ಮೋದಿ, ಮಾಧ್ಯಮ: ಪಿಎಚ್.ಡಿಗೆ ಅರ್ಹ ವಿಷಯ
ಬೆಂಗಳೂರು, ಮೇ 26: ಸೋ, ಸೆಪ್ಟೆಂಬರ್ ತಿಂಗಳಲ್ಲಿ ಪಕ್ಷದ ವತಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಿಜೆಪಿಯ ನರೇಂದ್ರ ಮೋದಿ ಎಂಟೇ ತಿಂಗಳಲ್ಲಿ ಪ್ರಧಾನಿಪಟ್ಟಕ್ಕೇರಿದ್ದಾರೆ. ನಿಜಕ್ಕೂ ಇದು ಸ್ವಾತಂತ್ರ್ಯಾನಂತರ ದೊಡ್ಡ ಸಾಧನೆಯೇ ಸರಿ. ಇದು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಧ್ಯಯನ ವಿಷಯವಾಗಬಲ್ಲ ಎಲ್ಲ ಅರ್ಹತೆ ಇದೆ.
ಗೆಲುವಿಗೆ ಅಪ್ಪ-ಅಮ್ಮ ಸಾವಿರಾರು ಮಂದಿ ಸೃಷ್ಟಿಯಾಗ್ತಾರೆ. ಹಾಗೆಯೇ, ವಿಜಯಕ್ಕೆ ನಾನಾ ಮುಖಗಳೂ ಇರ್ತಾವೆ. ಅದರಲ್ಲೂ ಇಂತಹ ಅಭೂತಪೂರ್ವ ಸಾಧನೆ ಮಾಡಿರುವಾಗ ಇಂತಹ ಮಾತುಗಳು ಹೆಚ್ಚು ಚಾಲ್ತಿಗೆ ಮಾರುತ್ತವೆ. ಆದರೆ ಇಲ್ಲಿ ಬಿಜೆಪಿ ಗೆಲುವಿಗೆ ಅಪ್ಪ-ಅಮ್ಮ ಸಾವಿರಾರು ಮಂದಿ ಇಲ್ಲ. ಏಕೆಂದರೆ ನಿಸ್ಸಂಶಯವಾಗಿ ಮೋದಿಯೇ ಈ ಗೆಲುವಿನ ಸೃಷ್ಟಿಕರ್ತ.
ಮತ್ತೊಂದು ಗಮನಾರ್ಹ ಅಂಶವೆಂದರೆ ಈ ಗೆಲುವಿನಲ್ಲಿ ಮಾಧ್ಯಯಗಳು ಪ್ರಮುಖ ಪಾತ್ರ ವಹಿಸಿವೆ. ಅಂದರೆ ಪತ್ರಿಕಾರಂಗ/ ಟಿವಿ ಮಾಧ್ಯಮಗಳು ಅಂತಲ್ಲ. ಈ ಬಾರಿ ಮಾಧ್ಯಮಗಳ ಒಳಕೋವೆಗಳು/ ಒಳಮುಖಗಳು/ ಒಳಸುಳಿಗಳು ನೂರಾರು ಇದ್ದವು. ಇಲ್ಲಿ ಮಾಧ್ಯಯಗಳು ಅಂದರೆ ಸಂವಹನಗಳು ಮಾಹಿತಿ ತಂತ್ರಜ್ಞಾನದ ಸಮ್ಮುಖದಲ್ಲಿ ನಾನಾ ರೂಪದಲ್ಲಿ ಚಾಲ್ತಿಗೆ ಬಂದಚು. ಅದರಲ್ಲಿ ಪ್ರಧಾನವಾಗಿ/ ಪರಿಣಾಮಕಾರಿಯಾಗಿ ಬಳಕೆಯಾಗಿದ್ದು ಅಂತರ್ಜಾಲ ಮಾಧ್ಯಮ. ಹೇಳಬೇಕು ಅಂದರೆ ಈ ಬಾರಿ ಮೋದಿ ಪ್ರಚಾರದ ಜೀವಾಳ ಇದೇ ಆಗಿದೆ.

ಹಾಗಾಗಿ, ಇಲ್ಲಿ ಮೋದಿ ಮತ್ತು ಮಾಧ್ಯಮ ಇವೆರಡನ್ನೂ ಒಟ್ಟು ಮಾಡಿದರೆ ಅದು ಪಿಎಚ್.ಡಿಗೆ ಅರ್ಹ ವಿಷಯವಾಗಬಲ್ಲದು. ವೈಯಕ್ತಿವಾಗಿ/ಏಕಾಂಗಿಯಾಗಿ ಪಕ್ಷಕ್ಕೆ ಜಯ ತಂದಿತ್ತ ಮೋದಿ ಸುನಾಮಿ ಬಗ್ಗೆಯೂ ಪಿಎಚ್.ಡಿ ಅಧ್ಯಯನ ಮಾಡಬಹುದು. ಒಬ್ಬ ವ್ಯಕ್ತಿ ಹೀಗೆ ಎಂಟೇ ತಿಂಗಳಲ್ಲಿ ಜಯ ಸಾಧಿಸಿದ್ದು ಅಧ್ಯಯನಾರ್ಹವೇ ಸರಿ.
ಇಲ್ಲಿ ಮತ್ತೂ ಒಂದು ಗಮನಾರ್ಹ ಸಂಗತಿಯೆಂದರೆ ಮೋದಿ ಜಯ ವ್ಯಕ್ತಿಜನ್ಯ ಅನ್ನಬಹುದಾದರೂ ಇಲ್ಲಿ ಮೋದಿ ಸ್ಪರ್ಧಿಗಳ ಬಗ್ಗೆಯೂ ಅಧ್ಯಯನ ನಡೆಸಬಹುದು. ಮುಖ್ಯವಾಗಿ ಪ್ರತಿಪಕ್ಷವಾದ ಕಾಂಗ್ರೆಸ್ ಬಗ್ಗೆ ಮತ್ತು ಆ ಪಕ್ಷದ ನಾಯಕರ ಬಗ್ಗೆ ಅಧ್ಯಯನ ಮಾಡಬಹುದು. ಕಾಂಗ್ರೆಸ್ ಸೋಲಿಗೆ ಕಾರಣವೇನು ಎಂದು ಅಧ್ಯಯನ ನಡೆಸುತ್ತಾ ಹೋದರೆ ಮೋದಿಗೆ ಗೆಲುವಿಗೆ ಕಾರಣ ಏನೆಂಬುದು ಬಯಲಾಗುತ್ತಾ ಹೋಗುತ್ತದೆ.
ಇಲ್ಲಿ ರಾಜಕೀಯಕ್ಕಿಂತ ಹೆಚ್ಚಾಗಿ ಅಧ್ಯಯನ ದೃಷ್ಟಿಯಿಂದ ವೈಯಕ್ತಿಕ ಸಾಧನೆಗಳು/ ಸಾಫಲ್ಯಗಳು, ಸೋಲುಗಳು, ವ್ಯಕ್ತಿಗಳು, ಮಾಧ್ಯಮಗಳ ಬಗ್ಗೆಯಷ್ಟೇ ಅಧ್ಯಯನ ಮಾಡುತ್ತಾ ಹೋದರೆ ನಿಜಕ್ಕೂ ಹೆಚ್ಚು ಆಸಕ್ತಿದಾಯವಾಗಿರುತ್ತದೆ.












Click it and Unblock the Notifications