ಶೆಟ್ಟರ್, ಸವದಿ ಎಲ್ಲ ಸ್ಥಾನಮಾನ ಪಡೆದು ಪಕ್ಷ ತೊರೆದಿದ್ದಾರೆ- ಬಿಎಸ್‌ವೈ

ಬೆಂಗಳೂರು ಏಪ್ರಿಲ್ 16: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಬಿಎಸ್‌ ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯನ್ನು ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, 'ಜಗದೀಶ್ ಶೆಟ್ಟರ್‌ಗೆ ಎಲ್ಲಾ ಸ್ಥಾನಮಾನಗಳನ್ನು ಕೊಟ್ಟಿದ್ದೇವೆ. ಎಂಎಲ್‌ಸಿ ಸ್ಥಾನ ಕೊಟ್ಟಿದ್ದೆವು. ಅವರಿಗೆ ನಾವೇನು ಕಡಿಮೆ ಮಾಡಿರಲಿಲ್ಲ. ಲಕ್ಷ್ಮಣ ಸವದಿ ಕೂಡ ತಮ್ಮ ಸ್ಥಾನದಲ್ಲಿ ಮುಂದುವರಿಯಬಹುದಿತ್ತು. ಎಲ್ಲಾ ಸ್ಥಾನಮಾನಗಳನ್ನು ಪಡೆದು ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಇದು ನಂಬಿಕೆ, ವಿಶ್ವಾಸಕ್ಕೆ ಮಾಡಿದ ದ್ರೋಹ. ಮುಖ್ಯವಾಗಿ ಜನರಿಗೆ ಮಾಡಿದ ದ್ರೋಹ. ಜನ ಅವರನ್ನು ಕ್ಷಮಿಸುವುದಿಲ್ಲ' ಎಂದಿದ್ದಾರೆ.

Shettar, Savadi have left the party after getting all status - BSY

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿಎಸ್‌ ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯನ್ನು ನಡೆಸಿದರು. 12.30ಕ್ಕೆ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿಯಲ್ಲಿ ಹಲವಾರು ವಿಚಾರಗಳ ಬಗ್ಗೆ ಬಹಿರಂಗಪಡಿಸಿದರು. ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ರಾಜೀನಾಮೆ ಬಗ್ಗೆ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

'ಶೆಟ್ಟರ್ ರಾಜೀನಾಮೆ ಕೊಟ್ಟಿದ್ದು ಸರಿಯಲ್ಲ. ಶೆಟ್ಟರ್ ಏನು ಅನ್ಯಾಯ ಆಗಿತ್ತು? ಪಕ್ಷ ಹಲವಾರು ಅವಕಾಶಗಳನ್ನು ನೀಡಿದೆ. ಮೋದಿ ಜೊತೆಗೆ ಹೆಜ್ಜೆ ಹಾಕುವುದು ನಮ್ಮ ಉದ್ದೇಶ' ಎಂದು ಯಡಿಯೂರಪ್ಪ ಹೇಳಿದ್ದಾರೆ.

ಪ್ರಪಂಚದಲ್ಲಿ ಮೋದಿ ಬಗ್ಗೆ ಯಾವ ರೀತಿ ಗೌರವ ಇದೆ ಎನ್ನುವುದು ಗೊತ್ತಿರುವ ವಿಚಾರ. ಸ್ಥಾನಮಾನ ಸಿಗಲಿ ಸಿಗದೇ ಇರಲಿ ದೇಶಕ್ಕಾಗಿ ಸೇವೆ ಮಾಡಬೇಕು. ಶೆಟ್ಟರ್ ಅವರನ್ನು ಗುರುತಿಸಿದ್ದು ಪಕ್ಷ. ಮನುಷ್ಯ ಎಷ್ಟೇ ದೊಡ್ಡವನಾದರೂ ಪಕ್ಷದ ಸಹಕಾರ ಇಲ್ಲದೆ ಬೆಳೆಯಲು ಸಾಧ್ಯವಿಲ್ಲ. ಕೇಂದ್ರಲ್ಲಿ ಮಂತ್ರಿ ಸ್ಥಾನ ನೀಡುತ್ತೇವೆ. ಇಂತಹ ಸಂದರ್ಭದಲ್ಲಿ ಬೇರೆ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶೆಟ್ಟರ್ ಕೇಳಲಾಗಿದೆ.

ಆದರೂ ಹಠ ಮಾಡಿ ಕಾಂಗ್ರೆಸ್ ಪಕ್ಷದ ಕಡೆಗೆ ಹೋಗುತ್ತಿರುವ ಅಕ್ಷಮ್ಯ ಅಪರಾಧ. ಬಿಜೆಪಿ ಹೇಗೆ ನಡೆದುಕೊಂಡು ಬಂದಿದೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿಗೆ. ಅವರು ತಮ್ಮ ತಪ್ಪನ್ನು ಅರೆತುಕೊಂಡು ಬಂದರೆ ಸ್ವಾಗತ ಮಾಡಲಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

'ನಾನು ಇನ್ನೂ ಗಟ್ಟಿ ಇದ್ದೇನೆ. ರಾಜ್ಯದ ಉದ್ದಗಲಕ್ಕೂ ಹೋಗಿ ಇವೆರೆಲ್ಲರ ಬಣ್ಣ ಬಯಲು ಮಾಡುತ್ತೇನೆ. ಮೋದಿ ಶಾ ನೇತೃತ್ವವನ್ನು ಪಡೆದು ರಾಜ್ಯದಲ್ಲಿ ಜಯ ಗಳಿಸಲಿದ್ದೇವೆ. ಯಾವುದೇ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ, ಪಕ್ಷ ಬಿಟ್ಟವರ ಬಂಡವಾಳ ಬಯಲು ಮಾಡುತ್ತೇನೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+