1.60 ಕೋಟಿ ಕಳ್ಳತನ: ಸಿನಿಮಾ ಹೀರೋ ಬಂಧನ
ಬೆಂಗಳೂರು, ಫೆಬ್ರವರಿ 20: ಕನ್ನಡ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸಿದ್ದ ವ್ಯಕ್ತಿಯೊಬ್ಬ 1.60 ಕೋಟಿ ಹಣ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
Recommended Video
'ಕಾಫಿ ಕಟ್ಟೆ' ಎಂಬ ಸಿನಿಮಾದಲ್ಲಿ ನಾಯಕನಾಗಿದ್ದ ಆನಂದ ರೆಡ್ಡಿ ಎಂಬಾತ ಪೊಲೀಸರ ಅತಿಥಿಯಾಗಿದ್ದು, ಆತ ಬರೋಬ್ಬರಿ 1.60 ಕೋಟಿ ಹಣ ಕಳ್ಳತನ ಮಾಡಿದ್ದ.
ಆನಂದ್ ರೆಡ್ಡಿ, ಲಾಜಿ ಕ್ಯಾಶ್ ಎಂಬ ಸಂಸ್ಥೆಯಲ್ಲಿ ಎಟಿಎಂ ಗೆ ಹಣ ತುಂಬಿಸುವ ಕಾರ್ಯದ ಮೇಲುಸ್ತುವಾರಿ ಮಾಡುವ ಕೆಲಸಕ್ಕೆ ಸೇರಿದ್ದ. ಸಿನಿಮಾ ನಿರ್ಮಿಸುವ ಹುಚ್ಚಿಗೆ ಬಿದ್ದಿದ್ದ ಆನಂದ್ ರೆಡ್ಡಿ ಎಟಿಎಂ ಗಳಿಗೆ ಪೂರ್ತಿ ಹಣ ಹಾಕುವ ಬದಲಿಗೆ ಅರ್ಧ ಹಣ ಹಾಕಿ ಉಳಿದ ಹಣವನ್ನು ಜೇಬಿಗೆ ಇಳಿಸಿಕೊಂಡಿದ್ದ.

ಬ್ಯಾಂಕ್‌ಗಳವರಿಗೆ ಮಾಹಿತಿ ಗೊತ್ತಾಗಿ, ಲಾಜಿ ಕ್ಯಾಶ್ ಗೆ ಮಾಹಿತಿ ನೀಡಿದ್ದರು. ಅವರು ಪುಲಕೇಶಿ ನಗರ ಪೊಲಿಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಪೊಲೀಸರು ಆನಂದ್ ರೆಡ್ಡಿ ಅನ್ನು ಬಂಧಿಸಿದ್ದಾರೆ.
ಕಾಫಿ ಕಟ್ಟೆ ಎನ್ನುವ ಸಿನಿಮಾದಲ್ಲಿ ಆನಂದ್ ರೆಡ್ಡಿ ನಾಯಕನಾಗಿ ನಟಿಸಿದ್ದ. ಈ ಸಿನಿಮಾದಲ್ಲಿ ಹಲವು ಹಿರಿಯ ಪೋಷಕ ಹಾಗೂ ಹಾಸ್ಯ ಕಲಾವಿದರು ನಟಿಸಿದ್ದರು. ಇದೀಗ ಮತ್ತೆ ಸಿನಿಮಾ ಮಾಡುವ ಗೀಳಿಗೆ ಬಿದ್ದಿದ್ದ ಆನಂದ್ ರೆಡ್ಡಿ ಕಳ್ಳತನಕ್ಕೆ ಇಳಿದು ಈಗ ಪೊಲೀಸರ ಅತಿಥಿಯಾಗಿದ್ದಾನೆ.












Click it and Unblock the Notifications