Get Updates
Get notified of breaking news, exclusive insights, and must-see stories!

Dairy Summit 2025: ಇಂದಿನಿಂದ ಡೈರಿ ಶೃಂಗಸಭೆ: 1.19 ಲಕ್ಷ ಲೀ.ಹಾಲು ಪೂರೈಸಿ ಮಂಡ್ಯ ಮಹಿಳೆ ಸಾಧನೆ, 5 ಸಾಧಕಿಯರು

ಬೆಂಗಳೂರು, ಜನವರಿ 09: ಕರ್ನಾಟಕ ಸೇರಿದಂತೆ ವಿವಿಧ ಐದು ರಾಜ್ಯದ ಮಹಿಳಾ ಹೈನುಗಾರರನ್ನು ಉದ್ದೇಶವಾಗಿಟ್ಟುಕೊಂಡು ಬೆಂಗಳೂರಿನಿಂದ ಇಂದಿನಿಂದ ಮೂರು ದಿನಗಳ ಕಾಲ (ಜನವರಿ 9 ರಿಂದ 11) 'ದಕ್ಷಿಣ ಭಾರತದ ಹೈನುಗಾರಿಕಾ ಶೃಂಗಸಭೆ 2025' ಬೆಂಗಳೂರಿನಲ್ಲಿ ನಡೆಯುತ್ತಿದೆ. ರಾಜ್ಯದ ಮಂಡ್ಯ ಜಿಲ್ಲೆಯ ಮಹಿಳಾ ಹೈನುಗಾರರೊಬ್ಬರು ಒಂದು ಲಕ್ಷಕ್ಕೂ ಅಧಿಕ ಹಾಲನ್ನು ಪೂರೈಕೆ ಮಾಡಿದ್ದು, ಅವರ ಸೇರಿದಂತೆ ಐವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು 'ಭಾರತೀಯ ಡೈರಿ ಅಸೋಸಿಯೇಷನ್' ಮಾಹಿತಿ ನೀಡಿದೆ.

'ಭಾರತೀಯ ಡೈರಿ ಅಸೋಸಿಯೇಷನ್' ಆಯೋಜಿಸಿದ ಮೊದಲ ಡೈರಿ ಸಮ್ಮೇಳನ ಇದಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಹಿಳಾ ಹೈನುಗಾರರ ಸಾಧನೆಯ ವಿಶ್ವರೂಪ ಜಗತ್ತಿಗೆ ಸಾರಲಾಗುತ್ತಿದೆ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ 05 ಯಶಸ್ವಿ ಹೈನುಗಾರ ಮಹಿಳೆಯರು ಬೆಂಗಳೂರಿನ ಕಾರ್ಯಕ್ರಮ ಸನ್ಮಾನ ಸ್ವೀಕರಿಸಲಿದ್ದಾರೆ.

Southern Dairy Summit 2025 in Bengaluru on Jan 9 to 11 Honoured to Five Successful dairy Women

ಇಂದಿನಿಂದ ಆರಂಭವಾದ ಡೈರಿ ಶೃಂಗ ಸಭೆಯಲ್ಲಿ 05 ರಾಜ್ಯಗಳ ಐವರು ಮಾದರಿ ಮಹಿಳಾ ಹಾಲು ಉತ್ಪಾದಕರ ಸನ್ಮಾನ ನಡೆಯಲಿದೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಕೇರಳ ಮಹಿಳಾ ಹೈನುಗಾರರು ತಮ್ಮ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಕರ್ನಾಟಕದ ಮಂಡ್ಯ ರೈತ ಮಹಿಳೆ ಅತ್ಯಧಿಕ ಹಾಲು ಪೂರೈಕೆ ಮಾಡಿ ಈ ವಲಯದಲ್ಲಿ ಸಾಧನೆ ಮೆರೆದಿದ್ದಾರೆ. ಈ ಎಲ್ಲ ಸೇರಿದಂತೆ ಸಾಧಕಿಯರ ಪರಿಚಯ ಇಲ್ಲಿದೆ.

ಮಹಿಳಾ ಸಾಧಕಿಯರು ಯಾರು? ಮಾದರಿ ಕೆಲಸಗಳು

* ಮಂಗಳಮ್ಮ ಮಂಡ್ಯ, ಕರ್ನಾಟಕ

ಶ್ರೀಮತಿ ಮಂಗಳಮ್ಮ ಕರ್ನಾಟಕದ ಮಂಡ್ಯ ಜಿಲ್ಲೆಯ ಡಿಂಕ ಗ್ರಾಮದವರಾಗಿದ್ದಾರೆ. ಮಂಡ್ಯ ಹಾಲು ಒಕ್ಕೂಟದ ಡಿಂಕಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿರುವ ಇವರು ತಮ್ಮ ಜಮೀನಿನಲ್ಲಿ 40 ಹಾಲು ಕೊಡುವ ದನಗಳನ್ನು ಹೊಂದಿದ್ದಾರೆ. ವೈಜ್ಞಾನಿಕ ಹೈನುಗಾರಿಕಾ ನಿರ್ವಹಣೆ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ ಅವರು ಹಿಂದಿನ ವರ್ಷದಲ್ಲಿ 1,01,900 ಲೀಟರ್‌ಗಿಂತಲೂ ಹೆಚ್ಚು ಹಾಲು ಪೂರೈಸಿ 30 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಆದಾಯ ಗಳಿಸಿದ್ದಾರೆ. ಈ ಮಾದರಿ ಮಹಿಳೆ 3 ಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ.

Southern Dairy Summit 2025 in Bengaluru on Jan 9 to 11 Honoured to Five Successful dairy Women

* ವಿಧು ರಾಜೀವ್, ಕೇರಳ

ಶ್ರೀಮತಿ ವಿಧು ರಾಜೀವ್ ಅವರು ಕೇರಳದ ಕೊಟ್ಟಾಯಂ ಜಿಲ್ಲೆಯ ಮುಟ್ಟುಚಿರಾ ಗ್ರಾಮದವರು. ಇವರು ಸರ್ಕಾರಿ ಡೈರಿ ಸಂಸ್ಥೆ, ಕೇರಳ ಡೈರಿ ಅಭಿವೃದ್ಧಿ ಇಲಾಖೆ, ಕೊಟ್ಟಾಯಂಗೆ ಹಾಲು ಪೂರೈಕೆ ಮಾಡುತ್ತಿದ್ದಾರೆ. ಪ್ರಸ್ತುತ 50 ಹಾಲು ಕರೆಯುವ ದನಗಳನ್ನು ಹೊಂದಿರುವ ಅವರು ಕಳೆದ ವರ್ಷ 10,4000ಲೀಟರ್ ಹಾಲು ಪೂರೈಕೆ ಮಾಡಿದ್ದಾರೆ. ಅದರಿಂದಲ 50 ಲಕ್ಷ ಆದಾಯ ಗಳಿಸುವ ಮೂಲಕ ಮಹಿಳಾ ಹೈನುಗಾರರಿಗೆ ಮಾದರಿಯಾಗಿದ್ದಾರೆ.

ಎಲ್ಲಾ ವೈಜ್ಞಾನಿಕ ನಿರ್ವಹಣಾ ಅಭ್ಯಾಸಗಳನ್ನು ಅಳವಡಿಸಿಕೊಂಡಿಸಿಕೊಂಡಿರುವ ಇವರು ಅತ್ಯುತ್ತಮ ಸಮಗ್ರ ರೈತ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ತಮ್ಮ ಆದಾಯ ಇನ್ನಷ್ಟು ಹೆಚ್ಚಿಸಿಕೊಳ್ಳಲು ಅವರು ತಮ್ಮ ಡೈರಿ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಉದ್ದೇಶಿಸಿದ್ದಾರೆ.

* ಪುಢಾರಿ ಗಂಗವ್ವ, ತೆಲಂಗಾಣ

ಶ್ರೀಮತಿ ಪುಢಾರಿ ಗಂಗವ್ವ ತೆಲಂಗಾಣದ ಜಗಿತ್ಯೆಲ್ಲಾ ಗ್ರಾಮಾಂತರ ಜಿಲ್ಲೆಯ ಸಂಗoಪಲ್ಲಿ ಗ್ರಾಮದವರು. ಅವರು ಕರೀಂನಗರ ಹಾಲು ಉತ್ಪಾದಕರ ಕಂಪನಿ ಲಿಮಿಟೆಡ್‌ನ ಸದಸ್ಯೆ ಮತ್ತು ತಮ್ಮ ಜಿಲ್ಲೆಯ ಹೈನುಗಾರರಿಗೆ ಮಾದರಿಯಾಗಿದ್ದಾರೆ. ಅವರು ವೈಜ್ಞಾನಿಕ ನಿರ್ವಹಣಾ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಕಳೆದ ವರ್ಷದಲ್ಲಿ 14,000 ಲೀಟರ್‌ಗಿಂತಲೂ ಹೆಚ್ಚು ಹಾಲು ಪೂರೈಕೆ ಮಾಡಿದ್ದಾರೆ.

* ನವೀನ ಕುಮಾರಿ, ಆಂಧ್ರ ಪ್ರದೇಶ

ಶ್ರೀಮತಿ ನವೀನ ಕುಮಾರಿ ಅವರು ಚಿತ್ತೂರು ಜಿಲ್ಲೆಯ ಮದ್ದಿರಾಳ ಗ್ರಾಮದವರು ಮತ್ತು ಶ್ರೀಜಾ ಮಹಿಳಾ ಹಾಲು ಉತ್ಪಾದಕರ ಕಂಪನಿ ಲಿಮಿಟೆಡ್, ತಿರುಪತಿಯ ಸದಸ್ಯರಾಗಿದ್ದಾರೆ. ಅವರು ಅನುಭವಿ ಹೈನುಗಾರ್ತಿ ಮತ್ತು ತಮ್ಮ ಪ್ರದೇಶದಲ್ಲಿ ಮಾದರಿಯಾಗಿದ್ದಾರೆ ಮತ್ತು ಹಿಂದಿನ ವರ್ಷ 9,000 ಲೀಟರ್‌ಗಿಂತ ಹೆಚ್ಚು ಹಾಲನ್ನು ಪೂರೈಕೆ ಮಾಡಿದ್ದಾರೆ. ಇವರು ತಮ್ಮ ಹಳ್ಳಿಯ ಅನೇಕ ರೈತರು ಕೃಷಿಯಿಂದ ಹೈನುಗಾರಿಕೆಯತ್ತ ಹೊರಳುವಂತೆ ಪ್ರೇರೇಪಿಸಿದ್ದಾರೆ.

* ಸೆಲ್ವನಾಯಕಿ, ತಮಿಳುನಾಡು

ಶ್ರೀಮತಿ ಸೆಲ್ವನಾಯಕಿ ತಿರುಪುರ್ ಜಿಲ್ಲೆಯ ಕೊಡಗಿಪಾಳ್ಯಂ ಗ್ರಾಮದವರಾಗಿದ್ದು, ಕಳೆದ 26 ವರ್ಷಗಳಿಂದ ಕೊಯಮತ್ತೂರಿನ ಎಬಿಟಿ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಹಾಲು ಪೂರೈಕೆ ಮಾಡುತ್ತಿದ್ದಾರೆ. ಅವರು ಹಾಲು ಉತ್ಪಾದನೆಯ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಸುಮಾರು 18 ದನಗಳನ್ನು ಸಾಕುತ್ತಿದ್ದಾರೆ. ಹಿಂದಿನ ವರ್ಷ ಸುಮಾರು 21,000 ಲೀಟರ್ ಹಾಲು ಪೂರೈಕೆ ಮಾಡಿದ್ದಾರೆ.

ಈ ಡೈರಿ ಸಮಾವೇಶವು ಕರ್ನಾಟಕದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಕೆ.ವೆಂಕಟೇಶ್ ಅವರು ನೇತೃತ್ವದಲ್ಲಿ ನಡೆಯುತ್ತಿದೆ. ಕೆಎಂಎಫ್, ಕೇರಳ ಅಧ್ಯಕ್ಷರು ಇನ್ನಿತರ ಪ್ರಮುಖರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+