ಬೆಂಗಳೂರಿನಲ್ಲಿ ಕಾರೈಕುಡಿ ಮೂಲದ ವಲ್ಲಿಯಮೈ ಆತ್ಮಹತ್ಯೆ

ಬೆಂಗಳೂರು, ನವೆಂಬರ್ 27: ತಮಿಳುನಾಡು ಮೂಲದ ಮಹಿಳೆಯೊಬ್ಬರು ಸೋಮವಾರ ಬೆಂಗಳೂರಿನ ಮಾರತಳ್ಳಿಯ ಸೆಸ್ನಾ ಬ್ಯುಸಿನೆಸ್ ಪಾರ್ಕ್ ನಲ್ಲಿರುವ ಅಲ್ತಾಫ್ ಹೋಟೆಲ್ ನ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಮಿಳುನಾಡಿನ ಕಾರೈಕುಡಿ ಮೂಲದ ವಿ. ವಲ್ಲಿಯಮೈ (36) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಆದರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Tamil Nadu woman commits suicide by jumping from hotel's 9th floor in Bengaluru

ಪೇಂಟಿಂಗ್ ಕಿಟ್ ಒಂದನ್ನು ಹಿಡಿದು ಹೋಟೆಲ್ ನ ಒಂಭತ್ತನೇ ಮಹಡಿಯಿಂದ ಹಾರಿದ್ದಾರೆ. ಭಾನುವಾರ ಸಂಜೆ ಹೋಟೆಲ್ ನಲ್ಲಿ ತಂಗಿದ್ದು, ಮಹಿಳೆಯ ರೂಮ್ ನಲ್ಲಿ ಯಾವುದೇ ಡೆತ್ ನೋಟ್ ಸಿಕಿಲ್ಲ. ನಾವು ಆಕೆಯ ಪತಿ ಹಾಗೂ ಮಕ್ಕಳ ಮಾಹಿತಿಗಾಗಿ ಹುಡುಕುತ್ತಿದ್ದೇವೆ ಎಂದು ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹಾದ್ ಹೇಳಿದ್ದಾರೆ.

ಪೇಂಟಿಂಗ್ ಕಿಟ್ ಅನ್ನು ಕೈಯಲ್ಲಿ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದರೆ ಈಕೆ ಪೇಟಿಂಗ್ ಆರ್ಟಿಸ್ಟ್ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾರತಹಳ್ಳಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+