Vijay Mallya: ಸಂಕ್ರಾಂತಿ ವಿಶ್ ಮಾಡಿ ತಗ್ಲಾಕೊಂಡ ವಿಜಯ್ ಮಲ್ಯ!
ಭಾರತದಲ್ಲಿ ಕಿಂಗ್‌ಫಿಶರ್ ಬಿಯರ್ ಕಂಪನಿಯನ್ನು ಸ್ಥಾಪನೆ ಮಾಡಿ ಸಾಮ್ರಾಜ್ಯ ಕಟ್ಟಿದ್ದ ವಿಜಯ್ ಮಲ್ಯ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿ ತಗ್ಲಾಕೊಂಡಿದ್ದಾರೆ. ಹೌದು ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಊರು ಬಿಟ್ಟಿದ್ದ ವಿಜಯ್ ಮಲ್ಯ ಅವರು ಸಂಕ್ರಾಂತಿ ಹಬ್ಬಕ್ಕೆ ಮಾಡಿದ ಒಂದೇ ಒಂದು ಶುಭಾಶಯದ ಸಾಲಿನಿಂದ ತಗ್ಲಾಕೊಂಡಿದ್ದಾರೆ.
ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಇಂಗ್ಲೆಂಡ್‌ಗೆ ಓಡಿ ಹೋಗಿರುವ ವಿಜಯ್ ಮಲ್ಯ ಎಲ್ಲಾ ಹಬ್ಬ ಹಾಗೂ ವಿಶೇಷ ದಿನಗಳಿಗೆ ಸೋಷಿಯಲ್ ಮೀಡಿಯಾ ಟ್ಟಿಟ್ಟರ್‌ನಲ್ಲಿ ವಿಶ್ ಮಾಡುವುದು ಇದೆ ಅದೇ ರೀತಿ ಮಂಗಳವಾರವೂ ಸಂಕ್ರಾಂತಿ ಹಬ್ಬಕ್ಕೆ ವಿಶ್ ಮಾಡಿದ್ದಾರೆ. ಈ ರೀತಿ ವಿಶ್ ಮಾಡುತ್ತಿದ್ದಂತೆಯೇ ಅವರಿಗೆ ಸಂಕಷ್ಟ ಎದುರಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ವಿಜಯ ಮಲ್ಯ.. ಈ ಹೆಸರು ಕೇಳಿದರೆ ಕನ್ನಡಿಗರಿಗೆ ಮೂರು ವಿಷಯಗಳು ಮೊದಲಿಗೆ ನೆನಪಿಗೆ ಬರುತ್ತವೆ. ಮೊದಲನೆಯದು ಕಿಂಗ್ ಫಿಶರ್.. ಸಾಲ ಹಾಗೂ ಆರ್‌ಸಿಬಿ. ಈ ಕಾರಣಕ್ಕೆ ವಿಜಯ ಮಲ್ಯನ ಜನ ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಆದರೆ, ವಿಜಯ ಮಲ್ಯ ರಾತ್ರೋರಾತ್ರಿ ಇಂಗ್ಲೆಂಡ್‌ಗೆ ಪರಾರಿಯಾದ ವಿಜಯ ಮಲ್ಯನ ನಂಬಿ ಆತನ ಕಂಪನಿಯಲ್ಲಿ ಷೇರು ಹಾಕಿದವರು, ಬ್ಯಾಂಕ್‌ಗಳು ಇಂದಿಗೂ ವಿಜಯ ಮಲ್ಯ ಬರ್ತಾರೆ ಅಂತ ಕಾಯುತ್ತಿದ್ದಾರೆ. ಈ ರೀತಿ ಇರುವಾಗಲೇ ವಿಜಯ ಮಲ್ಯ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಅಂತ ಒಂದು ಸಾಲಿನಲ್ಲಿ ವಿಶ್ ಮಾಡಿ ಷೇರುದಾರರ ಬಳಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಪೇರುದಾರರ ಕೈಯಲ್ಲಿ ತಗ್ಲಾಕೊಂಡ ಮಲ್ಯ: ಇನ್ನು ವಿಜಯ್ ಮಲ್ಯ ಅವರು ಈ ರೀತಿ ವಿಶ್ ಹಾಕಿದ ಕೆಲವೇ ಕ್ಷಣಗಳಲ್ಲಿ ಕೆಎಫ್ಎ ಷೇರುದಾರರು ಸರಣಿ ಟ್ವೀಟ್ ಮಾಡಿದ್ದಾರೆ. ಸರ್ ದಯವಿಟ್ಟು Kfa ಷೇರುದಾರರಿಗೆ ಏನಾದರೂ ಮಾಡಿ (ಷೇರು ಮೊತ್ತ ಹಿಂದಿರುಗಿಸಿ) ಅಂತ ರಿಕ್ವೆಸ್ಟ್ ಮಾಡುತ್ತಿದ್ದಾರೆ. ರವಿ ಗೋಪಾಲ್ ಎನ್ನುವವರು ಸರ್ ಈಗ 11 ವರ್ಷಗಳೇ ಕಳೆದಿವೆ. ದಯವಿಟ್ಟು ನಿಮ್ಮ ವಿಮಾನಯಾನ ಸಂಸ್ಥೆ ನನಗೆ ಕೊಡಬೇಕಿರುವ 9ಸಾವಿವರವನ್ನು ಹಿಂದಿರುಗಿಸಿ. ನಾನು ನಿವೃತ್ತ, ವೃದ್ಧ ಎಂದಿದ್ದಾರೆ. ಈ ರೀತಿ ಹಲವರು ವಿಜಯ್ ಮಲ್ಯರಿಂದ ಅವರ ಹಣವನ್ನು ವಾಪಸ್ ಕೊಡುವಂತೆ ಮನವಿ ಮಾಡುತ್ತಿದ್ದಾರೆ.

ನೀವು ಭಾರತಕ್ಕೆ ಯಾವಾಗ ಬರ್ತೀರಾ
ಈ ರೀತಿ ವಿಶ್ ಮಾಡುತ್ತಿದ್ದಂತೆಯೇ ತುಂಬಾ ಜನ ನೀವು ಭಾರತಕ್ಕೆ ಯಾವಾಗ ಬರ್ತೀರಾ ಸರ್ ಅಂತ ಪ್ರಶ್ನೆ ಮಾಡಿದ್ದಾರೆ. ವಿಜಯ್ ಮಲ್ಯ ಅಂಕಲ್ ಬೇಗ ಭಾರತಕ್ಕೆ ಬನ್ನಿ ಅಂತ ಹಲವರು ವಿಜಯ್ ಮಲ್ಯ ಕಾಲೆಳೆದಿದ್ದಾರೆ. ಬನ್ನಿ ಸರ್ ಕುಂಭಮೇಳದಲ್ಲಿ ಸ್ನಾನ ಮಾಡೋಣ ಅಂತ ಕೆಲವರು ಹೇಳಿದ್ದಾರೆ. ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಪಾಪ ಕಳೆಯುತ್ತದೆ ಎನ್ನುವ ನಂಬಿಕೆ ಇದೆ.
ಇದನ್ನು ಕೋಟ್ ಮಾಡಿ ವಿಜಯ್ ಮಲ್ಯ ವಿಶ್‌ಗೆ ರಿಪ್ಲೈ ಮಾಡಲಾಗಿದೆ. ಕೆಲವರು ದೇಶದ ಪ್ರತಿಷ್ಠಿತ ಬ್ಯಾಂಕ್ ಎಸ್‌ಬಿಐ ಹೆಸರು ಉಲ್ಲೇಖಿಸಿ, ಎಸ್‌ಬಿಐನಿಂದ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಅಂತ ಹೇಳಿದ್ದಾರೆ. ಅಲ್ಲದೆ ಕೆಲವರು ಇವೊತ್ತು ಬ್ಯಾಂಕ್ ಹಾಲಿಡೇನಾ ಇಲ್ಲ ಅನ್ಸುತ್ತೆ ಅಂತ ಕಮೆಂಟ್ ಮಾಡಿದ್ದಾರೆ. ಸಂಜೆ ಮಲ್ಯ ಮಾಡಿರುವ ಮೆಸೇಜ್ ಕೆಲವೇ ಗಂಟೆಗಳಲ್ಲಿ 191k ರೀಚ್ ಆಗಿದೆ.












Click it and Unblock the Notifications