Bengaluru Double-Decker Flyover : ಡಬಲ್ ಡೆಕ್ಕರ್ ಫ್ಲೈಓವರ್ 2023 ಮಾರ್ಚ್ಗೆ ಪೂರ್ಣ
ಬೆಂಗಳೂರು, ಡಿಸೆಂಬರ್ 27: ರಾಜ್ಯ ರಾಜಧಾನಿ ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮುಂದಿನ ವರ್ಷ 2023ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಮಾರೇನಹಳ್ಳಿ ರಸ್ತೆಯ ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಿನ ರಸ್ತೆ ಮತ್ತು ರೈಲು ಮೇಲ್ಸೇತುವೆಯ ನಿರ್ಮಾಣ ಕೆಲಸ ನಡೆಯುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.
ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್ ಯಶವಂತ್ ಚವಾಣ್ ತಿಳಿಸಿದ್ದಾರೆ. ಡಬಲ್ ಡೆಕ್ಕರ್ ಫ್ಲೈಓವರ್ ಅಥವಾ ಬಹುಮಾದರಿ ರಸ್ತೆ ಮೇಲ್ಸೇತುವೆ ಕುರಿತು ಮಾಹಿತಿ ನೀಡಿದ್ದಾರೆ. ಈ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ ಕೆಲಸ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, 2023ರ ಆರಂಭಿಕ ತ್ರೈಮಾಸಾಂತ್ಯಕ್ಕೆ ಪೂರ್ಣಗೊಂಡು ಸಂಚಾರ ಆರಂಭಿಸುವ ಸಾಧ್ಯತೆ ಇದೆ. ವಾಸ್ತವವಾಗಿ 2021ರ ಅಕ್ಟೋಬರ್ ವೇಳೆಗೆ ಡಬಲ್ ಡೆಕ್ಕರ್ ಫ್ಲೈಓವರ್ ಕಾಮಗಾರಿ ಕೆಲಸ ಪೂರ್ಣವಾಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎಂದರು.
ಮಾರೇನಹಳ್ಳಿ ರಸ್ತೆಯ ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಿನ 3.3-ಕಿಮೀ ಉದ್ದದ ರಸ್ತೆ ಮತ್ತು ರೈಲು ಮೇಲ್ಸೇತುವೆಯ ಕಾಮಗಾರಿಯು ಪ್ರಗತಿಯಲ್ಲಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಮುಂದಿನ ಮೂರು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಎತ್ತರವಾಗಿ ಮೆಟ್ರೋ ಮಾರ್ಗದ ಮೇಲ್ಸೇತುವೆ ನಿರ್ಮಿಸಲಾಗಿದೆ. ಆ ಲೈನ್‌ನಲ್ಲಿ ನೆಲದಲ್ಲಿ ಈಗಿರುವ ರಸ್ತೆ ಮಟ್ಟಕ್ಕಿಂತ 8 ಮೀ ಎತ್ತರದಲ್ಲಿ ಎಲಿವೇಟೆಡ್ ರಸ್ತೆಯೊಂದನ್ನು ನಿರ್ಮಿಸಲಾಗುತ್ತಿದೆ. ಈ ರಸ್ತೆಯಿಂದ ಮೆಟ್ರೋ ರೈಲಿನ ಹಳಿ ಒಟ್ಟು 16 ಮೀಟರ್ ಎತ್ತರದಲ್ಲಿದೆ. ಜೈಪುರ, ನಾಗಪುರ ಮತ್ತು ಮುಂಬೈನಂತಹ ನಗರಗಳ ನಂತರ ಈ ರೀತಿಯ ಬಹುಮಾದರಿ ರಸ್ತೆ ನಿರ್ಮಾಣ (ಡಬಲ್ ಡೆಕ್ಕರ್ ಫ್ಲೈಓವರ್ ಬೆಂಗಳೂರಿನಲ್ಲಿ ಆಗಿದೆ.

ಸಿಗ್ನಲ್ ಮುಕ್ತ ಕಾರಿಡಾರ್ ಆಗಲಿದೆ
ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಲೂಪ್‌ಗಳು ಮತ್ತು ರ‍್ಯಾಂಪ್‌ಗಳ ಕೆಲಸ ಮುಗಿಸಲು ಹೆಚ್ಚು ಸಮಯ ಹಿಡಿಯಬಹುದು.ರಸ್ತೆ ಮೇಲ್ಸೇತುವೆಯನ್ನು ವಾಹನ ಸವಾರರು ಬಳಸಲು ಲೂಪ್‌ಗಳು ಮತ್ತು ರ‍್ಯಾಂಪ್‌ಗಳಿಗೆ ಸಂಪರ್ಕಿಸಬೇಕು. ರಾಗಿಗುಡ್ಡ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ ಮಾರ್ಗವು ಸಿಗ್ನಲ್ ಮುಕ್ತ ಕಾರಿಡಾರ್ ಆಗಿರಲಿದೆ.
ಇದರಿಂದ ಪೀಕ್ ಅವರ್‌ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ. ಅಲ್ಲದೇ ಮೆಟ್ರೋ ಆರಂಭವಾದ ನಂತರ ವಾಹನ ಸಂಚಾರ ಮತ್ತಷ್ಟು ತಗ್ಗಲಿದೆ. ಎಲಿವೇಟೆಡ್ ರಸ್ತೆಯಲ್ಲಿ ಚತುಷ್ಪಥ ರಸ್ತೆ ಮತ್ತು ಸಾಮಾನ್ಯ ರಸ್ತೆಯ ಚತುಷ್ಪಥ ರಸ್ತೆಯಿಂದಾಗಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಮೆಟ್ರೋ ಲೈನ್ ವ್ಯಾಪ್ತಿಯ ಆರ್ವಿ ರಸ್ತೆ, ಬೊಮ್ಮಸಂದ್ರ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್, ಕೆಆರ್ ಪುರಂ, ಸಿಲ್ಕ ಬೋರ್ಡ್ ಜಂಕ್ಷನ್ ಮೂಲಕ ಹಾದು ಹೋಗುತ್ತದೆ. ನಗರದ ಪ್ರಮುಖ ರಸ್ತೆಯೂ ಇದಾಗಿದ್ದರಿಂದ ಈ ಭಾಗದಲ್ಲಿ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿತ್ತು ಎಂದು ಯಶವಂತ ಚವಾಣ್ ಹೇಳಿದರು.












Click it and Unblock the Notifications