Darshan Thoogudeepa: ಜೈಲಿನಲ್ಲೇ ದರ್ಶನ್-ಪ್ರದೋಶ್ ನಡುವೆ ಕಿತ್ತಾಟ; ಡಿ-ಗ್ಯಾಂಗ್‌ನಲ್ಲಿ ಬಿರುಕು
ಬೆಂಗಳೂರು, ಜುಲೈ 19: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಇನ್ನು ಕೆಲವು ದಿನ ಜೈಲೇ ಗತಿಯಾಗಿದೆ. ಈ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಮತ್ತೊಮ್ಮೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಿನ್ನೆ ದರ್ಶನ್ ಹಾಗೂ ಇತರ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಹೀಗಾಗಿ ನ್ಯಾಯಾಲಯ ಆಗಸ್ಟ್ 1ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಸದ್ಯ ಜೈಲೇ ಗತಿಯಾಗಿರುವ ದರ್ಶನ್ ಮತ್ತು ಇತರ ಆರೋಪಿಗಳ ನಡುವೆ ಅಸಮಾಧಾನ ಹೊಗೆಯಾಡುತ್ತಿದೆ.

ರೇಣುಕಾಸ್ವಾಮಿ ಹತ್ಯೆ ಮಾಡುವಾಗ ಒಟ್ಟಾಗಿದ್ದ ಈ ಗ್ಯಾಂಗ್‌ನಲ್ಲಿ ಈಗ ಬಿರುಕು ಮೂಡಿದೆ ಎನ್ನಲಾಗುತ್ತಿದ್ದು, ಜೈಲಿಗೆ ಹೋದ ಮೇಲೆ ದರ್ಶನ್ ಗ್ಯಾಂಗ್‌ನಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ. ಎಲ್ಲಾ ನಿನ್ನಿಂದಲೇ ಆಗಿದ್ದು, ನನಗೆ ಬಿಟ್ಟಿದ್ದರೆ ನೋಡಿಕೊಳ್ಳುತ್ತಿದೆ. ನಿನ್ನ ನಂಬಿ ನಾನು ಜೈಲಿಗೆ ಬರುವ ರೀತಿ ಆಯ್ತು ಎಂದು ನಟ ದರ್ಶನ್ ಮತ್ತೋರ್ವ ಆರೋಪಿ ಪ್ರದೋಶ್ ವಿರುದ್ಧ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಆರೋಪಿ ಪ್ರದೋಶ್ ವಿರುದ್ಧ ನಟ ದರ್ಶನ್ ಕಿಡಿಕಾರಿದ್ದು, ನಟನ ವರ್ತನೆ ಕಂಡು ಉಳಿದ ಆರೋಪಿಗಳಲ್ಲಿ ದರ್ಶನ್ ವಿರುದ್ಧ ಅಸಮಾಧಾನ ಶುರುವಾಗಿದೆ. ಇತ್ತ ದರ್ಶನ್ ರಂಪಾಟ ಕಂಡು ಎಚ್ಚೆತ್ತುಕೊಂಡ ಆರೋಪಿ ಪ್ರದೋಶ್ ದರ್ಶನ್ ವಿರುದ್ಧ ಇತರೆ ಆರೋಪಿಗಳನ್ನು ಒಟ್ಟುಗೂಡಿಸುತ್ತಿದ್ದಾನೆ ಎನ್ನಲಾಗಿದೆ.
ದರ್ಶನ್ ಜೊತೆ ಜೈಲು ಸೇರಿದ ಪ್ರದೋಶ್ ಯಾರು..?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರದೋಶ್ ಸ್ಯಾಂಡಲ್‌ವುಡ್ ನಟನಾಗಿದ್ದಾನೆ. ಈತ ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ನಟಿಸಿದ್ದಾನೆ. ಇದಲ್ಲದೇ ಬಿಜೆಪಿ ಸಚಿವರೊಬ್ಬರ ಜೊತೆ ಆಪ್ತ ಸಹಾಯಕನಾಗಿ ಕೂಡ ಕೆಲಸ ಮಾಡಿದ್ದ ಎಂದು ವರದಿಯಾಗಿದೆ.
ಪ್ರದೋಶ್ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ A14 ಆರೋಪಿಯಾಗಿದ್ದಾನೆ. ರೇಣುಕಾ ಸ್ವಾಮಿ ಮೃತಪಟ್ಟ ಬಳಿಕ ಗಾಬರಿಗೊಂಡ ದರ್ಶನ್ 30 ಲಕ್ಷ ರೂ. ನೀಡಿ ಮೃತದೇಹವನ್ನು ಎಲ್ಲಾದರು ಬಿಸಾಕುವಂತೆ ಹೇಳುತ್ತಾರೆ. ಆಗ ತನ್ನ ಆಪ್ತ, ಹೋಟೆಲ್ ಉದ್ಯಮಿ ಪ್ರದೋಶ್ ದರ್ಶನ್ ಹೇಳಿದಾಗ ಪ್ರದೋಶ್ ಮತ್ತಿತರರು ದೇಹವನ್ನು ಸ್ಕಾರ್ಪಿಯೋ ಕಾರಿನಲ್ಲಿ ಒಯ್ದು ಸುಮ್ಮನಹಳ್ಳಿಯ ಅಪಾರ್ಟ್‌ಮೆಂಟ್ ಒಂದರ ಮುಂಭಾಗದ ಮೋರಿ ಬಳಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ.












Click it and Unblock the Notifications