New Year Celebration: 4 ಪ್ರತ್ಯೇಕ ಅಪಘಾತದಲ್ಲಿ 4 ಯುವಕರು ಸಾವು
ಬೆಂಗಳೂರು, ಜನವರಿ 03: ಹೊಸ ವರ್ಷಾಚರಣೆಗೆಂದು ತೆರಳಿದ್ದವರ ಪೈಕಿ ನಾಲ್ಕು ಮಂದಿ ನಾಲ್ಕು ಪ್ರತ್ಯೇಕ ಅಪಘಾತಗಳಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ಬೆಂಗಳೂರು ಹೊರವಲಯದಲ್ಲಿ ಸ್ನೇಹಿತರೊಂದಿಗೆ ತೆರಳಿದ್ದರು. ಈ ವೇಳೆ ಅಪಘಾತದಲ್ಲಿ ಬಿಟೆಕ್ ವಿದ್ಯಾರ್ಥಿ ಸೇರಿ ನಾಲ್ವರು ಯುವಕರು ಮೃತಪಟ್ಟಿದ್ದಾರೆ.
ಮೊದಲ ಅಪಘಾತದಲ್ಲಿ, ಮೈಸೂರು ರಸ್ತೆಯ ಕುಂಬಳಗೋಡು ಬಳಿ ಮೀಡಿಯನ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 26 ವರ್ಷದ ಯುವಕ ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿವೆ. ಇವರೆಲ್ಲ ಹೊಸ ವರ್ಷಾಚರಣೆಗೆಂದು ರಾಮನಗರದ ಕಡೆಗೆ ಜಾಲಿರೈಡ್ ಹೊರಟಿದ್ದರು ಎನ್ನಲಾಗಿದೆ.

ಮೃತರನ್ನು ಖಾಸಗಿ ಕಾರ್ಖಾನೆಯ ನೌಕರ ಪ್ರಸಾದ್ ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಮಂಜುನಾಥ್, ಶಶಿಧರ್, ನವೀನ್ ಮತ್ತು ಚೇತನ್ ಕುಮಾರ್ ಪಶ್ಚಿಮ ಬೆಂಗಳೂರು ಸುಂಕದಕಟ್ಟೆ ನಿವಾಸಿಗಳು. ಈ ಅವಘಡವು ಮಧ್ಯಾಹ್ನ 12.30 ರ ಸುಮಾರಿಗೆ ಸಂಭವಿಸಿದೆ. ನವೀನ್ ವಾಹನದ ನಿಯಂತ್ರಣ ತಪ್ಪಿ ಮೀಡಿಯನ್ ಗೆ ಡಿಕ್ಕಿ ಹೊಡೆದಿದೆ. ಕಾರು ಗಾಳಿಯಲ್ಲಿ ಪಲ್ಟಿ ಹೊಡೆದು ರಸ್ತೆಗೆ ಬಿದ್ದಿಎ ಎಂದು ಪೊಲಿಸರು ತಿಳಿಸಿದ್ದಾರೆ.
21 ವರ್ಷದ ಛಾಯಾಗ್ರಾಹಕರೊಬ್ಬರು ಎರಡನೇ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೊಸ ವರ್ಷಾಚರಣೆಗೆ ಚನ್ನಪಟ್ಟಣದ ಹಳ್ಳಿಯ ಕಡೆಗೆ ಹೋಗುತ್ತಿದ್ದರು. ಸ್ನೇಹಿತನ ಸ್ಕೂಟರ್ ಅವರ ಮೃತರ ಬೈಕ್‌ಗೆ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಹಿನ್ನೆಲೆ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಮೃತರು ದಕ್ಷಿಣ ಬೆಂಗಳೂರಿನ ಶ್ರೀನಗರದ ನಿವಾಸಿ ರವಿಕಿರಣ್ ಎಂಬುವರು ಬಲಿಯಾಗಿದ್ದಾರೆ. ಸ್ನೇಹಿತ ತ್ರಿವಿಕ್ರಮ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಕ್ಕೂರು ಪೊಲೀಸರು ತಿಳಿಸಿದ್ದಾರೆ.
ಬಿಟೆಕ್ ವಿದ್ಯಾರ್ಥಿ ಸಾವು, ಮತ್ತೊಬ್ಬನಿಗೆ ಗಾಯ
ಮೂರನೇ ಅಪಘಾತದಲ್ಲಿ ಮಾದನಾಯಕನಹಳ್ಳಿ ಬಳಿಯ ತಮ್ಮೇನಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ 18 ವರ್ಷದ ಗಿರೀಶ್ ಮೃತಪಟ್ಟಿದ್ದಾನೆ. ಸ್ನೇಹಿತರೊಂದಿಗೆ ಹೊಸ ವರ್ಷ ಆಚರಿಸಲು ಪೀಣ್ಯಕ್ಕೆ ತೆರಳಿದ್ದರು. ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೈಕ್ ನಿಯಂತ್ರಣ ತಪ್ಪಿದ್ದರಿಂದ ಈ ಅಚಾತುರ್ಯ ನಡೆದಿದೆ.

ಮಾಗಡಿ ತಾಲೂಕಿನ ಸೋಲೂರು ಸಮೀಪದ ರಾಷ್ಟ್ರೀಯ ಹೆದ್ದಾರಿ-75ರ ಸಾಹುಕಾರನಪಾಳ್ಯದಲ್ಲಿ ದ್ವಿಚಕ್ರ ವಾಹನ ರಸ್ತೆಗೆ ಬಿದ್ದ ಪರಿಣಾಮ 19 ವರ್ಷದ ಬಿಟೆಕ್ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತನ ಸಹಪಾಠಿಗೆ ತೀವ್ರ ಗಾಯಗಳಾಗಿವೆ.
ಕುದೂರು ಪೊಲೀಸರು ಮೃತರನ್ನು ಕುಶಾಂತ್ ರೆಡ್ಡಿ ಎಂದು ಗುರುತಿಸಿದ್ದಾರೆ. ಗಾಯಗೊಂಡ ಸಹಪಾಠಿ ಮಧು ಮೋಹನ್ ಸೇರಿ ಇಬ್ಬರು ಬನ್ನೇರುಘಟ್ಟ ನಿವಾಸಿಗಳು. 2 ನೇ ವರ್ಷದ ಬಿಟೆಕ್ ಓದುತ್ತಿದ್ದರು. ಇವರು ಹೊಸ ವರ್ಷಾಚರಣೆಗೆಂದು ಶ್ರವಣಬೆಳಗೊಳಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಭಾನುವಾರ ಬೆಳಗ್ಗೆ ಅಪಘಾತ ಸಂಭಿವಿಸಿದೆ ಎಂದು ಪೊಲೀಸರು ತಿಳಿಸಿದರು.












Click it and Unblock the Notifications