Get Updates
Get notified of breaking news, exclusive insights, and must-see stories!

Traffic Advisory: ಅರಮನೆ ಮೈದಾನ, ಬಳ್ಳಾರಿ ರಸ್ತೆ ಕಡೆಗೆ ಸಂಚರಿಸುವವರ ಗಮನಕ್ಕೆ, ಪರ್ಯಾಯ ಮಾರ್ಗಗಳು

ಬೆಂಗಳೂರು, ಅಕ್ಟೋಬರ್ 25: ರಾಜ್ಯ ರಾಜಧಾನಿ ಬೆಂಗಳೂರು ವಾಹನ ಸವಾರರಿಗೆ ನಗರ ಸಂಚಾರಿ ಪೊಲೀಸ್ ಸಂಚಾರ ಸಲಹೆ ನೀಡಿದ್ದಾರೆ. ಬೆಂಗಳೂರು ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಅಕ್ಟೋಬರ್ 26 ರಂದು ಬೆಳಗ್ಗೆ 10.30 ಗಂಟೆಯಿಂದ 1.30 ಗಂಟೆಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ. ಈ ಕಾರಣದಿಂದ ಬಳ್ಳಾರಿ ರಸ್ತೆ, ಜಯಮಹಲ್ ಮತ್ತು ರಸ್ತೆ ಅರಮನೆ ಮೈದಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನ ದಟ್ಟಣೆ ಇರಲಿದೆ. ಹೀಗಾಗಿ ಸಂಚಾರ ಬದಲಾವಣೆ, ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ.

ಗಣ್ಯರು ಇಂದು ಶುಕ್ರವಾರ ಸಂಜೆಯಿಂದ ಅರಮನೆ ಮೈದಾನದತ್ತ ತೆರಳುವುದು, ಅಲ್ಲಿಂದ ಬರುವುದೆಲ್ಲವು ನಡೆಯುತ್ತಿದೆ. ಹೀಗಾಗಿ ಇಂದು ಸಂಜೆ 5 ಗಂಟೆಯಿಂದ ವಾಹನಗಳ ನಿಯಂತ್ರಣ ಶುರುವಾಗಿದೆ.

Traffic Advisory Parking Restrictions for Bengaluru Motorist at Palace Ground on Oct 26th

ಶನಿವಾರ ಅಕ್ಟೋಬರ್ 26ರಂದು ಬೆಳಿಗ್ಗೆ 09.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಸದರಿ ಈ ಕೆಳಗಿನ ಪರ್ಯಾಯ ರಸ್ತೆಗಳನ್ನು ಬಳಕೆ ಮಾಡುವಂತೆ ಸೂಚಿಸಲಾಗಿದೆ.

ವಾಹನ ಸವಾರರಿಗೆ ಪರ್ಯಾಯ ಮಾರ್ಗ

* ರಾಜ್ ಭವನ ರಸ್ತೆ ಬಳ್ಳಾರಿ ರಸ್ತೆ ಇನ್ ಫ್ಯಾಂಟ್ರಿ ರಸ್ತೆ

* ಕಬ್ಬನ್ ರಸ್ತೆ

* ಎಂ.ಜಿ. ರಸ್ತೆ (ಟ್ರಿನಿಟಿ ವೃತ್ತದಿಂದ ಮೆಯೋಹಾಲ್‌ವರೆಗೆ)

* ಎಚ್.ಎ.ಎಲ್ ಏರ್‌ಪೋರ್ಟ್ ರಸ್ತೆಯಲ್ಲಿ ಸಂಚರಿಸಬಹುದು.

ಕಾರ್ಯಕ್ರಮಕ್ಕೆ ವಿವಿಧ ವಾಹನಗಳಲ್ಲಿ ಬರುವ ಸಾರ್ವಜನಿಕರು ಕೃಷ್ಣ ವಿಹಾರ ಅರಮನೆ ಮೈದಾನ ಪ್ರವೇಶಿಸಲು ಇಲ್ಲಿ ಸೂಚಿಸಲಾಗಿರುವ ಮಾರ್ಗದ ಮೂಲಕ ಸಂಚರಿಸಬೇಕು.

* ಬಸ್‌ನಲ್ಲಿ, ಟಿಟಿಗಳಲ್ಲಿ ಬರುವವರು ಜಯಮಹಲ್ ರಸ್ತೆಯಲ್ಲಿ ಸಾಗಿ ಟವಿ ಅವರ ಬಳಿ ಇರುವ ಸರ್ಕಸ್ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ಅಲ್ಲಿಂದ ನಡೆದುಕೊಂಡು ಕಾರ್ಯಕ್ರಮದ ಸ್ಥಳವನ್ನು ತಲುಪಬಹುದು.

* ಮರಳಿ ಹೋಗುವಾಗ ಸರ್ಕಸ್ ಮೈದಾನದಿಂದ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಖ್ರಿ ವೃತ್ತದ ಮುಖಾಂತರ ಸಾಗರದ ಹೊರಗೆ ಹೋಗಬೇಕು.

ಇನ್ನೂ ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಬರುವ ಸಾರ್ವಜನಿಕರು ಆರಮನೆ ಮೈದಾನವನ್ನು ಪ್ರವೇಶಿಸಲು ಈ ಮಾರ್ಗ ಬಳಸಿ.

* ಗೇಟ್ ನಂ-02. ಗೇಟ್ ನಂ-03 ಮತ್ತು ಗೇಟ್ ನಂ-04 ನಿಂದ ಪ್ರವೇಶಿಸಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಕಾಲ್ನಡಿಗೆಯಲ್ಲಿ ಕಾರ್ಯಕ್ರಮದ ಸ್ಥಳವನ್ನು ತಲುಪಬೇಕು.

* ಮೈದಾನದಿಂದ ನೀವು ಮರಳುವಾಗ ವಾಪಾಸ್ಸು ಹೋಗುವಾಗ ತ್ರಿಪುರವಾಸಿನಿ ಎಕ್ಸಿಟ್ ಗೇಟ್ (ಹುಣಸೇಮರದ ಗೇಟ್) ನಲ್ಲಿ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಖ್ರಿ ಸರ್ಕಲ್ ಮುಖಾಂತರ ಹೋಗಬಹುದು.

ಸಾರ್ವಜನಿಕರಿಗೆ ಪರ್ಯಾಯ ಮಾರ್ಗ

* ಅರಮನೆ ರಸ್ತೆ : ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ವಸಂತನಗರ ಅಂಡರ್‌ಪಾಸ್ ವರೆಗೆ ತೆರಳಬಹುದು

* ಎಂ.ವಿ.ಜಯರಾಮರಸ್ತೆ : ಅರಮನೆರಸ್ತೆ, ಬಿ.ಡಿ.ಎ. ಜಂಕ್ಷನ್‌ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಪಾಸ್‌ನಿಂದ ಹಳೇ ಉದಯ ಟಿ.ವಿ. ಜಂಕ್ಷನ್ ವರೆಗೆ. (ಎರಡು ದಿಕ್ಕಿನಲ್ಲಿ) ಸಾಗಬಹುದು.

* ಬಳ್ಳಾರಿ ರಸ್ತೆ : ಎಲ್.ಆರ್.ಡಿ.ಐ. ಯಿಂದ ಹೆಬ್ಬಾಳವರೆಗೆ ತೆರಳಬೇಕು.

* ಕನ್ನಿಂಗ್ ಹ್ಯಾಂರಸ್ತೆ : ಬಾಳೇಕುಂದ್ರಿ ಸರ್ಕಲ್‌ನಿಂದ ಲಿ ಮೆರಿಡಿಯನ್ ಅಂಡರ್ ಪಾಸ್‌ವರೆಗೆ ಬದಲಿ ಮಾರ್ಗದಲ್ಲಿ ಹೋಗಬಹುದು.

* ಮಿಲ್ಲರ್ಸ್ ರಸ್ತೆ : ಹಳೆ ಉದಯ ಟಿ.ವಿ. ಜಂಕ್ಷನ್ ನಿಂದಎಲ್.ಆರ್.ಡಿ.ಐ. ಜಂಕ್ಷನ್ ವರೆಗೆ.

* ಜಯಮಹಲ್ ರಸ್ತೆ : ಜಯಮಹಲ್ ರಸ್ತೆ ಹಾಗೂ ಬೆಂಗಳೂರು ಅರಮನೆಯ ಸುತ್ತಮುತ್ತಲ ರಸ್ತೆಗಳಿಗೆ ಸಂಪರ್ಕ ಸಾಧಿಸಬಹುದು.

* ಯಶವಂತಪುರ ಮತ್ತು ಮೇಖಿ ಸರ್ಕಲ್ ರಸ್ತೆ : ಯಶವಂತಪುರ-ಟಾಟಾ ವಿಜ್ಞಾನ ಸಂಸ್ಥೆ-ಮೇಖಿ ಸರ್ಕಲ್‌ವರೆಗೆ ಓಡಾಡಲು ಬದಲಿ ಮಾರ್ಗ ಸೂಚಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+