ಅಮೇರಿಕ-ಭಾರತ ಸಹಭಾಗಿತ್ವದ ಅತ್ಯುತ್ತಮ ಉದಾಹರಣೆ– ಬಿಲ್ ನೆಲ್ಸನ್
ಬೆಂಗಳೂರು ನವೆಂಬರ್ 30: ನಾಸಾ ಅಡ್ಮಿನಿಸ್ಟ್ರೇಟರ್ ಬಿಲ್ ನೆಲ್ಸನ್ ಅವರು ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಲಾಜಿಕಲ್ ಮ್ಯೂಸಿಯಂ (VITM) ನಲ್ಲಿ ಬುಧವಾರ (ನವೆಂಬರ್ 29) "ರೀಚಿಂಗ್ ಫಾರ್ ದ ಸ್ಟಾರ್ಸ್: ಎ ಕಾನ್ವರ್ಸೇಷನ್ ವಿತ್ ನಾಸಾ ಅಂಡ್ ಇಸ್ರೋ" ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಅನ್ವೇಷಣೆಯ ಮನೋಭಾವ ಬೆಳೆಸುವುದನ್ನು ಗುರಿಯಾಗಿಟ್ಟುಕೊಂಡು ಅಮೇರಿಕ ಸರ್ಕಾರ ಮತ್ತು ವಿಐಟಿಎಂ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ನಾಸಾ ಅಡ್ಮಿನಿಸ್ಟ್ರೇಟರ್ ಬಿಲ್ ನೆಲ್ಸನ್, ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಶ್ರೇಷ್ಠತೆಯ ಅನ್ವೇಷಣೆಯಲ್ಲಿ ಕುತೂಹಲ, ಪರಿಶ್ರಮ ಮತ್ತು ಉತ್ಸಾಹದ ಮಹತ್ವವನ್ನು ವಿವರಿಸಿದರು. ಬಾಹ್ಯಾಕಾಶ ವಲಯದಲ್ಲಿ ಅಮೇರಿಕ ಮತ್ತು ಭಾರತದ ನಡುವೆ ಸತತ ಬೆಳೆಯುತ್ತಿರುವ ಸಹಭಾಗಿತ್ವವನ್ನು ಎತ್ತಿ ತೋರಿಸಿದ ಅವರು, ಬಾಹ್ಯಾಕಾಶ ಅನ್ವೇಷಣೆಯಲ್ಲಿ ದೇಶಗಳು ಜತೆಯಾಗಿ ಕೆಲಸ ಮಾಡಿದಾಗ ಬಹಳಷ್ಟು ಸಾಧಿಸಬಹುದಾಗಿದೆ ಎಂದರು.

"ವಿಶ್ವಾದ್ಯಂತ ಇರುವ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಆಳವಾದ ಅಧ್ಯಯನ ಮಾಡಲು ಉತ್ಸುಕರಾಗಿದ್ದಾರೆ, ಅದು ಅವರನ್ನು ಭವಿಷ್ಯದ ಅನ್ವೇಷಕರು ಮತ್ತು ಮಾನವಕುಲವನ್ನು ಹೊಸ ಎತ್ತರಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಸಿದ್ಧಗೊಳಿಸುತ್ತಿದೆ. ಇದುವರೆಗೆ ಹೆಜ್ಜೆಮೂಡದ ನೆಲದಲ್ಲಿ... ಪ್ರಪಂಚದ ಅನೇಕ ರಹಸ್ಯಗಳನ್ನು ಬಿಡಿಸಲಿದ್ದಾರೆ," ಎಂದು ಅಡ್ಮಿನಿಸ್ಟ್ರೇಟರ್ ಬಿಲ್ ನೆಲ್ಸನ್ ಹೇಳಿದರು. "ಬೆಂಗಳೂರಿಗೆ ಬಂದಿರುವುದು ಬಹು ಗೌರವದ ವಿಷಯ. ಇಲ್ಲಿ ನಾಸಾ ಮತ್ತು ಇಸ್ರೋ ಜತೆಯಾಗಿ ಅರ್ಟಿಮಿಸ್ ಸದಸ್ಯರು, ಉಭಯ ದೇಶಗಳು ಹಾಗೂ ಇಡೀ ವಿಶ್ವಕ್ಕೇ ಅನುಕೂಲವಾಗುವ ಹೊಸ ಸಾಧ್ಯತೆಗಳ ಬಗ್ಗೆ ಜತೆಯಾಗಿ ಕೆಲಸ ಮಾಡಲಿದ್ದಾರೆ."
ಇದಲ್ಲದೇ ಉಭಯ ದೇಶಗಳ ಮುಂಬರುವ ಜಂಟಿ ನೈಸಾರ್ (ನಾಸಾ- ಇಸ್ರೋ ಸಿನ್‌ಥೆಟಿಕ್ ಅಪಾರ್ಚರ್ ರಾಡಾರ್) ಮಿಷನ್ 2024 ರಲ್ಲಿ ಉಡ್ಡಯನಗೊಳ್ಳಲು ನಿಗದಿಯಾಗಿದೆ. ಇದು ಬಾಹ್ಯಾಕಾಶ ವಲಯದಲ್ಲಿ ಅಮೇರಿಕ ಮತ್ತು ಭಾರತದ ಸಹಯೋಗವು ಹೇಗೆ ಪ್ರಪಂಚದ ಎಲ್ಲರಿಗೆ ಒಳಿತು ಮಾಡುತ್ತದೆ ಎಂಬುದರ ದ್ಯೋತಕವಾಗಿದೆ. ನೈಸಾರ್‌ನ ದತ್ತಾಂಶವು ವಿಶ್ವಾದ್ಯಂತ ನೈಸರ್ಗಿಕ ಸಂಪನ್ಮೂಲಗಳ ಸಮರ್ಥ ನಿರ್ವಹಣೆ ಮತ್ತು ಪ್ರಕೃತಿವಿಕೋಪಗಳಿಂದ ರಕ್ಷಣೆಗೆ ನೆರವಾಗುವುದಲ್ಲದೆ, ಹವಾಮಾನ ಬದಲಾವಣೆಯ ಗತಿ ಮತ್ತು ಅದರ ಪರಿಣಾಮಗಳ ಬಗ್ಗೆ ವಿಜ್ಞಾನಿಗಳಿಗೆ ಹೆಚ್ಚಿನ ಮಾಹಿತಿ ನೀಡಲಿದೆ.
ಇಸ್ರೋ ಮತ್ತು ನಾಸಾದ ನಡುವಣ ಸುಧೀರ್ಘ ಸಹಕಾರವನ್ನು ನೆನಸಪಿಸಿಕೊಂಡ ಇಸ್ರೋ ಸೈಟಿಫಿಕ್ ಸೆಕ್ರಟರಿ ಶಂತನು ಭಟವ್ಡೇಕರ್, ಗಗನಯಾನದಲ್ಲಿ ಎರಡೂ ಸಂಸ್ಥೆಗಳ ನಡುವಣ ಸಹಕಾರ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ನೈಸಾರ್ ಕೊಡುವ ದತ್ತಾಂಶದ ಬಗ್ಗೆ ಕಾಯುತ್ತಿದ್ದೇವೆ, ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ಭಾರತದ ಗಗನಯಾತ್ರಿ ರಾಕೇಶ್ ಶರ್ಮಾ, ಆರ್ಟೆಮಿಸ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ನಾವು ಸಹಭಾಗಿತ್ವದ ಪ್ರಯತ್ನಗಳಲ್ಲಿ ತೊಡಗಿರುವಾಗ, "ಎಲ್ಲರ ಪ್ರಯೋಜನಕ್ಕಾಗಿ" ಎಂಬ ನಾಸಾದ ಮಾರ್ಗದರ್ಶಿ ತತ್ವದೊಂದಿಗೆ ಭಾರತದ ಸಾಂಸ್ಕೃತಿಕ ಮೌಲ್ಯಗಳ ಜೋಡಣೆಯನ್ನು ನಾನು ಕುತೂಹಲದಿಂದ ನಿರೀಕ್ಷಿಸುತ್ತೇನೆ, " ಎಂದರು.
ವೈವಿಧ್ಯಮಯ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ೮ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳು ನಾಸಾ ಅಡ್ಮಿನಿಸ್ಟ್ರೇಟರ್ ಮತ್ತು ಗಗನಯಾತ್ರಿ ರಾಕೇಶ್ ಶರ್ಮಾ ಅವರ ಯಾನ, ಬಾಹ್ಯಾಕಾಶ ಪರಿಶೋಧನೆಯಲ್ಲಿನ ಬೆಳವಣಿಗೆಗಳು, ವಿಜ್ಞಾನಿ, ಎಂಜಿನಿಯರ್ ಆಗ ಬಯಸುವವರಿಗೆ ರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ವಿಐಟಿಎಂ ನಿರ್ದೇಶಕಿ ಕೆ.ಎ. ಸಾಧನಾ ಅತಿಥಿಗಳನ್ನು ಸ್ವಾಗತಿಸಿದರು, ಚೆನ್ನೈ ದೂತಾವಾಸದ ವಕ್ತಾರರಾದ ಸಮಾಂತಾ ಜಾಕ್ಸನ್, ತಮ್ಮ ಸಮಯ ಮತ್ತು ಜ್ಞಾನದ ಮೂಲಕ ಯುವ ಮನಸ್ಸುಗಳಿಗೆ ಪ್ರೇರಣೆ ನೀಡಿದ್ದಕ್ಕಾಗಿ ಗಣ್ಯರಿಗೆ ಧನ್ಯವಾದ ಅರ್ಪಿಸಿದರು. ಚೆನ್ನೈ ದೂತಾವಾಸದ ವಕ್ತಾರರ ಕಚೇರಿಯು ನಾಸಾ- ಇಸ್ರೊ ಬಾಹ್ಯಾಕಾಶ ರಾಜತಾಂತ್ರಿಕತೆಯ ಭಾಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಮಾಧ್ಯಮ ಸಂವಾದವನ್ನು ಆಯೋಜಿಸಿತ್ತು.
ಚಿತ್ರ ಶೀರ್ಷಿಕೆ 1: ಬೆಂಗಳೂರಿನಲ್ಲಿ ಬುಧವಾರ, ನವೆಂಬರ್ 29, 2023 ರಂದು ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಲಾಜಿಕಲ್ ಮ್ಯೂಸಿಯಂನಲ್ಲಿರುವ ನಾಸಾದ ಮಾರ್ಸ್ ರೋವರ್ ಆಪರ್ಚುನಿಟಿ ಪ್ರತಿಕೃತಿಯ ಪೂರ್ಣ ಪ್ರಮಾಣದ ಮಾದರಿಯನ್ನು ವೀಕ್ಷಿಸುತ್ತಿರುವ ನಾಸಾ ಅಡ್ಮಿನಿಸ್ಟ್ರೇಟರ್ ಬಿಲ್ ನೆಲ್ಸನ್, ಇಸ್ರೋ ಸೈಂಟಿಫಿಕ್ ಸೆಕ್ರೆಟರಿ ಶಂತನು ಭಟವ್ಡೇಕರ್, ಗಗನಯಾತ್ರಿ ರಾಕೇಶ್ ಶರ್ಮಾ ಮತ್ತು ವಿಐಟಿಎಂ ನಿರ್ದೇಶಕಿ ಕೆ.ಎ. ಸಾಧನ.
ಚಿತ್ರ ಶೀರ್ಷಿಕೆ 2: ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಲಾಜಿಕಲ್ ಮ್ಯೂಸಿಯಂನಲ್ಲಿ ಬುಧವಾರ, ನವೆಂಬರ್ 29, 2023 ರಂದು ನಡೆದ ರಂದು "ರೀಚಿಂಗ್ ಫಾರ್ ದ ಸ್ಟಾರ್ಸ್: ಎ ಕಾನ್ವರ್ಸೇಷನ್ ವಿತ್ ನಾಸಾ ಅಂಡ್ ಇಸ್ರೋ" ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವ ನಾಸಾದ ಅಡ್ಮಿನಿಸ್ಟ್ರೇಟರ್ ಬಿಲ್ ನೆಲ್ಸನ್. ಇಸ್ರೋದ ಸೈಂಟಿಫಿಕ್ ಸೆಕ್ರೆಟರಿ ಶಂತನು ಭಟವ್ಡೇಕರ್, ಗಗನಯಾತ್ರಿ ರಾಕೇಶ್ ಶರ್ಮಾ ಮತ್ತು ವಿಐಟಿಎಂ ನಿರ್ದೇಶಕಿ ಕೆ.ಎ. ಸಾಧನ ಚಿತ್ರದಲ್ಲಿದ್ದಾರೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ












Click it and Unblock the Notifications