Second International Airport: 2ನೇ ಏರ್‌ಪೋರ್ಟ್ ಯೋಜನೆಗೆ BIAL ಭೇಟಿ, ಮಹತ್ವದ ಚರ್ಚೆ
ಬೆಂಗಳೂರು, ಏಪ್ರಿಲ್ 29: ಬೆಂಗಳೂರು ಎರಡನೇ ವಿಮಾನ ನಿಲ್ದಾಣ (Bengaluru Second Airport) ನಿರ್ಮಾಣದ ಸ್ಥಳ ಪರಿಶೀಲನೆ ಪೂರ್ಣಗೊಂಡಿದೆ. ಬೆಂಗಳೂರಿಗೆ ಟಕ್ಕರ್ ನೀಡುವಂತೆ ತಮಿಳುನಾಡು ಸಹ ಹೊಸೂರಿನಲ್ಲಿ ವಿಶಾಲ 2000 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಏರ್‌ಪೋರ್ಟ್ ನಿರ್ಮಿಸುವ ಯೋಜನೆಗೆ ಘೋಚಿಸಿತ್ತು. ಅದರ ಮುಂದುವರಿದ ಭಾಗವಾಗಿ ಇದೀಗ ತಮಿಳುನಾಡಿನ ಸರ್ಕಾರ ಏರ್‌ಪೋರ್ಟ್ ಯೋಜನೆಗಾಗಿ BIAL ಬೆಂಬಲಿತ ಸಂಸ್ಥೆಯನ್ನು ಸಂಪರ್ಕಿಸಿದೆ.
ಹೊಸೂರಿನಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಬೆಂಬಲಿತ ಫೇರ್‌ಫ್ಯಾಕ್ಸ್ ಸಂಸ್ಥೆಯೊಂದಿಗೆ ಚರ್ಚೆ ನಡೆಸಿದೆ. ಈಗಾಗಲೇ ಈ ಬಗ್ಗೆ BIAL ಸಕ್ರಿಯವಾಗಿ ಉತ್ತರಿಸಿದೆ. ಇನ್ನಷ್ಟು ಚರ್ಚೆಗಳು ನಡೆಯಬೇಕಿದೆ. ಇದೆಲ್ಲ ಬೆಳವಣಿಗೆ ನೋಡಿದರೆ ತಮಿಳುನಾಡು ಸರ್ಕಾರ ಏರ್‌ಪೋರ್ಟ್ ನಿರ್ಮಾಣದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ ಎಂಬುದು ಗೊತ್ತಾಗುತ್ತದೆ.

ವಾರ್ಷಿಕವಾಗಿ 30 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಸಾಮರ್ಥ್ಯದ ಸುವ್ಯವಸ್ಥಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದರು. ಈ ಏರ್‌ಪೋರ್ಟ್ ಒಟ್ಟು ಸುಮಾರು 2,000 ಎಕರೆಗಳಲ್ಲಿ ಈ ಏರ್‌ಪೋರ್ಟ್ ತಲೆ ಎತ್ತಲಿದೆ. ಇದೊಂದು ಮಹತ್ವದ ಯೋಜನೆ ಆಗಿರುವ ಕಾರಣ, ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮದ (ಟಿಡ್ಕೊ) ಉನ್ನತ ಅಧಿಕಾರಿಗಳು ಬಿಐಎಎಲ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ 10,800 ಕ್ಕೂ ಹೆಚ್ಚುಸ್ಟಾರ್ಟ್-ಅಪ್ ಕಂಪನಿಗಳು ಬೆಳೆಯುತ್ತಿವೆ ಎಂದು ಟಿ.ಎಂ. ಅನ್ಬರಸನ್ ಹೇಳಿದ್ದಾರೆ. ಬಿಐಎಎಲ್ ಜೊತೆ ಸಭೆ ನಡೆದಿದೆ. 2033 ರವರೆಗೆ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ಇರಬಾರದು ಎಂಬ ಒಪ್ಪಂದಿವೆ. ಹೀಗಾಗಿ ಅದಕ್ಕೂ ಮೊದಲು ಹೊಸೂರು ವಿಮಾನ ನಿಲ್ದಾಣವನ್ನು ನಿರ್ವಹಿಸುವುದು ಆಗುವುದಿಲ್ಲ. ಆದರೆ ನಿರ್ಮಾಣಕ್ಕೆ ಬೇಕಾದ ಎಲ್ಲ ಆಯ್ಕೆಗಳು, ಪೂರಕೆ ಅಂಶಗಳನ್ನು ಸಂಶೋಧಿಸಲಾಗುತ್ತದೆ.
BIAL ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ನಿರ್ವಹಿಸುತ್ತದೆ. ಕೆನಡಾದ ಫೇರ್‌ಫ್ಯಾಕ್ಸ್ ಗ್ರೂಪ್ ನಲ್ಲಿ ಶೇಕಡಾ 64ರಷ್ಟು ಪಾಲು ಹೊಂದಿದೆ. ಆದರೆ ಸೀಮೆನ್ಸ್ ಪ್ರಾಜೆಕ್ಟ್ ವೆಂಚರ್ಸ್ 10ರಷ್ಟು ಪಾಲು ಹೊಂದಿದೆ. ಉಳಿದಂತೆ ಕರ್ನಾಟಕದ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಎಎಐನಲ್ಲೂ ಪಾಲು ಹೊಂದಿದೆ. ಹೀಗಾಗಿ ಬಿಐಎಎಲ್ ನಿರ್ಧಾರ, ಮಾಡಿಕೊಳ್ಳುವ ಒಪ್ಪಂದಗಳ ಪ್ರಮುಖವಾಗಿರುತ್ತವೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2008 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಏರ್‌ಪೋರ್ಟ್ ಸುತ್ತಮುತ್ತ 150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯವ ವಿಮಾನ ನಿಲ್ದಾಣ ನಿರ್ಮಿಸದಂತೆ ಒಪ್ಪಂದ ಇದೆ. ಅದು 2033 ರ ಹೊತ್ತಿಗೆ ಮುಗಿಯಲಿದೆ. ಅಷ್ಟೊತ್ತಿಗಾಗಿ ಹೊಸೂರಿನಲ್ಲಿ ತಮಿಳುನಾಡು ಸರ್ಕಾರ, ಬೆಂಗಳೂರಿನ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿನರ್ಮಿಸಲು ಕರ್ನಾಟಕ ಸರ್ಕಾರ ಪ್ಲಾನ್ ಮಾಡಿಕೊಂಡಿವೆ. ಸದ್ಯ ರಾಜ್ಯ ಸರ್ಕಾರಗಳು ಯೋಜನೆಗೆ ಫೈನಲ್ ಮಾಡಿರುವ ಜಾಗಗಳ ಪರಿಶೀಲನೆ ಆಗಿದೆ. ಅದರ ಒಪ್ಪಿಗೆ, ಅನುಮೋದನೆಯು ಕೇಂದ್ರ ಸರ್ಕಾರದ ಮುಂದಿದೆ..












Click it and Unblock the Notifications