'ರುದ್ರೇಶ್ ಹತ್ಯೆಗೂ ಪಿಎಫ್ಐಗೂ ಯಾವುದೇ ಸಂಬಂಧವಿಲ್ಲ'
ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಮುಖ್ಯ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ.
ಬೆಂಗಳೂರು, ನವೆಂಬರ್ 03: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಮುಖ್ಯ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ. ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಆಶೀಮ್ ಷರೀಫ್ ಬಂಧಿತ ಆರೋಪಿ. ಆದರೆ, ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪಿಎಫ್ಐನ ಅಧ್ಯಕ್ಷರು, 'ರುದ್ರೇಶ್ ಹತ್ಯೆಗೂ ಪಿಎಫ್ಐಗೂ ಯಾವುದೇ ಸಂಬಂಧವಿಲ್ಲ', ಒತ್ತಡದಿಂದ ಪಿಎಫ್ ಐ ಮೇಲೆ ಸುಳ್ಳು ಆರೋಪ ಹೊರೆಸಲಾಗಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ಕ್ಕೆ ಸೇರಿದ ನಾಲ್ವರು ಸದಸ್ಯರನ್ನು ಬಂಧಿಸಲಾಗಿತ್ತು.[ರುದ್ರೇಶ್ ಹತ್ಯೆ, ಬೆಂಗಳೂರಲ್ಲಿ ನಾಲ್ವರ ಬಂಧನ]

ಅಕ್ಟೋಬರ್ 16ರಂದು ಕಾಮರಾಜ ರಸ್ತೆಯಲ್ಲಿ ಪಥಸಂಚಲನ ನಡೆಯುತ್ತಿದ್ದಾಗ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಕೊಲ್ಲಲು ಸಂಚು ರೂಪಿಸಿದ್ದೆವು.[ಕೊಲೆಯ ಕಾರಣ ಬಾಯ್ಬಿಟ್ಟ ಆರೋಪಿಗಳು!]
ಆದರೆ, ಒಂಟಿಯಾಗಿ ಸಿಕ್ಕ ರುದ್ರೇಶ್ ಕತ್ತನ್ನು ವಾಸಿಂ ಕತ್ತರಿಸಿದ, ಇನ್ನೊಬ್ಬ ಕಾರ್ಯಕರ್ತನನ್ನು ಕೊಲ್ಲಲು ಆಗಲಿಲ್ಲ ಎಂದು ವಿಚಾರಣೆ ವೇಳೆ ಬಂಧಿತ ಆರೋಪಿಗಳು ಹೇಳಿದ್ದಾರೆ.











Click it and Unblock the Notifications