Karnataka Rail: ಈ ಎಕ್ಸ್‌ಪ್ರೆಸ್ ರೈಲು 180 ನಿಮಿಷ ವಿಳಂಬ! ಜುಲೈನಲ್ಲಿ ರೈಲುಗಳ ವೇಳಾಪಟ್ಟಿ ಬದಲಾವಣೆ, ವಿವರ
ಬೆಂಗಳೂರು, ಜುಲೈ 08: ಭಾರತೀಯ ರೈಲ್ವೆ ವ್ಯಾಪ್ತಿಯಲ್ಲಿ ನಾರಾಯಣಗಢ ಮತ್ತು ಭದ್ರಕ್ ನಡುವಿನ ಮೂರನೇ ರೈಲು ಮಾರ್ಗದ ಕಾಮಗಾರಿಗೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮಾರ್ಗದ ಸೊರೊ ಮತ್ತು ಸಬಿರಾದಲ್ಲಿ ವಿವಿಧ ರೈಲುಗಳನ್ನು ನಿಯಂತ್ರಿಸಲಾಗುತ್ತಿದೆ. ರೈಲುಗಳ ವೇಳಾಪಟ್ಟಿಯಲ್ಲಿ ಒಂದಷ್ಟು ಬದಲಾವಣೆಗಳು ಆಗಿವೆ ಎಂದು ಆಗ್ನೇಯ ರೈಲ್ವೆ ಅಧಿಕಾರಿಗಳು ಅಪ್ಡೇಟ್ ನೀಡಿದ್ದಾರೆ.
ನಿಯಂತ್ರಣ ರೈಲುಗಳು ಯಾವುವು?
* ಜುಲೈ 18ರಿಂದ ಸಂಚಾರ ಆರಂಭಿಸುವ ಹೌರಾ-SMVT ಬೆಂಗಳೂರು ಡುರೊಂಟೊ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12245) ಮತ್ತು ಜುಲೈ 16.ರಿಂದ ಆರಂಭವಾಗುವ ಕಾಮಾಕ್ಯ SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳ (ಸಂಖ್ಯೆ 12552) SER ವ್ಯಾಪ್ತಿಯಲ್ಲಿ 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

* 2025 ಜುಲೈ 10 ರಂದು ಸೇವೆ ಆರಂಭಿಸುವ SMVT ಬೆಂಗಳೂರು-ಹೌರಾ ಡುರೊಂಟೊ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12246) ಮಾರ್ಗದಲ್ಲಿ 120 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ. ಇದರೊಂದಿಗೆ 2025 ಜುಲೈ 15 ರಂದು ಮರಳಿ ಬರುವ ಅದೇ ರೈಲನ್ನು ಅದೇ ಮಾರ್ಗದಲ್ಲಿ 90 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
* ಜುಲೈ 19 ರಂದು ಪ್ರಾರಂಭವಾಗುವ ರೈಲು (ಸಂಖ್ಯೆ 12551) SMVT ಬೆಂಗಳೂರು ಕಾಮಾಕ್ಯ ಎಕ್ಸ್‌ಪ್ರೆಸ್ ನಿಗದಿತ ಮಾರ್ಗದಲ್ಲಿ ಬರೋಬ್ಬರಿ 03 ಗಂಟೆಗಳ ಕಾಲ (180) ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
ರೈಲು ವೇಳಾಪಟ್ಟಿ ಬದಲಾವಣೆ
* 2025 ಜುಲೈ 20 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 12245 ಹೌರಾ SMVT ಬೆಂಗಳೂರು ಡುರೊಂಟೊ ಎಕ್ಸ್‌ಪ್ರೆಸ್ ಮಾರ್ಗದಲ್ಲಿ 80 ನಿಮಿಷಗಳ ಕಾಲ ಬದಲಾಯಿಸಲಾಗುತ್ತದೆ. ಬದಲಾದ ಸಮಯಕ್ಕೆ ಪ್ರಯಾಣ ಆರಂಭಿಸಲಿದ್ದು, ಪ್ರಯಾಣಿಕರು ಗಮನಿಸಿ ಸಂಚರಿಸುವಂತೆ ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ರೈಲುಗಳ ಮಾರ್ಗ ಬದಲಾವಣೆ ವಿವರ
* ಬೆಂಗಳೂರಿನ ಬಾಣಸವಾಡಿ ಯಾರ್ಡ್‌ನಲ್ಲಿ ಪಾಯಿಂಟ್ ಸುರಕ್ಷತೆಗೆ ಸಂಬಂಧಿಸಿದಂತೆ ಹಾಗೂ ತುರ್ತು ನಿರ್ವಹಣಾ ಕಾರ್ಯಗಳು ನಡೆಸುವ ಪ್ರಯುಕ್ತ ಈ ಕೆಳಗಿನ ರೈಲು ಸೇವೆಗಳನ್ನು ಮಾರ್ಗ ಬದಲಾವಣೆ ಮತ್ತು ನಿಯಂತ್ರಣೆ ಮಾಡಲಾಗುತ್ತದೆ.
* 2025 ಜುಲೈ 21 ರಂದು ಸೇವೆ ಆರಂಭಿಸುವ ದಾದರ್-ಪುದುಚೇರಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 11005) ಅನ್ನು ಚಿಕ್ಕಬಾಣಾವರ, ಯಶವಂತಪುರ 'ಎ' ಕ್ಯಾಬಿನ್, ಯಲಹಂಕ, ಚನ್ನಸಂದ್ರ ಮತ್ತು ಕೃಷ್ಣರಾಜಪುರಂ ಮೂಲಕ ಓಡಿಸಲು ಮಾರ್ಗ ಬದಲಾವಣೆ ಮಾಡಲಿದೆ. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರಿನ ನಿಗದಿತ ನಿಲುಗಡೆ ನೀಡುವುದಿಲ್ಲ.
* 2025 ಜುಲೈ 22 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 66586 ಹೊಸೂರು-ಯಶವಂತಪುರ MEMU ಪ್ರಯಾಣವು ಮಾರ್ಗಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಂಗಳವಾರ ಪ್ರಟಕಣೆಯಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications