Terror plot: ಮಸೀದಿಗೂ ಬಂಧಿತ ಶಂಕಿತ ಉಗ್ರರಿಗೂ ಯಾವುದೇ ಸಂಬಂಧ ಇಲ್ಲ: ಸಮಿವುಲ್ಲಾ
ಬೆಂಗಳೂರು, ಜುಲೈ 19: ಬೆಂಗಳೂರಿನಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರಿಗೂ ನಮ್ಮ ಮಸೀದಿಗೂ ಯಾವುದೇ ಸಂಬಂಧ ಇಲ್ಲ ಎಂದು ಆರ್‌ಟಿ ನಗರದ ಮಸೀದಿಯ ಮೌಲ್ವಿ ಸಮಿವುಲ್ಲಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ನಗರದಲ್ಲಿ ಆತಂಕ ಸೃಷ್ಟಿಯಾಗಿತ್ತು. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಸಿಸಿಬಿ ಪೊಲೀಸರು ಆರ್‌ಟಿ ನಗರದಲ್ಲಿ ಕಾರ್ಯಾಚರಣೆ ಕೈಗೊಂಡು ಐವರನ್ನು ಬಂಧಿಸಿದ್ದರು.

ಅವರು ಯಾರು ಏನು ಒಂದೂ ನಮಗೆ ಗೊತ್ತಿಲ್ಲ, ಎಲ್ಲಿ ತಂಗಿದ್ದರೂ ಎಂಬುದೂ ಕೂಡ ನಮಗೆ ಗೊತ್ತಿಲ್ಲ. ಇಲ್ಲಿಗೆ ಅವರು ಬರುತ್ತಲೂ ಇರಲಿಲ್ಲ. ಈ ಬಂಧಿತರಾಗಿರುವ ಐವರು ನನಗೆ ಪರಿಚಯವೂ ಇಲ್ಲ ಎಂದು ಹೇಳಿದರು. ಇನ್ನು ಸ್ಥಳಿಯರೊಬ್ಬರು ಮಾತನಾಡಿ, ತಾವು ಮೊದಲೇ ಹೇಳಿದಂತೆ ಮಸೀದಿಗೂ ಇಲ್ಲಿ ವಾಸವಿರುವ ನಮಗೂ ಯಾವುದೇ ಸಂಬಂಧ ಇಲ್ಲ, ಅವರ ಪರಿಚಯವೂ ನಮಗೆ ಇಲ್ಲ. ಪೊಲೀಸರು ಯಾವುದೇ ಕ್ರಮ ಬೇಕಾದರೂ ಜರುಗಿಸಬಹುದು. ಬಂಧಿತರಿಗೆ ಯಾವುದೇ ನೆಲೆ ಇಲ್ಲ ಎಂದು ತಿಳಿಸಿದರು.
ವಶಕ್ಕೆ ಪಡೆದ ಐವರು ಶಂಕಿತ ಉಗ್ರರು ಬೆಂಗಳೂರಿನ ಆರ್ ಟಿ ನಿವಾಸಿಗಳು ಮತ್ತು ಜುನೈದ್ ಗುಂಪಿನವರು ಎಂದು ಹೇಳಲಾಗಿದೆ. ಬಂಧಿತರನ್ನು ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ರಬ್ಬಾ ಎಂದು ಗುರುತಿಸಲಾಗಿದೆ. ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಈ ಜಂಟಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದು ಬಂದಿದೆ.
ಶಂಕಿತರ ಬಗ್ಗೆ ಮಾತನಾಡಿದ ಮನೆ ಬಾಡಿಗೆ ನೀಡಿದ್ದ ಮಾಲೀಕರು ಮಾತನಾಡಿ, ಶಂಕಿತನೊಬ್ಬ ಒಂದು ತಿಂಗಳಿಂದ 5,000 ಸಾವಿರ ಬಾಡಿಗೆಗೆ ಇಲ್ಲಿ ಉಳಿದುಕೊಂಡಿದ್ದರು, ಅವರ ಹಿನ್ನೆಲೆ ಬಗ್ಗೆ ನನಗೆ ಗೊತ್ತಿರಲಿಲ್ಲ, ನೀವು ನಮಗೆ ಅವಮಾನ ಮಾಡಬೇಡಿ ಸ್ವಾಮಿ. ಅವರು ಮೊದಲು ಮನೆ ಖಾಲಿ ಮಾಡುತ್ತೇವೆ ಎಂದು ಹೇಳಿದ್ದರು.
ನಾವು 40 ವರ್ಷದಿಂದ ಇಲ್ಲಿ ಇದ್ದೇವೆ. ಅವರ ಮಗು ಹೆಂಡತಿ ಜೊತೆ ಬಂದು ಮನೆ ಕೇಳಿದ್ದರು. ಹಾಗಾಗಿ ಅವರಿಗೆ ಮನೆ ಕೊಟ್ಟಿದ್ದೆ. ಅವರು ನಮಗೆ ಮನೆಗೆ ಅಡ್ವಾನ್ಸ್ ಕೊಟ್ಟಿರಲಿಲ್ಲ. ಅದ್ದರಿಂದ ಮನೆ ಖಾಲಿ ಮಾಡುವಂತೆ ಹೇಳಿದ್ದೆ. ಅದಕ್ಕೆ ಅವರು ಆಯ್ತು ಬೇರೆ ಮನೆ ಸಿಕ್ಕರೆ ಖಾಲಿ ಮಾಡುತ್ತೇವೆ ಶೀಘ್ರದಲ್ಲೇ ಎಂದು ಹೇಳಿದ್ದರು. ಅವರ ಹಿನ್ನೆಲೆ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ ಎಂದು ಹೇಳಿದರು.
ಇನ್ನು ಸುಲ್ತಾನ್ ಪಾಳ್ಯದಲ್ಲಿ ಬಂಧಿತ ಸಯ್ಯದ್‌ನ ಪತ್ನಿ ಮಾತನಾಡಿ, ಇದು ಯಾವ ಪ್ರಕರಣದಲ್ಲಿ ನಮ್ಮ ಯಜಮಾನರನ್ನು ಬಂಧಿಸಿದ್ದಾರೋ ಗೊತ್ತಿಲ್ಲ. ನಾನು ಅವರ ಪತ್ನಿ. ನಮ್ಮ ಮನೆಯಲ್ಲಿ ನಾನು ಅವರು ಮತ್ತು ನಮ್ಮ ಅತ್ತೆ ಮಾತ್ರವೇ ಇದ್ದೆವು. ಈಗ ಬಂಧಿತರಾಗಿರುವವರು ಇಲ್ಲಿ ಯಾರು ಕೂಡ ಬರುತ್ತಿರಲಿಲ್ಲ. ಅವರು ಯಾರು ಎಂದು ನನಗೆ ಗೊತ್ತಿಲ್ಲ. ಅವರನ್ನು ನಾನು ನೋಡಿಯೂ ಇಲ್ಲ. ಸುನೈದ್ ಮಾತ್ರವೇ ಗೊತ್ತಿತ್ತು ಅವನು ಈ ಮೊದಲು ಕೊಲೆ ಪ್ರಕರಣದಲ್ಲಿ ಆರೋಪಿತನಾಗಿದ್ದನು, ಎಲ್ಲ ವಿಚಾರಣೆ ಮಾಡಿಯೇ ಬಂಧಿಸಿದ್ದಾರೆ. ಗನ್ ಕೂಡ ಹೇಗೆ ಬಂತು ಎಂದು ಗೊತ್ತಿಲ್ಲ ಎಂದರು.
ಈ ಬಗ್ಗೆ ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ವಿಫಲಗೊಳಿಸಿರುವ ರಾಜ್ಯದ ಸಿಸಿಬಿ ಪೊಲೀಸರಿಗೆ ಅಭಿನಂದನೆಗಳು. ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಯಾವುದೇ ತೆರನಾದ ದೇಶವಿರೋಧಿ ಚಟುವಟಿಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ, ಬೇರು ಸಮೇತ ಅಂತಹ ಶಕ್ತಿಗಳನ್ನು ರಾಜ್ಯದಿಂದ ಕಿತ್ತೊಗೆಯಲು ನಾವು ಸದಾ ಸಿದ್ಧರಿದ್ದೇವೆ. ನಾಡಿನ ಪ್ರತಿಯೊಬ್ಬರೂ ಸುರಕ್ಷತೆಯ ಬದುಕು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ












Click it and Unblock the Notifications