ಬೆಂಗಳೂರಿನ ಮಳೆಯಲ್ಲಿ ಕೆಲಸಕ್ಕೆ ಹೋದವರ ಪರದಾಟ: ಮನೆಗೆ ಹೋಗಬೇಕಾ? ಆಫಿಸ್ ಅಂಗಳದಲ್ಲೇ ಮಲಗಬೇಕಾ?
ಬೆಂಗಳೂರಿನ ಹವಾಮಾನ ಮುನ್ಸೂಚನೆ ನೋಡಿದರೆ ರಾತ್ರಿ ತನಕ ಕೂಡ ಮಳೆ ನಿಲ್ಲುವುದಿಲ್ಲ. ರಾಜಧಾನಿ ಬೆಂಗಳೂರಿಗೆ ಮುತ್ತಿಗೆ ಹಾಕಿರುವ ಹಿಂಗಾರು ಮಳೆ ಮೋಡಗಳು ಧೋ.. ಅಂತಾ ಮಳೆ ಸುರಿಸುತ್ತಿವೆ. ಹೀಗಾಗಿ ಜನರು ಕೂಡ ಮನೆಗೆ ಹೋಗುವ ಬದಲು ಇವತ್ತು ಕಚೇರಿಯಲ್ಲೇ ಮಲಗಿಬಿಡೋದು ಒಳ್ಳೆಯದು ಎಂಬ ಚಿಂತೆಯಲ್ಲಿ ಇದ್ದಾರೆ. ಯಾಕಪ್ಪಾ ಅಂದ್ರೆ ಕಚೇರಿ ಅಂದ್ರೆ ಆಫಿಸ್ ಬಿಟ್ಟು ಹೊರಟ ಸಮಯದಲ್ಲಿ ಭರ್ಜರಿ ಮಳೆ ಬಂದರೆ ಕಥೆ ಏನು? ಲ್ಯಾಪ್‌ಟಾಪ್ & ಮೊಬೈಲ್ ಪರಿಸ್ಥಿತಿ ಏನು? ಎಂಬ ಚಿಂತೆ ಶುರುವಾಗಿದೆ.
ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ
ಬೆಂಗಳೂರಿನಲ್ಲಿ ಮಳೆಯ ಪರಿಣಾಮ ಇಷ್ಟೆಲ್ಲಾ ಸಮಸ್ಯೆ ಶುರುವಾಗಿರುವ ಕಾರಣಕ್ಕೆ ಜನರು ಇದೀಗ ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೆ ಈಗಿನ ಸಮಸ್ಯೆಗಳಿಗೆ ಬಿಬಿಎಂಪಿ ಕಾರಣ & ಬಿಬಿಎಂಪಿ ಅಧಿಬೆಂಗಳೂರಿನಲ್ಲಿ ಮಳೆರಾಯ ತನ್ನ ನಿಜವಾದ ಮುಖ ತೋರಿಸುತ್ತಿದ್ದಾನೆ, ಹೀಗಾಗಿ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದ 2 ವಾರ ಭರ್ಜರಿ ಮಳೆ ಕಾರಣ ಕನ್ನಡಿಗರು ನರಳಾಡಿ ಹೋಗಿದ್ದರು. ಹೀಗಿದ್ದಾಗ ಈ ವಾರ ನೆಮ್ಮದಿ ಸಿಗುತ್ತೆ ಬಿಡು, ಅನ್ನೋ ನಂಬಿಕೆ ಜನರಲ್ಲಿ ಇತ್ತು. ಆದರೆ ಈ ವಾರ ಕೂಡ ಮಳೆ ತನ್ನ ಅಸಲಿ ರೂಪ ತೋರಿಸಿದ್ದು, ಮಂಗಳವಾರ ಕೂಡ ಭಾರಿ ಮಳೆ ಶುರುವಾಗಿದೆ. ಆದರೆ ಮಳೆ ಮುನ್ಸೂಚನೆ ಇಲ್ಲದೆ ಕಚೇರಿಗೆ ಬಂದ ಜನರ ಪರಿಸ್ಥಿತಿ ಏನಾಗಿದೆ? ಬನ್ನಿ ತಿಳಿಯೋಣ.

ಬೆಂಗಳೂರಿನಲ್ಲಿ ಮಳೆಯ ಆರ್ಭಟದ ಹಿನ್ನೆಲೆ ಜನರ ಪರದಾಟ ಶುರುವಾಗಿದೆ. ಮಧ್ಯಾಹ್ನದ ತನಕ ಬಿಸಿಲು ಇದ್ದು, ಮಧ್ಯಾಹ್ನದ ನಂತರ ದಿಢೀರ್ ಶುರುವಾದ ಭಾರಿ ಮಳೆ ಕಂಡು ಜನರು ಹೆದರಿದ್ದಾರೆ. ಮಳೆ ಬೀಳುವ ಮುನ್ಸೂಚನೆ ಇಲ್ಲದೆ ಕಚೇರಿ ಮುಗಿಸಿ ಮನೆಗೆ ಹೋಗಲು ಪರದಾಡುತ್ತಿರುವ ಬೆಂಗಳೂರು ನಿವಾಸಿಗಳು, ಮಳೆ ನಿಲ್ಲುವ ನಿರೀಕ್ಷೆಯಲ್ಲಿ ಆಕಾಶ ನೋಡುತ್ತಿದ್ದಾರೆ. ಆದರೆ ರಾತ್ರಿ ತನಕ ಮಳೆ ನಿಲ್ಲುವ ಸಾಧ್ಯತೆ ಇಲ್ಲ. ಅದರಲ್ಲೂ ಉತ್ತರ ಬೆಂಗಳೂರಿನ ಪರಿಸ್ಥಿತಿ ಏನಾಗಿದೆ ಗೊತ್ತಾ?
ಆಫಿಸ್ ಅಂಗಳದಲ್ಲೇ ಮಲಗಬೇಕಾ?
ಬೆಂಗಳೂರಿನ ಮಳೆಯ ಮುನ್ಸೂಚನೆ ನೋಡಿದರೆ ಸದ್ಯಕ್ಕೆ ಮಳೆ ನಿಲ್ಲುವ ಯಾವುದೇ ಲಕ್ಷಣ ಈಗ ಕಾಣಿಸುತ್ತಿಲ್ಲ. ಅದ್ರಲ್ಲೂ ಬೆಂಗ್ಳೂರಿನ ಉತ್ತರ ಭಾಗದಲ್ಲಿ ಹೆಬ್ಬಾಳ, ಯಲಹಂಕ ಹೀಗೆ ಹಲವು ಪ್ರದೇಶಗಳು ಸೇರಿದಂತೆ ಉತ್ತರ ಬೆಂಗಳೂರು ತತ್ತರಿಸಿ ಹೋಗಿದೆ. ಮೇಘಸ್ಫೋಟ ಕಾರಣಕ್ಕೆ ಉತ್ತರ ಬೆಂಗಳೂರಿನ ರಸ್ತೆಗಳು ತುಂಬಿ ತುಳುಕುತ್ತಿದ್ದು, ರಸ್ತೆಗಳಲ್ಲಿ ವಾಹನ ಸಂಚಾರ ಕೂಡ ದೊಡ್ಡ ಸಮಸ್ಯೆಯಾಗಿದೆ. ಮತ್ತೊಂದು ಕಡೆ ಜನರು ಹೇಗಾದರೂ ಮಾಡಿ ಮನೆ ತಲುಪಬೇಕು ಎಂಬ ಪ್ರಯತ್ನದಲ್ಲಿ ಪರದಾಡುತ್ತಿದ್ದಾರೆ.ಕಾರಿಗಳ ನಿರ್ಲಕ್ಷ್ಯದ ಪರಿಣಾಮ ಹೀಗೆಲ್ಲಾ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ನಿನ್ನೆ ರಾತ್ರಿಯಿಂದ ಕೂಡ ಬಿಬಿಎಂಪಿ ಅಧಿಕಾರಿ ವರ್ಗ ನೀರು ನಿಂತ ಕಡೆಗಳಲ್ಲಿ ಹೋಗಿ ಪರಿಸ್ಥಿತಿ ಸರಿ ಮಾಡಲು ಪರದಾಡುತ್ತಿದೆ. ಇನ್ನೊಂದು ಕಡೆ ಬೆಂಗಳೂರಿನ ಬಹುತೇಕ ಕೆರೆ & ಕಟ್ಟೆಗಳು ತುಂಬಿ ತುಳುಕುತ್ತಿವೆ.












Click it and Unblock the Notifications