RR Nagar: ಕ್ಷೇತ್ರದಲ್ಲಿ ಪಾಕಿಸ್ತಾನ ಧ್ವಜವಿರುವ ಕರಪತ್ರ ಹಂಚಿಕೆ, ಇದು ಮುನಿರತ್ನ ಷಡ್ಯಂತ್ರ ಎಂದ ಕುಸುಮಾ
ಬೆಂಗಳೂರು, ಮೇ 01: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಯುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಷ್ಯಡ್ಯಂತ್ರದ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.
ಸೋಲಿನ ಭಯದಲ್ಲಿರುವ ಬಿಜೆಪಿಯ ವಾಮ ಮಾರ್ಗಗಳು ಒಂದೆರಡಲ್ಲ!
— Karnataka Congress (@INCKarnataka) May 1, 2023
ಮುನಿರತ್ನ ನಾಯ್ಡು ಅವರೇ, ಎಂತೆಂತಹ ಚಾಲಾಕಿ ಕೆಲಸಗಳು ನಿಮ್ಮದು?
ನಿಮ್ಮ ಹಿಂಬಾಲಕನನ್ನು ಮುಂದೆ ಬಿಟ್ಟು, ಪಾಕ್ ಧ್ವಜದ ಪೋಸ್ಟರ್ ಮಾಡಿಸಿ ಕಾಂಗ್ರೆಸ್ ತಲೆಗೆ ಕಟ್ಟುವ ಈ ಐಡಿಯಾ ಕೊಟ್ಟವರು ಯಾರು?@ceo_karnataka ಕೂಡಲೇ ಈ ಕುರಿತು ತನಿಖೆ ಕೈಗೊಂಡು ಕ್ರಮ ಜರುಗಿಸಬೇಕು. pic.twitter.com/IHNJcFnYzR
ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ಅವರು ತಮ್ಮ ಬೆಂಬಲಿಗರನ್ನೇ ಪಕ್ಷೇತರವಾಗಿ ಕಣಕ್ಕಿಳಿಸಿದ್ದಾರೆ. ಆ ಪಕ್ಷೇತರ ಅಭ್ಯರ್ಥಿ ಪಾಕಿಸ್ತಾನದ ಬಾವುಟ ಇರುವ ಕರಪತ್ರವನ್ನು ಕ್ಷೇತ್ರದ ತುಂಬೆಲ್ಲ ಹಂಚಿದ್ದಾರೆ. ಹೀಗೆ ಆರೋಪಿಸಿರುವ ಕುಸುಮಾ ಅವರು ಕರಪತ್ರ ಮತ್ತು ಪಕ್ಷೇತರ ಅಭ್ಯರ್ಥಿ ಫೋಟೊಗಳನ್ನು ತಮ್ಮ ಫೆಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬಿಜೆಪಿ ಮುನಿರತ್ನ ಅವರು ತಮ್ಮ ಬೆಂಬಲಿಗನನ್ನೇ ಪಕ್ಷೇತರವಾಗಿ ಕಣಕ್ಕಿಳಿಸಿ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಆ ಪಕ್ಷೇತರ ಅಭ್ಯರ್ಥಿ ತಾನು ಕಾಂಗ್ರೆಸ್ ಬೆಂಬಲಿಗ ಎಂದು ಹೇಳಿಕೊಂಡು ಪಾಕಿಸ್ತಾನದ ಬಾವುಟ ಇರುವ ಕರಪತ್ರ ಹಂಚಿದ್ದಾರೆ ಎಂದು ಕುಸುಮಾ ಆರೋಪಿಸಿದ್ದಾರೆ. ಅಲ್ಲದೇ ಈ ಸಂಬಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.
ಕುಸುಮಾ ಅವರ FB ಪೋಸ್‌ನಲ್ಲಿ ಏನಿದೆ?
ಸಾರ್ವಜನಿಕರ ಗಮನಕ್ಕೆ, 'ಪಕ್ಷೇತರ ಅಭ್ಯರ್ಥಿಯಾದ ಆರಿಫ್ ಪಾಷಾ ಅಲಿಯಾಸ್ ಯಾರಬ್ ಎಂಬುವವರು ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೊತೆಗೂಡಿ ಪಾಕಿಸ್ತಾನದ ಹೆಸರಿನಲ್ಲಿ ನಕಲಿಯಾಗಿ ನನಗೆ ಬೆಂಬಲ ಸೂಚಿಸುವುದಾಗಿ ಘೋಷಣೆ ಮಾಡುವ ಷಡ್ಯಂತ್ರ ರೂಪಿಸಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ.
ಕ್ಷೇತ್ರದಲ್ಲಿ ಪದೇ ಪದೇ ಶಾಂತಿ-ಸುವ್ಯವಸ್ಥೆಯನ್ನು ಕದಡಿ ಕೋಮುಗಲಭೆ ಸೃಷ್ಟಿಸಲೆತ್ನಿಸುತ್ತಿರುವ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಛೇಲಾಗಳ ವಿರುದ್ಧ ಚುನಾವಣಾ ಆಯೋಗ ಹಾಗೂ ಪೋಲಿಸ್ ಇಲಾಖೆಗೆ ನಾಳೆ ದೂರು ಸಲ್ಲಿಸುತ್ತಿದ್ದೇನೆ.

ಸಿನಿಮಾ ಶೈಲಿಯಲ್ಲಿ ರಾಜಕಾರಣ ಮಾಡಲೆತ್ನಿಸುತ್ತಿರುವ ಬಿಜೆಪಿ ಅಭ್ಯರ್ಥಿಯು ಚುನಾವಣಾ ಸಮಯದಲ್ಲಿ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿ ಮತದಾರರ ಕಣ್ಣಿಗೆ ಮಣ್ಣೆರಚುವುದೂ ಅಲ್ಲದೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲೆತ್ನಿಸುತ್ತಿರುವ ಹೇಯ ಕೃತ್ಯದ ಬಗ್ಗೆ ಮತದಾರರ ಗಮನಕ್ಕೆ ತರಲು ಬಯಸುತ್ತೇನೆ' ಎಂದು ಅವರು ಬರೆದುಕೊಂಡಿದ್ದಾರೆ.












Click it and Unblock the Notifications