Airtel: ಬೆಂಗಳೂರು ಏರ್‌ಟೆಲ್ ಬಳಕೆದಾರರಿಗೆ ನೆಟ್‌ವರ್ಕ್ ಕಿರಿಕಿರಿ, ಅಡಚಣೆ!
ಬೆಂಗಳೂರು, ಮಾರ್ಚ್ 06: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಟೆಲಿಕಾಂ ಮೊಬೈಲ್ ಬಳಕೆದಾರರು ಸಾಕಷ್ಟು ಅಡಚರಣೆ ಎದುರಿಸಿದ್ದಾರೆ. ಏಕೆಂದರೆ ರಾತ್ರಿ ತುಂಬಾ ಸಮಯದವರೆಗೆ ಕರೆ ಮಾಡಲು, ಸಂದೇಶ ರವಾನಿಸಲು ಹರಸಾಹರಪಡುವಂತಾಯಿತು. ಕರೆ ಸಾಧ್ಯವಾದರೂ ಸಹಿತ ಸಾಕಷ್ಟು ಅಡೆತಡೆ, ಕರೆ ಕಡಿತಗೊಳ್ಳುವುದು ನಡೆಯಿತು. ಹಾಗಾದರೆ ಯಾವ ನೆಟ್‌ವರ್ಕ್ ಅಡಿ ನಡೆಯಿತು, ಅದಕ್ಕೆ ಕಾರಣವೇನು?.
ಬೆಂಗಳೂರಿನ ಅನೇಕ ಭಾಗಗಳಲ್ಲಿ ಮೊಬೈಲ್ ಫೋನ್ ಬಳಕೆದಾರರು ನೆನ್ನೆ ಸಂಜೆ ಬಳಿಕ ಸಾಕಷ್ಟು ಅಡಚಣೆ ಎದುರಿಸಿದ್ದಾರೆ. ಯಾರೆ ಕರೆ ಮಾಡಿದರೂ ಧ್ವನಿ ಕರೆಯಲ್ಲಿ ಅಸ್ಪಷ್ಟತೆ, ಇಂಟರ್‌ನೆಟ್ ವೇಗವು ಕಡಿಮೆ ಆಗಿದೆ. ಇದು ಎಲ್ಲ ಜಿಯೋ, ವಡಾಫೋನ್, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನಲ್ಲಿ ಆಗಿಲ್ಲ. ಬದಲಾಗಿ ಏರ್‌ಟೆಲ್ ಬಳಕೆದಾರರಿಗೆ ಮಾತ್ರ ಅನುಭವವಾಗಿದೆ.

ಕರೆ ಮಾಡಿದಾಗ ಎರಡು ಬದಿಯ ಏರ್‌ಟೆಲ್ ಗ್ರಾಹಕರು ಇದ್ದರಂತೂ ಸಮಸ್ಯೆ ಮೊದಲೇ ಅನುಭವಕ್ಕೆ ಬಂದಿರುತ್ತದೆ. ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ ಎಂದು ಏರ್‌ಟೆಲ್ ಆಪರೇಟರ್ಸ್‌ಗಳು ಮಾಹಿತಿ ನೀಡಿದ್ದಾರೆ. ಕರೆ ಮಾಡಲು, ಸಂದೇಶ ಕಳುಹಿಸಿ ರಾತ್ರಿ ಹೆಚ್ಚಿನ ಸಮಸ್ಯೆಯಾಗಿತ್ತು.
ಇದಷ್ಟೇ ಅಲ್ಲದೇ ಕರೆ ಮಾಡಿದಾಗ ಕೇಳುವ ಅಸಾಮಾನ್ಯ ರಿಂಗ್‌ಟೋನ್ ಇದು ಸಾಕಷ್ಟು ಕಿರಿ ಕಿರಿ ಉಂಟು ಮಾಡುತ್ತಿದೆ. ಸೈಬರ್ ಅಪರಾಧ ಕುರಿತು ಕರೆ ಮಾಡಿದ ಕೂಡಲೇ ಕೇಳುವ ಧ್ವನಿ ಆರಂಭದಲ್ಲಿ ಹಿತವೆನಿಸಿದರೆ, ಮಾಹಿತಿ ಅಂಶವೆನಿಸಿದರೂ ಸಹಿತ ಬರು ಬರುತ್ತಾ ಅದೊಂದು ಕಿರಿ ಕಿರಿ ಅನ್ನಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಕರೆ ಮಾಡುವವರಿಗೆ ರಿಂಗ್‌ಟೋನ್ ಕೊಂಚ ಅಹಿತವೆನಿಸುತ್ತಿದೆ ಎಂದು ಕೆಲವು ಹೇಳಿಕೊಂಡಿದ್ದಾರೆ.
ಜಿಯೋ, ವಡಾಫೋನ್, ಬಿಎಸ್‌ಎನ್‌ಎಲ್ ಟೆಲಿಕಾಂ ಆಪರೇಟರ್‌ಗಳ ಚಂದಾದಾರರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆ ಕಂಪನಿಗಳ ನೆಟ್‌ವರ್ಕ್ ಗೆ ಸಮಸ್ಯೆ ಆಗಿಲ್ಲ. ಈ ಸಮಸ್ಯೆ ಏರ್‌ಟೆಲ್ ನೆಟ್‌ವರ್ಕ್ ವ್ಯಾಪ್ತಿಯಲ್ಲಿ ಮಾತ್ರವೇ ಆಗಿದ್ದರಿಂದ ಆ ಗ್ರಾಹಕರು ಸ್ವಲ್ಪ ತೊಂದರೆ ಎದುರಿಸಬೇಕಾಯಿತು.
ಏರ್‌ಟೆಲ್ ಸೈಟ್‌ಗಳ ಪೈಕಿ ಒಂದರಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿತ ಸಮಸ್ಯೆ ಕಂಡು ಬಂದಿತ್ತು. ಅದನ್ನು ಈಗ ಪರಿಹರಿಸಲಾಗಿದೆ. ಯಾವುದೇ ಸಮಸ್ಯೆ ಇಲ್ಲ. ವ್ಯವಸ್ಥೆಯನ್ನು ಸಂಪೂರ್ಣ ಮರು ಸ್ಥಾಪನೆ ಮಾಡಿ, ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿದೆ. ಹೀಗಾಗಿ ಕರೆಗಳು, ಎಸ್‌ಎಂಎಸ್, ಇಂಟರ್‌ನೆಟ್‌ಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ ಎಂದು ಟೆಲಿಕಾಂ ಆಪರೇಟರ್ಸ್‌ಗಳು ತಿಳಿಸಿದ್ದಾರೆ.
ಜೋರು ಗಾಳಿ ಬೀಸಿದಾಗ ಸಮಸ್ಯೆ ಸೃಷ್ಟಿ
ತಡರಾತ್ರಿ ತಂಪು ವಾತಾವರಣ ಕಂಡು ಬರುತ್ತಿರುವ ಬೆಂಗಳೂರಿನಲ್ಲಿ ಕೆಲವು ಪ್ರದೇಶಗಳಲ್ಲಿ ಜೋರು ಗಾಳಿ ಬೀಸುತ್ತದೆ. ಹೆಚ್ಚು ಗಿಡ ಮರಗಳು ಇರುವ ಪ್ರದೇಶಗಳಲ್ಲಿ ಹೀಗೆ ವ್ಯಾಪಕ ಗಾಳಿ ದಿಢೀರ್ ಬೀಸಿದಾಗ ಇಂತಹ ತಾಂತ್ರಿಕ ಸಮಸ್ಯೆಗಳು ಉದ್ಭವಿಸುವುದು ಸಾಮಾನ್ಯ. ಅದನ್ನು ಕಂಡು ಕೊಂಡು ಕೂಡಲೇ ಸರಿ ಮಾಡಿದ್ದೇವೆ. ಸರಿಪಡುವವರೆಗೆ ಗ್ರಾಹಕರು ತಾತ್ಕಾಲಿಕವಾಗಿ ಧ್ವನಿ ಕರೆ, ಇಂಟರ್‌ನೆಟ್ ಸಮಸ್ಯೆ ಎದುರಿಸಿರುತ್ತಾರೆ. ಬಳಿಕ ಎಲ್ಲವು ಸರಿ ಮಾಡಲಾಗುತ್ತದೆ ಎಂದಿದ್ದಾರೆ.












Click it and Unblock the Notifications