Get Updates
Get notified of breaking news, exclusive insights, and must-see stories!

ಬೆಂಗಳೂರು "ಈ ಕಚಡಾ ರೋಡ್‌ಗೆ ಒಂದು ಕೋಟಿ ರೂ. ತೆರಿಗೆ ಕೊಡ್ಬೇಕಾ"

ಬೆಂಗಳೂರಿನಲ್ಲಿ ಮಳೆಯಿಂದ ಭಾರೀ ಅವಾಂತರ ಸೃಷ್ಟಿಯಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಬೆಂಗಳೂರಿನ ಹೊರವಲಯ, ಮಹದೇವಪುರ ಹಾಗೂ ಕೆ.ಆರ್‌ ಪುರ ಸೇರಿದಂತೆ ವಿವಿಧ ಭಾಗದಲ್ಲಿ ರಸ್ತೆಗಳಲ್ಲಿ ಇನ್ನೂ ನೀರು ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ರಸ್ತೆಗಳಲ್ಲಿ ಮಂಡಿಯ ವರೆಗೆ ನೀರು ನಿಲ್ಲುತ್ತಿದ್ದು, ಜನ ಹೈರಾಣಾಗಿದ್ದಾರೆ. ನಾವು ಇಲ್ಲಿ ಒಂದು ಕೋಟಿ ರೂಪಾಯಿ ಬಿಬಿಎಂಪಿ, ಸರ್ಕಾರಕ್ಕೆ ತೆರಿಗೆ ಕಟ್ತೀವಿ.. ಆದರೂ ಈ ಅಧ್ವಾನ ನಾವ್ಯಾಕ್ರಿ ತೆರಿಗೆ ಕಟ್ಬೇಕು ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಕೆಲವು ಕಡೆ ಸಾಧಾರಣ ಮಳೆಯಾಗಿದ್ದರೂ, ಭಾರೀ ಪ್ರಮಾಣದಲ್ಲಿ ಅನಾಹುತ ಸಂಭವಿಸಿದೆ. ಮಹದೇವಪುರದಲ್ಲಿ ಹಲವು ರಸ್ತೆಗಳು ಜಲಾವೃತವಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸವಾರರು ರಸ್ತೆಗಳಲ್ಲಿ ಬೀಳುತ್ತಿದ್ದಾರೆ. ಇದೀಗ ಮಹದೇವಪುರದ ಬಳಗೆರೆಯಿಂದ ಕುಂದಲಹಳ್ಳಿ ರಸ್ತೆ ಸಂಪೂರ್ಣ ಕೆರೆಯಂತೆ ಬದಲಾಗಿದ್ದು, ಜನ ಪರದಾಡುತ್ತಿದ್ದಾರೆ. ಮಳೆ ಹಾಗೂ ಚರಂಡಿ ನೀರು ನಿಂತಿದ್ದು, ಸಾರ್ವಜನಿಕರು ಹೈರಾಣಾಗಿದ್ದಾರೆ. ರಸ್ತೆ ಪೂರ್ತಿ ಗುಂಡಿಮಯವಾಗಿದೆ. ನೀರಿನಲ್ಲಿ ಹೋಗಲಾಗದೆ ವಾಹನ ಸವಾರರು ಜಾರಿ ಬೀಳುತ್ತಿದ್ದಾರೆ.

Rain disaster in Bengaluru Bengaluru Mahadevpur people took classes for DK Shivakumar

ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ತೀವಿ: ಮಹದೇವಪುರದಲ್ಲಿರುವ ಜನ ಕೋಟ್ಯಾಂತರ ರೂಪಾಯಿ ತೆರಿಗೆಯನ್ನು ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ) ಹಾಗೂ ಸರ್ಕಾರಕ್ಕೆ ಕಟ್ಟುತ್ತೇವೆ. ಆದರೆ, ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ಟಿದ ಮೇಲೂ ನಾವು ಈ ರೀತಿಯ ಕಚಡಾ ರಸ್ತೆಗಳಲ್ಲಿ ಓಡಾಡುವ ಪರಿಸ್ಥಿತಿ ಇದೆ ಎಂದು ಜನ ಸೋಷಿಯಲ್‌ ಮೀಡಿಯಾಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಲವರು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಜಿ.ಪರಮೇಶ್ವರ್‌ ಅವರನ್ನು ಟ್ಯಾಗ್‌ ಮಾಡುತ್ತಿದ್ದಾರೆ.

ಆಮ್‌ ಆದ್ಮಿ ಪಕ್ಷದಿಂದ ಆಕ್ರೋಶ: ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಗಳು ಅವ್ಯವಸ್ತೆಯ ತಾಣವಾಗಿದೆ. ಈ ರಸ್ತೆಗಳನ್ನು ಶೀಘ್ರ ಸರಿಪಡಿಸಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಆಗ್ರಹಿಸಿದೆ. ಮಹದೇವಪುರದ ಬಳಗೆರೆಯಿಂದ ಕುಂದಲಹಳ್ಳಿ ರಸ್ತೆಯಲ್ಲಿ ನಿಂತಿ ಮಾತನಾಡಿರುವ ಆಮ್‌ ಆದ್ಮಿ ಪಾರ್ಟಿಯ ಕಾರ್ಯಕರ್ತ ಅಶೋಕ್ ಮೃತ್ಯುಂಜಯ ಅವರು, ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ 1000 ಕೋಟಿ ಖರ್ಚು ಮಾಡಿದ್ದೀರಿ. ಇದು ನಿಮ್ಮ ಸರ್ಕಾರದ ಮತ್ತೊಂದು ಹಗರಣವೇ, ನಿಮ್ಮ ಭ್ರಷ್ಟಾಚಾರ ಮತ್ತು ಬೆಂಗಳೂರಿನಾದ್ಯಂತ ಇರುವ ಹದಗೆಟ್ಟ ರಸ್ತೆಗಳಿಂದ ಬೆಂಗಳೂರಿನ ಜನರು ಬೇಸತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಜುಳಾ ಅರವಿಂದ ಲಿಂಬಾವಳಿ ಅವರೇ ನೀವು ಈ ಕ್ಷೇತ್ರದ ಶಾಸಕರು. ಫೋಟೋಗಳಲ್ಲಿ ಮಾತ್ರ ನೀವು ಕಾಣಿಸಿಕೊಳ್ಳುತ್ತಿದ್ದೀರಿ. ನಿಜವಾಗಿಯೂ ಮಹದೇವಪುರದ ಜನರಿಗೆ ಸಹಾಯ ಮಾಡುತ್ತಿಲ್ಲ. ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟಿದರೂ ಇಲ್ಲಿನ ಜನ ಈ ಹದಗೆಟ್ಟ ರಸ್ತೆಯ ಮೂಲಕ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದಿದ್ದಾರೆ.

ಮಂಜುಳಾ ಲಿಂಬಾವಳಿ ಗಿಫ್ಟ್‌: ಮಹದೇವಪುರದ ಈ ರಸ್ತೆಗಳು ಈ ರೀತಿ ಇರುವುದಕ್ಕೆ ಮಹದೇವಪುರ ಶಾಸಕಿ ಮಂಜುಳಾ ಲಿಂಬಾವಳಿ ಅವರೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಮ್‌ ಆದ್ಮಿ ಪಾರ್ಟಿಯ ಕಾರ್ಯಕರ್ತರು ಕಳೆದ 15 ವರ್ಷಗಳಿಂದ ನೀವೇ ಆಡಳಿತ ನಡೆಸುತ್ತಿದ್ದೀರಿ. ಆದರೂ ಇದೇ ಪರಿಸ್ಥಿತಿ ಇದೆ. ಇದಕ್ಕೆಲ್ಲ (ಈ ಹಿಂದೆ ಅರವಿಂದ ಲಿಂಬಾವಳಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು) ನಿಮ್ಮ ಆಡಳಿತವೇ ಕಾರಣ ಎಂದು ಕಿಡಿಕಾರಿದ್ದಾರೆ.

Rain disaster in Bengaluru Bengaluru Mahadevpur people took classes for DK Shivakumar

ಡಿ.ಕೆ ಶಿವಕುಮಾರ್‌ ಅವರೇ ನಾಚಿಕೆ ಆಗಲ್ವಾ: ಆಮ್‌ ಆದ್ಮಿ ಪಾರ್ಟಿಯ ಕಾರ್ಯಕರ್ತರು ಮಹದೇವಪುರದ ಬಳಗೆರೆಯಿಂದ ಕುಂದಲಹಳ್ಳಿ ರಸ್ತೆಯಲ್ಲಿ ಮಳೆಯಿಂದ ನಿಂತಿರುವ ನೀರು ಹಾಗೂ ರಸ್ತೆ ಗುಂಡಿಯಲ್ಲೇ ವಿಡಿಯೋ ಮಾಡಿದ್ದು, ಆಕ್ರೋಶ ಹೊರ ಹಾಕಿದ್ದಾರೆ. ಡಿ.ಕೆ ಶಿವಕುಮಾರ್‌ ಅವರೇ ಇದೇನಾ ಬ್ರ್ಯಾಂಡ್‌ ಬೆಂಗಳೂರು, ನಾಚಿಕೆ ಆಗಲ್ವಾ ನಿಮಗೆ ಎಂದು ಪ್ರಶ್ನೆ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+