ಇಂದಿರಾನಗರದಲ್ಲಿ ಮರಗಣತಿ ನಡೆಸಿದ ಯುನೈಟೆಡ್‌ ಬೆಂಗಳೂರು

ಬೆಂಗಳೂರು, ಆಗಸ್ಟ್ 17: ಯುನೈಟೆಡ್‌ ಬೆಂಗಳೂರು ಸಂಸ್ಥೆಯು ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್‌ ಬಳಿ ಇರುವ ಮರಗಳ ಗಣತಿ ನಡೆಸಿದೆ. ಅದರ ಜತೆಗೆ ಅಲ್ಲಿರುವುವ ವಿವಿಧ ಅಪರೂಪದ ಮರಗಳ ಕುರಿತು ಮಕ್ಕಳು ಹಾಗೂ ಸ್ಥಳಿಯರಿಗೆ ಮಾಹಿತಿ ನೀಡಿದೆ.

ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್‌ ಆವರಣ ಪ್ರವೇಶಿಸಿದರೆ ಪುಟ್ಟದೊಂದು ಉದ್ಯಾನ ಪ್ರವೇಶಿಸಿದಂತಾಗುತ್ತದೆ. ಇನ್ನು ಸ್ವಲ್ಪ ದಿನಗಳಲ್ಲಿ ಈ ಚಿತ್ರ ಬದಲಾಗಿದೆ. ಆ ಪ್ರದೇಶದಲ್ಲಿರುವ ಹಸಿರು ಜಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ಸ್ಥಾಪಿಸಲು ಉದ್ದೇಶಿಸಿರುವ ಬಿಡಿಎ ವಿರುದ್ಧ ಯುನೈಟೆಡ್‌ ಬೆಂಗಳೂರು ಹಾಗೂ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲಿರುವ ಮರಗಳು ಅದರಲ್ಲಿರುವ ವಿಶೇಷತೆ ಕುರಿತು ಶುಕ್ರವಾರ ವೃಕ್ಷ ತಜ್ಞರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

United Bengaluru holds Tree Census in Indira Nagar

ರೈನ್‌ ಟ್ರೀ, ಸಿಲ್ವರ್‌ ಓಕ್, ಅರಳಿ, ಆಲ, ಬಸವನಪಾದ, ಚೆರ್ರಿ, ಸಂಪಿಗೆ, ಸೀಬೆ, ನೆಲ್ಲಿಕಾಯಿ, ನಿಂಬೆ, ಸೀತಾಫಲ ಸೇರಿದಂತೆ ಅನೇಕ ಬಗೆಯ ಅಪರೂಪದ ಸಸ್ಯಗಳನ್ನು ಕಾಣಬಹುದು, ಒಂದೊಮ್ಮೆ ಈ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿದ್ದೇ ಆದಲ್ಲಿ ಇದೆಲ್ಲಾ ಮರಗಳ ಮಾರಣಹೋಮವಾಗಲಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಈ ಆವರಣದಲ್ಲಿನ 30 ವರ್ಷ ಹಳೆಯ ಸಂಕೀರ್ಣದ ಕಟ್ಟಡಗಳನ್ನು ನೆಲಸಮಗೊಳಿಸಿ, ಹೊಸದೊಂದು ವಾಣಿಜ್ಯ ಸಂಕೀರ್ಣವನ್ನು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಿಸಲು ಯೋಜನೆ ರೂಪಿಸಿದೆ.

United Bengaluru holds Tree Census in Indira Nagar

ಹಾಗಾಗಿ, ಹುಲುಸಾಗಿ ಬೆಳೆದು ಜನರಿಗೆ ಶುದ್ಧಗಾಳಿ ಹಾಗೂ ನೆರಳನ್ನು ನೀಡುತ್ತ, ಪಕ್ಷಿಗಳಿಗೆ ಆವಾಸ ಸ್ಥಾನವಾಗಿರುವ 171 ಮರಗಳ ಜೀವಕ್ಕೆ ಕುತ್ತು ಒದಗಿದೆ. ಕೆಲವೇ ದಿನಗಳಲ್ಲಿ ಈ ಮರಗಳು ಧರೆಗೆ ಉರುಳಲಿವೆ.

ಕಾಂಪ್ಲೆಕ್ಸ್‌ನ ಉತ್ತರದಲ್ಲಿ 75 ಮೀಟರ್‌ ಅಂತರದಲ್ಲಿಯೇ ಬಿನ್ನಮಂಗಲ (ಕದಿರೇನಪಾಳ್ಯ) ಕೆರೆ, 25 ಮೀ ಅಂತರದಲ್ಲಿ ರಾಜಕಾಲುವೆ ಹರಿಯುತ್ತದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದ ಪ್ರಕಾರ ಕೆರೆ ಮತ್ತು ರಾಜಕಾಲುವೆಯ ಬಫರ್‌ ಝೋನ್‌ಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವಂತಿಲ್ಲ. ಹೊಸ ಕಾಂಪ್ಲೆಕ್ಸ್‌ ನಿರ್ಮಾಣ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ ಎನ್ನುವುದು ವಾದವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+