ಎಚ್ಚರ ! ತೀವ್ರ ಉಷ್ಣಾಂಶ, ಬೆಂಗಳೂರಲ್ಲಿ ಶೇ 15ರಷ್ಟು ವೈರಲ್ ಸೋಂಕು
ಬೆಂಗಳೂರು, ಮಾರ್ಚ್01: ಪ್ರತಿ ವರ್ಷದ ಬೇಸಿಗೆ ಸಾಮಾನ್ಯವಾಗಿ ಅಧಿಕ ವೈರಸ್ ಸೋಂಕು ತಗುಲುವ ಕಾಲ. ಈ ವರ್ಷ ವಾಸ್ತವವಾಗಿ ಜಾಗತಿಕ ತಾಪಮಾನದ ಪರಿಣಾಮವಾಗಿ ಉಷ್ಣಾಂಶದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ಬಾರಿ ಬೇಸಿಗೆ ಬೇಗ ಆರಂಭವಾಗಿರುವುದು ಮತ್ತು ಹಗಲಿನ ವೇಳೆ ಅತ್ಯಧಿಕ ಉಷ್ಣಾಂಶ ದಾಖಲಾಗಿರುವುದು ಹಾಗೂ ರಾತ್ರಿಯ ವೇಳೆ ತಾಪಮಾನ ಕಡಿಮೆ ಇರುವುದು ಬೆಂಗಳೂರಿಗರ ಆರೋಗ್ಯಕ್ಕೆ ಮಾರಕವಾಗಿದೆ. ವಾತಾವರಣದಲ್ಲಿನ ಬದಲಾವಣೆ ಈಗಾಗಲೇ ಫ್ಲೂ, ಉಸಿರಾಟದ ತೊಂದರೆಗಳು ಮತ್ತು ಆಹಾರ ಸಂಬಂಧಿ ಸೋಂಕುಗಳಿಗೆ ಕಾರಣವಾಗಿದೆ.
ತಾಪಮಾನ ಏರಿಕೆಯ ಪರಿಣಾಮಗಳನ್ನು ವಿವರಿಸಿದ ನಾರಾಯಣ ಹೆಲ್ತ್ ಸಿಟಿ ಆಂತರಿಕ ಔಷಧಿಗಳ ಸಲಹೆಗಾರ ಡಾ.ಮಹೇಶ್ ಕುಮಾರ್, "ಹವಾಮಾನ ಬದಲಾವಣೆಯು ನಮ್ಮ ರೋಗನಿರೋಧಕ ವ್ಯವಸ್ಥೆಗೆ ಸವಾಲಾಗಿದ್ದು, ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದಾಗ್ಯೂ ಬೇಸಿಗೆ ಮೊದಲೇ ಆರಂಭವಾಗಿರುವುದರಿಂದ ಹಾಗೂ ಅಧಿಕ ತಾಪಮಾನವು ನಮ್ಮ ಅರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ನಮಗೆ ಈಗಾಗಲೇ ಈ ವರ್ಷ ವೈರಸ್ ಸೋಂಕು ರೋಗಿಗಳಲ್ಲಿ ಶೇಕಡ 15ರಷ್ಟು ಹೆಚ್ಚಳ ಕಂಡುಬಂದಿದೆ. ಉಷ್ಣಾಂಶದ ವಿಧಾನ ಕೂಡಾ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ರಾತ್ರಿಯ ವೇಳೆ ಹೆಚ್ಚು ತಂಪು ಇರುವುದು ಮತ್ತು ಹಗಲಿನ ವೇಳೆ ಅಧಿಕ ತಾಪಮಾನ ಇರುವುದರಿಂದ ನಮ್ಮ ದೇಹ ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಈ ಕಾರಣದಿಂದ ಇನ್‍ಫ್ಲುಯೆಂಝಾ ಮತ್ತು ಶ್ವಾಸಕೋಶದ ಉರಿಯೂತದಂಥ ವೈರಸ್ ಸಂಬಂಧಿತ ಉಸಿರಾಟದ ಸೋಂಕು ಹೊಂದಿದ ರೋಗಿಗಳ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ ಕಂಡುಬಂದಿದೆ. ಆಹಾರ ಮತ್ತು ನೀರು ಸಂಬಂಧಿತ ಸೋಂಕುಗಳು ಕೂಡಾ ಅಧಿಕವಾಗಿರುವುದು ಗಮನಕ್ಕೆ ಬಂದಿದೆ" ಎಂದು ಹೇಳಿದ್ದಾರೆ.
"ಇದಕ್ಕಿಂತ ಹೆಚ್ಚಾಗಿ ಈ ವರ್ಷ ಆತಂಕಕಾರಿ ಅಂಶವೆಂದರೆ ಸೋಂಕಿನ ತೀವ್ರತೆ. ಈ ಬಾರಿ ಹೆಚ್ಚು ತೀವ್ರ ಸ್ವರೂಪದ ಸೋಂಕುಗಳು ಕಂಡುಬರುತ್ತಿವೆ" ಎಂದು ಡಾ.ಮಹೇಶ್ ಕುಮಾರ್ ವಿವರಿಸಿದ್ದಾರೆ. ಈ ಪೈಕಿ ಕೆಲ ಸ್ಥಿತಿಗಳು ತಪ್ಪಿಸಲು ಅಸಾಧ್ಯವಾದದ್ದಾಗಿದ್ದರೂ, ಈ ಪೈಕಿ ಬಹುತೇಕ ಪ್ರಕರಣಗಳನ್ನು ನಮ್ಮ ದೇಹದ ರೋಗನಿರೋಧಕ ಶಕ್ತಿ ಸುಧಾರಿಸಿಕೊಳ್ಳುವುದು, ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ ಮತ್ತು ಸೋಂಕು ತಡೆಯುವಂಥ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಇದನ್ನು ನಿಭಾಯಿಸಬಹುದಾಗಿದೆ".

ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಈ ಕೆಳಗೆ ಸೂಚಿಸಲಾಗಿದೆ:
1. ಸದಾ ದ್ರವಾಂಶ ಇರುವಂತೆ ನೋಡಿಕೊಳ್ಳಿ: ಪ್ರತಿದಿನ 2.5 ರಿಂದ 3 ಲೀಟರ್ ವರೆಗೆ ನೀರು ಕುಡಿಯುವುದರಿಂದ ಮಾಂಸಖಂಡದ ಆರ್ದ್ರತೆ ಪ್ರಮಾಣ ಸುಧಾರಿಸುವುದು ಮಾತ್ರವಲ್ಲದೇ ಇದು ಮಾಂಸಖಂಡಗಳ ನೋವನ್ನು ತಡೆಯುತ್ತದೆ ಹಾಗೂ ಬೇಸಿಗೆಯಲ್ಲಿ ಸಾಮಾನ್ಯವಾಗಿರುವ ಆಯಾಸ ಅಥವಾ ಬಳಲಿಕೆಯನ್ನು ಕಡಿಮೆ ಮಾಡುತ್ತದೆ.

ಮನೆಯಲ್ಲೇ ಸಿದ್ಧಪಡಿಸಿದ ಆಹಾರ ಸೇವಿಸಿ
2. ಪ್ಯಾಕ್ ಮಾಡಿದ ಮತ್ತು ಫ್ರಿಡ್ಜ್ ಆಹಾರಗಳು ಬೇಡ: ತಾಜಾ ಹಾಗೂ ಮನೆಯಲ್ಲೇ ಸಿದ್ಧಪಡಿಸಿದ ಆಹಾರವನ್ನು ಸಾಧ್ಯವಾದಷ್ಟೂ ಹೆಚ್ಚು ಸೇವಿಸಿ. ಫ್ರಿಡ್ಜ್‍ನಲ್ಲಿಟ್ಟ ಆಹಾರ, ದಾಸ್ತನು ಮಾಡಿದ ಮತ್ತು ಪ್ಯಾಕ್ ಮಾಡಲಾದ ಆಹಾರವಸ್ತುಗಳನ್ನು ಸೇವಿಸುವುದು ಪದೇ ಪದೇ ಸೋಂಕು ಆಹ್ವಾನಿಸಲು ಕಾರಣವಾಗುತ್ತದೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಾದ ಅಜೀರ್ಣತೆ ಹಾಗೂ ಗ್ಯಾಸ್ಟ್ರಾಯಿಟೀಸ್‍ಗೆ ಇದು ಕಾರಣವಾಗುತ್ತದೆ.

ವ್ಯಾಯಾಮ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಲಿ
3. ವ್ಯಾಯಾಮ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಲಿ: ವ್ಯಾಯಾಮದ ಮೂಲಕ ದೈನಂದಿನ ಚಟುವಟಿಕೆಗಳನ್ನು ಆರಂಭಿಸುವುದು ಹೆಚ್ಚು ಚೇತೋಹಾರಿ. ಇದು ಎಲುಬು ಮತ್ತು ಮಾಂಸಖಂಡಗಳಲ್ಲಿನ ಪೋಷಕಾಂಶ ಹೀರಿಕೊಳ್ಳುವ ಹಾಗೂ ಹಿಡಿದಿಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಡಿ ದೇಹದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ನಿಯತವಾಗಿ ಲಸಿಕೆ ಹಾಕಿಸಿಕೊಳ್ಳಿ
4. ನಿಯತವಾಗಿ ಲಸಿಕೆ ಹಾಕಿಸಿಕೊಳ್ಳಿ: ಇನ್‍ಫ್ಲುಯೆಂಝಾ ಮತ್ತು ಟೈಫಾಯ್ಡ್ ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಖಂಡಿತವಾಗಿಯೂ ಜನರಿಗೆ ನೆರವಾಗುವುದು ಮಾತ್ರವಲ್ಲದೇ, ಸಮುದಾಯದಲ್ಲಿ ಇಂಥ ಸೋಂಕುಗಳು ಮತ್ತೆ ಹರಡುವುದನ್ನು ತಡೆಯುವಲ್ಲಿ, ರೋಗ ಪ್ರಮಾಣ ಹಾಗೂ ಪದೇ ಪದೇ ಆಂಟಿಬಯಾಟಿಕ್ಸ್ ಬಳಕೆಯನ್ನು ಕಡಿಮೆ ಮಾಡುವಲ್ಲೂ ಇದು ನೆರವಾಗುತ್ತದೆ.

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಬಗ್ಗೆ
ನಾರಾಯಣ ಹೆಲ್ತ್ ಸಿಟಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿದ್ದು, ಇದರಲ್ಲಿ ಹೃದ್ರೋಗ ಮತ್ತು ಹೃದಯ ಶಸ್ತ್ರಚಿಕಿತ್ಸೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ನಾರಾಯಣ ಹೃದ್ರೋಗ ಸಂಸ್ಥೆ, ಕ್ಯಾನ್ಸರ್ ಚಿಕಿತ್ಸೆ, ನರರೋಗ ಮತ್ತು ನರಶಸ್ತ್ರಚಿಕಿತ್ಸೆ, ಮೂತ್ರರೋಗ, ಮೂತ್ರಶಾಸ್ತ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ಮಜೂಂದರ್ ಶಾ ವೈದ್ಯಕೀಯ ಕೇಂದ್ರ (ಎಂಎಸ್‍ಎಂಸಿ)ಯನ್ನು ಹೊಂದಿದೆ. ಬಹುಶಃ ದೇಶದಲ್ಲೇ ಅತಿ ದೊಡ್ಡದು ಎನ್ನಲಾದ ಅಸ್ಥಿಮಚ್ಛೆ ಕಸಿ ಕೇಂದ್ರವನ್ನೂ ಹೊಂದಿದೆ. ನಾರಾಯಣ ಹೆಲ್ತ್ ಸಿಟಿ ಅಂಗಂಶ ಕಸಿ ಬ್ಯಾಂಕ್ ಮತ್ತು ಹೊಮೊಗ್ರಾಫ್ಟ್ ವಾಲ್ವ್ ಬ್ಯಾಂಕನ್ನು ಕೂಡಾ ನಿರ್ವಹಿಸುತ್ತಿದೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Summer Super Drink: ಪ್ರತಿದಿನ ಎರಡು ಗ್ಲಾಸ್ ಕಬ್ಬಿನ ರಸ: ಬೇಸಿಗೆಯ ಸೂಪರ್ ಡ್ರಿಂಕ್ -
Summer Walking: ಬೇಸಿಗೆಯಲ್ಲಿ ವಾಕಿಂಗ್ ಮಾಡುವವರು ಈ ನಿಯಮ ತಪ್ಪದೇ ಪಾಲಿಸಿ.. -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು












Click it and Unblock the Notifications