• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಿಂದ ಚುನಾವಣೆಗೆ?

|
   Lok Sabha elections 2019 : ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಿಂದ ಚುನಾವಣೆಗೆ? | Oneindia Kannada

   ಬೆಂಗಳೂರು, ಫೆಬ್ರವರಿ 25: ರಾಜ್ಯಸಭೆಗೆ ಕರ್ನಾಟಕದಿಂದಲೇ ಆಯ್ಕೆ ಆಗಿ ಹೋಗಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನಿಂದಲೇ ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

   ಚುನಾವಣಾ ರಹಿತವಾಗಿ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಮಂತ್ರಿ ಆಗಿರುವ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರನ್ನು ಚುನಾವಣಾ ಕಣಕ್ಕೆ ಇಳಿಸಲು ಬಿಜೆಪಿ ಯೋಜನೆ ರೂಪಿಸಿದ್ದು, ಅವರನ್ನು ಬೆಂಗಳೂರಿನಿಂದಲೇ ಕಣಕ್ಕಿಳಿಸುವ ಸಾಧ್ಯತೆ ಇದೆ.

   ಸೇಲ್ಸ್‌ಗರ್ಲ್‌ನಿಂದ ರಕ್ಷಣಾ ಸಚಿವೆ: ನಿರ್ಮಲಾ ಸೀತಾರಾಮನ್ ಯಶೋಗಾಥೆ

   ಕರ್ನಾಟಕದಿಂದಲೇ ಅವರು ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಹಾಗಾಗಿ ಕರ್ನಾಟಕದಿಂದಲೇ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡುವುದು ಬಿಜೆಪಿ ತಂತ್ರ. ಅದರಲ್ಲಿಯೂ ಅವರಿಗೆ ಬೆಂಗಳೂರಿನಿಂದಲೇ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಯೋಜಿಸಿದ್ದು, ರಾಜ್ಯ ಬಿಜೆಪಿಯ ಅಭಿಪ್ರಾಯ ಕೇಳಿದೆ.

   ಬೆಂಗಳೂರು ಉತ್ತರ ಅಥವಾ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ

   ಬೆಂಗಳೂರು ಉತ್ತರ ಅಥವಾ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ

   ಅನಂತ್‌ಕುಮಾರ್ ಅವರಿಂದ ತೆರವಾಗಿರುವ ಬೆಂಗಳೂರು ದಕ್ಷಿಣ ಅಥವಾ ಸದಾನಂದಗೌಡ ಅವರು ಪ್ರತಿನಿಧಿಸುವ ಬೆಂಗಳೂರು ಉತ್ತರ ಕ್ಷೇತ್ರದಿಂದ ಈ ಬಾರಿ ನಿರ್ಮಲಾ ಅವರು ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಸದಾನಂದ ಗೌಡ ಅವರಿಗೆ ಕರಾವಳಿ ಭಾಗದಲ್ಲಿ ಟಿಕೆಟ್‌ ನೀಡುವ ಸಾಧ್ಯತೆ ದಟ್ಟವಾಗಿದೆ.

   'ಮೋದಿ ಮತ್ತೊಮ್ಮೆ ಪ್ರಧಾನಿ ಆಗದಿದ್ದರೆ ಭಾರತ ಐವತ್ತು ವರ್ಷ ಹಿಂದಕ್ಕೆ'

   ಕೇರಳದಿಂದ ಸ್ಪರ್ಧಿಸುವ ಸಾಧ್ಯತೆ ಇತ್ತು

   ಕೇರಳದಿಂದ ಸ್ಪರ್ಧಿಸುವ ಸಾಧ್ಯತೆ ಇತ್ತು

   ನಿರ್ಮಲಾ ಅವರನ್ನು ಕೇರಳದ ತಿರುವನಂತಪುರಂ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಶಿ ತರೂರ್ ಎದುರಾಳಿಯಾಗಿ ಕಣಕ್ಕಿಳಿಸಮೊದಲಿಗೆ ರಣತಂತ್ರ ರೂಪಿಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಒಬ್ಬರು ಖ್ಯಾತ ನಾಮರು ಅವಶ್ಯಕತೆ ಇರುವ ಕಾರಣ. ಸಚಿವ ಸ್ಥಾನ ನೀಡುವಾಗ ಪ್ರದೇಶವಾರು ನ್ಯಾಯ ಸಲ್ಲಿಸದಂತಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಣಯ ಕೈಗೊಳ್ಳಲಾಗಿದೆ.

   ಮುಂದಿನ ಬಾರಿಯೂ ಬೆಂಗಳೂರಲ್ಲೇ ಏರೋ ಇಂಡಿಯಾ : ಎಚ್ಡಿಕೆ ಮನವಿ

   ಯಡಿಯೂರಪ್ಪ ಆಕ್ಷೇಪಿಸುವ ಸಾಧ್ಯತೆ

   ಯಡಿಯೂರಪ್ಪ ಆಕ್ಷೇಪಿಸುವ ಸಾಧ್ಯತೆ

   ಪ್ರತಾಪ್ ಸಿಂಹ ಸೇರಿ ಹಲವು ಕೇಂದ್ರದ ಸಂಸದರು ನಿರ್ಮಲಾ ಅವರಿಗೆ ರಾಜ್ಯದಲ್ಲಿ ಟಿಕೆಟ್ ನೀಡಲು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯ ಬಿಜೆಪಿ ಇರುವುದು ಯಡಿಯೂರಪ್ಪ ಅವರ ಬಿಗಿಮಷ್ಠಿಯಲ್ಲಿ ಅವರ ನಿರ್ಣಯ ಏನು ಎಂಬುದು ನಿಗೂಢ. ಅವರಿಗೆ ಹೊರಬರು ರಾಜ್ಯದಲ್ಲಿ ಸ್ಪರ್ಧಿಸುವುದು ಇಷ್ಟವಿಲ್ಲ ಎನ್ನಲಾಗಿದೆ.

   ಸೈನ್ಯಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ: ನಿರ್ಮಲಾ ಸೀತಾರಾಮನ್

   ಸದಾನಂದಗೌಡರಿಗೆ ಬೆಂಗಳೂರು ಟಿಕೆಟ್ ಇಲ್ಲ

   ಸದಾನಂದಗೌಡರಿಗೆ ಬೆಂಗಳೂರು ಟಿಕೆಟ್ ಇಲ್ಲ

   ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಸ್ತುತ ಸದಾನಂದಗೌಡ ಅವರು ಸಂಸದರಾಗಿದ್ದಾರೆ. ಆದರೆ ಈ ಬಾರಿ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ಇಲ್ಲ ಎನ್ನಲಾಗುತ್ತಿದೆ. ಬದಲಿಗೆ ಅವರಿಗೆ ಕರಾವಳಿ ಭಾಗದಲ್ಲಿ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

   English summary
   Defense minister Nirmala Sitharaman may contest to Lok Sabha elections 2019 from Bengaluru. She is upper house member from Karnataka, so BJP decided to plant her from Bengaluru north or south.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X