SWR: ದೀಪಾವಳಿ ಪ್ರಯುಕ್ತ ಬೆಂಗಳೂರಿನಿಂದ ವಿಶೇಷ ರೈಲುಗಳ ಸಂಚಾರ: ನಿಲುಗಡೆ, ವೇಳಾಪಟ್ಟಿ

ಬೆಂಗಳೂರು, ಅಕ್ಟೋಬರ್ 13: ಮುಂದಿನ ವಾರವೇ ದೀಪಾವಳಿ ಹಬ್ಬದ ಆಚರಣೆ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಊರುಗಳಿಗೆ ತೆರಳುವ ಜನರ ಸಂಖ್ಯೆ ಹೆಚ್ಚಿರುತ್ತದೆ. ಈ ಹಬ್ಬದ ಜನ ದಟ್ಟಣೆ ನಿವಾರಣೆಗೆ ಹಾಗೈ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ (SWR) ಯು ರಾಜಧಾನಿ ಬೆಂಗಳೂರಿನಿಂದ ಕೊಲ್ಲಂ ಹಾಗೂ ಕೊಳ್ಳಂನಿಂದ ಬೆಂಗಳೂರಿಗೆ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸುತ್ತಿದೆ. ಈ ರೈಲಿನ ನಿಲುಗಡೆ, ಸಮಯ, ವೇಳಾಪಟ್ಟಿ ವಿವರ ಇಲ್ಲಿದೆ.

ಎಸ್‌ಎಂವಿಟಿ ಬೆಂಗಳೂರು - ಕೊಲ್ಲಂ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಖ್ಯೆ (06567) 2025 ಅಕ್ಟೋಬರ್ 21ರಿಂದ ಸಂಚರಿಸುತ್ತದೆ. ಅಂದು ಮಂಗಳವಾರ ರಾತ್ರಿ 11.00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡುತ್ತದೆ. ಮರುದಿನ ಅಕ್ಟೋಬರ್ 22ರಂದು ಮಧ್ಯಾಹ್ನ 12.55ಕ್ಕೆ ಕೊಲ್ಲಂ ತಲುಪಲಿದೆ. ಈ ರೈಲು ಒಂದು ಬಾರಿ ಮಾತ್ರ ಸಂಚರಿಸುತ್ತದೆ.

Special Bengaluru Kollam Express Announced for October to Clear Diwali Rush

ಕೊಲ್ಲಂ - ಬೆಂಗಳೂರು ಕ್ಯಾಂಟೋನ್ಮೆಂಟ್ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು (ಸಂಖ್ಯೆ 06568) 2025 ಅಕ್ಟೋಬರ್ 22ರಂದು ಬುಧವಾರ ಸಂಜೆ 5 ಗಂಟೆಗೆ ಕೊಲ್ಲಂ ನಿಲ್ದಾಣದಿಂದ ಹೊರಡುತ್ತದೆ. ಮರುದಿನ ಅಕ್ಟೋಬರ್ 23ರಂದು ಬೆಳಗ್ಗೆ 9.45ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣಕ್ಕೆ ಬಂದು ಸೇರಲಿದೆ.

ರೈಲು ನಿಲುಗಡೆ ನಿಲ್ದಾಣಗಳು & ಸಮಯ

ಎಸ್‌ಎಂವಿಟಿ ಬೆಂಗಳೂರು - ಕೊಲ್ಲಂ ರೈಲು (ಸಂಖ್ಯೆ 06567) ಕೆ.ಆರ್ ಪುರಂ (23.10 ಗಂಟೆಗೆ ಆಗಮಿಸಿ/23.12ಕ್ಕೆ ನಿಗಮಿಸುತ್ತದೆ), ಅದೇ ರೀತಿ ಬಂಗಾರಪೇಟೆ ನಿಲ್ದಾಣ (00.03/00.05), ಸೇಲಂ (03.07/03.10), ಈರೋಡ್ (04.05/04.10), ತಿರುಪ್ಪೂರು (04.53/04.55), ಪೊಡನೂರ್ (05.48/05.50), ಪಾಳಕ್ಕಾಡ್ (06.45/06.50), ತ್ರಿಶೂರ್ (07.42/07.45), ಅಲುವಾ (08.40/08.42), ಏರ್ನಾಕುಲಂ ಟೌನ್ (09.15/09.20), ಕೋಟಾಯಂ (10.25/10.28), ಚಂಗಾನಸೇರಿ (10.45/10.46), ತಿರುವಲ್ಲ (10.55/10.56), ಚೆಂಗಣ್ಣೂರು (11.05/11.07), ಮಾವೆಲಿಕ್ಕರ (11.19/11.20), ಕಯಂಕುಳಂ (11.28/11.30) ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ಈ ರೈಲು ಎಲ್ಲ ವಿಧದ ಬೋಗಿಗಳನ್ನು ಹೊಂದಿದೆ. 2 ಎಸಿ ಟೂ ಟೈರ್ ಬೋಗಿಗಳು, 3 ಎಸಿ ತ್ರಿ ಟೈಯರ್ ಬೋಗಿಗಳು, 11 ಸ್ಲೀಪರ್ ಬೋಗಿಗಳು, 4 ಸಾಮಾನ್ಯ ದ್ವಿತೀಯ ವರ್ಗ ಬೋಗಿಗಳು ಹಾಗೂ 2 ದಿವ್ಯಾಂಗ ಸ್ನೇಹಿ ಬೋಗಿಗಳು ಇರಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೈಲು ಸೇವೆಗಳು ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ತಮಿಳುನಾಡು ಹಾಗೂ ಕೇರಳದ ನಡುವಿನ ಪ್ರಯಾಣಿಕರಿಗೆ ಅನುಕೂಲ ಒದಗಿಸಲಿವೆ. ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ರೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+