡಿದ್ದಾರೆ.

ವಿವಿಎಸ್ ಲಕ್ಷ್ಮಣ್ ಪೋಸ್ಟ್: ಜೆ. ಪಿ. ನಗರದಲ್ಲಿ Kari Dosa ಎಂಬ ಸ್ಟಾಲ್ ನಡೆಸುವ ಮಹಿಳೆಯ ಸಾಧನೆಯ ಹಾದಿಯನ್ನು ವಿವಿಎಸ್ ಲಕ್ಷ್ಮಣ್ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
"ವೀಣಾ ಅಂಬರೀಶ್ 17 ವರ್ಷವಿರುವಾಗ ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಆಗ ಅವರು ಭರತನಾಟ್ಯ ಕಲಾವಿದೆಯಾಗಿದ್ದು, ರಂಗಪ್ರವೇಶಕ್ಕೆ ಸಿದ್ಧರಾಗುತ್ತಿದ್ದರು. ಜೀವನ ಅವರಿಗೆ ದೊಡ್ಡ ಏಟು ನೀಡಿತ್ತು. ಆದರೆ ಅದು ಅವರ ಎಂಬಿಎ ಪೂರ್ಣಗೊಳಿಸಲು ತಡೆ ಹಾಕಲಿಲ್ಲ. ಓದು ಪೂರ್ಣಗೊಳಿಸಿದ ಅವರು ಕೆಲಸಕ್ಕೂ ಸೇರಿದರು" ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
"ಹಲವು ಗಂಟೆಗಳ ಕಾಲ ಕುಳಿತು ಕೆಲಸ ಮಾಡುವುದು ಅವರಿಗೆ ಕಷ್ಟಕರವಾಗಿತ್ತು. ಹೋಟೆಲ್ ಉದ್ಯಮದ ಮೇಲೆ ಅವರಿಗಿದ್ದ ಪ್ರೀತಿ ವ್ಯಾಪಾರ ಶುರು ಮಾಡುವಂತೆ ಪ್ರೇರಣೆ ನೀಡಿತು. ಅಂತಿಮವಾಗಿ ಅವರು Kari Dosa ಸ್ಟಾಲ್ ಆರಂಭಿಸಿದರು" ಎಂದು ತಿಳಿಸಿದ್ದಾರೆ.
When just 17, Veena Ambarish lost her foot in an accident in Bengaluru . At that time she was a Bharatnatyam dancer preparing for her Arangetram. Life hit her really hard but her resilience made her complete her MBA and she worked for a few years. But long hours at a desk
— VVS Laxman (@VVSLaxman281) May 21, 2024
Job… pic.twitter.com/LqblA7c4EC
"ಈಗ ವೀಣಾ ಅಂಬರೀಶ್ ಪ್ರತಿದಿನ ಬೆಳಗ್ಗೆ 4.30ಕ್ಕೆ ತಮ್ಮ ಕೆಲಸ ಆರಂಭಿಸುತ್ತಾರೆ. ಜೆ. ಪಿ. ನಗರ 7ನೇ ಫೇಸ್‌ನಲ್ಲಿ ತಮ್ಮ ಸ್ಟಾಲ್ ನಡೆಸುತ್ತಾರೆ. ಸವಾಲಿನ ದಿನಗಳು ಮತ್ತು ಅವರ ಪಯಣ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ" ಎಂದು ವಿವಿಎಸ್ ಲಕ್ಷ್ಮಣ್ ಬಣ್ಣಿಸಿದ್ದಾರೆ.
"No matter how hard life hits you, be stronger than before" ಎಂಬುದು ವೀಣಾ ಅಂಬರೀಶ್ ಅವರ ಜೀವನ ಮಂತ್ರವಾಗಿದೆ ಎಂದು ವಿವಿಎಸ್ ಲಕ್ಷ್ಮಣ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಫುಡ್ ಬ್ಲಾಗರ್ Kripal Amanna ವಿವಿಎಸ್ ಲಕ್ಷ್ಮಣ್ ಪೋಸ್ಟ್ ಶೇರ್ ಮಾಡಿಕೊಂಡಿ ಪ್ರತಿಕ್ರಿಯೆ ನೀಡಿದ್ದಾರೆ. ಪೋಸ್ಟ್ ಮೂಲಕ ವೀಣಾ ಅಂಬರೀಶ್ ಮತ್ತು ಅವರ ಕರಿ ದೋಸೆ ಉದ್ಯಮ ಬೆಂಬಿಸಿದ್ದ ಧನ್ಯವಾದ ತಿಳಿಸಿದ್ದಾರೆ. ವೀಣಾ ಅವರು ಈಗ ಬಿಟಿಎಂ 2ನೇ ಸ್ಟೇಜ್‌ನಲ್ಲಿ ಸ್ಟಾಲ್ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications