Bengaluru Second Airport: 2ನೇ ವಿಮಾನ ನಿಲ್ದಾಣ ಸ್ಥಳದ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ಎಂ ಬಿ ಪಾಟೀಲ್
Bengaluru second international airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೂರು ಜಾಗಗಳನ್ನು ಗುರುತಿಸಲಾಗಿದ್ದು. ಕೇಂದ್ರ ಸರ್ಕಾರದ ಹಂತದಲ್ಲಿ ಪರಿಶೀಲನೆ ನಡೆದಿದೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಸಂಬಂದಿಸಿದಂತೆ ಕೇಂದ್ರದಿಂದ ಸ್ಥಳ ಆಯ್ಕೆ ಕುರಿತ ವರದಿ ಬರಬೇಕಾಗಿದೆ. ಅದರ ನಂತರ ಕಾರ್ಯಸಾಧ್ಯತಾ ಅಧ್ಯಯನ ಮಾಡಿಸಿ, ಅಂತಿಮಗೊಳಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ - ಬೃಹತ್ ಕೈಗಾರಿಕೆ ವಿಭಾಗದ ಎರಡು ವರ್ಷಗಳ ಸಾಧನೆ ಕುರಿತು ಎಂ.ಬಿ.ಪಾಟೀಲ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರವು ಕರ್ನಾಟಕದ ಎಲ್ಲ ದಿಕ್ಕುಗಳಲ್ಲೂ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಆದ್ಯತೆ ನೀಡಿದೆ.. ಇದರಿಂದ ಪ್ರವಾಸೋದ್ಯಮ, ಶೈಕ್ಷಣಿಕ ಚಟುವಟಿಕೆಗಳು, ವಾಣಿಜ್ಯ ವಹಿವಾಟು, ಕೃಷಿ ಉತ್ಪನ್ನಗಳ ಸಾಗಾಟ ಇವೆಲ್ಲವೂ ಸುಗಮವಾಗಲಿದೆ. ಅಂತಿಮವಾಗಿ ಈ ಉಪಕ್ರಮವು ರಾಜ್ಯದ ಆರ್ಥಿಕತೆಗೆ ಬಲ ತುಂಬಲಿದೆ. ಕೆಎಸ್ಐಐಡಿಸಿ ಮೂಲಕವೇ ರಾಜ್ಯದ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾಡುವ ಚಾರಿತ್ರಿಕ ನಿರ್ಧಾರದೊಂದಿಗೆ ಬೊಕ್ಕಸಕ್ಕೆ ಹೊಸ ಸಂಪನ್ಮೂಲ ಸೃಷ್ಟಿಸುವ ಉದ್ದೇಶವನ್ನೂ ಇರಿಸಿಕೊಳ್ಳಲಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣ
ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 15 ಕಿ.ಮೀ. ಅಂತರದಲ್ಲಿ ರೂ.449.22 ಕೋಟಿ ವೆಚ್ಚದಲ್ಲಿ ನ ವಿಮಾನ ನಿಲ್ದಾಣ. ಇಲ್ಲಿ ನಾಗರಿಕ ವಿಮಾನ ಸಂಚಾರ ಸೇವೆಗೆ 2023ರ ಆಗಸ್ಟ್ 31ರಂದು ಚಾಲನೆ ನೀಡಲಾಯಿತು.
ಎ-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಸಿದ್ಧಗೊಂಡಿರುವ ಈ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ದಿ ನಿಗಮ (ಕೆ.ಎಸ್.ಐ.ಐ.ಡಿ.ಸಿ) ವಹಿಸಿಕೊಂಡಿರುವುದು ಉಲ್ಲೇಖಾರ್ಹ ಅಂಶವಾಗಿದೆ. ಈ ನಿಲ್ದಾಣದಲ್ಲಿ ಹೆಚ್ಚುವರಿ ಮೂಲಸೌಲಭ್ಯಗಳ (ಭದ್ರತಾ ಉಪಕರಣ) ಅಳವಡಿಕೆ. ಮೊದಲಿಗೆ, ಶಿವಮೊಗ್ಗ-ಬೆಂಗಳೂರು ನಡುವೆ ಇದ್ದ ವಿಮಾನ ಹಾರಾಟ ವ್ಯವಸ್ಥೆ, ನಂತರ ಶಿವಮೊಗ್ಗ-ಹೈದರಾಬಾದ್, ಶಿವಮೊಗ್ಗ-ತಿರುಪತಿ ಮತ್ತು ಶಿವಮೊಗ್ಗ-ಗೋವಾಗೂ ವಿಸ್ತರಣೆ ಕಂಡಿದೆ.
ವಿಜಯಪುರ ವಿಮಾನ ನಿಲ್ದಾಣ
ಒಟ್ಟು, 727 ಎಕರೆ ವಿಸ್ತೀರ್ಣದಲ್ಲಿ ರೂ. 347.92 ಕೋಟಿ ವೆಚ್ಚದಲ್ಲಿ ನಿರ್ಮಾಣ. ಏರ್ ಬಸ್-320 ಮಾದರಿಯ ವಿಮಾನ ನಿಲ್ದಾಣದಲ್ಲಿ ಖುದ್ದು ಮುತುವರ್ಜಿಯಿಂದಾಗಿ ರಾತ್ರಿ ವೇಳೆ ವಿಮಾನಗಳ ಲ್ಯಾಂಡಿಂಗ್ ಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಾರ್ಯಾಚರಣೆಗೆ ಕೇಂದ್ರ ಪರಿಸರ ಇಲಾಖೆ ಸೇರಿದಂತೆ ಅಗತ್ಯವಿರುವ ಪರವಾನಗಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ವರ್ಷಾಂತ್ಯದಲ್ಲಿ ಉದ್ಘಾಟನೆ ಆಗುವ ನಿರೀಕ್ಷೆ ಇದೆ.
ಹಾಸನ ವಿಮಾನ ನಿಲ್ದಾಣ
ಎಟಿಆರ್-72 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ, ಜಿಲ್ಲಾ ಕೇಂದ್ರದಿಂದ 6 ಕಿ.ಮೀ. ದೂರದಲ್ಲಿರುವ ಬೂವನಹಳ್ಳಿಯಲ್ಲಿ ನಿರ್ಮಾಣವಾಗಲಿರುವ ರೂ.193.65 ಕೋಟಿಯ ಯೋಜನೆ ಇದಾಗಿದೆ . ಇಲ್ಲಿಯವರೆಗೆ 164.70 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಪ್ಯಾಕೇಜ್-1ರಲ್ಲಿ ರೂ.117.67 ಕೋಟಿಯ ಹಾಗೂ ಪ್ಯಾಕೇಜ್-2ರಲ್ಲಿ ರೂ. 67.77 ಕೋಟಿಯ ಕಾಮಗಾರಿಗಳು 2026ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ರಾಯಚೂರು ವಿಮಾನ ನಿಲ್ದಾಣ
ಜಿಲ್ಲಾ ಕೇಂದ್ರದಿAದ 12 ಕಿ.ಮೀ. ದೂರದಲ್ಲಿ ನಿರ್ಮಾಣವಾಗಲಿರುವ ರೂ. 219 ಕೋಟಿ ವೆಚ್ಚದ ಯೋಜನೆ ಇದಾಗಿದೆ; ಇಲ್ಲಿಯವರೆಗೆ 164.70 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. * ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಭಾರತೀಯ ನೌಕಾಪಡೆಯ ಸೀಬರ್ಡ್ ಯೋಜನೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ರಕ್ಷಣಾ ವಿಮಾನ ನಿಲ್ದಾಣವನ್ನು ನಾಗರಿಕ ವಾಯುಯಾನಕ್ಕೂ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಸರ್ಕಾರದ ಕ್ರಮ. ನೌಕಾಪಡೆ ಸಹಯೋಗದಲ್ಲಿ ಸಿವಿಲ್ ಎನ್ಕ್ಲೇವ್ ನಿರ್ಮಿಸಲು ಅಂಕೋಲಾದಿಂದ 5 ಕಿ.ಮೀ ದೂರದಲ್ಲಿ ರೂ.27.84 ಕೋಟಿ ವೆಚ್ಚದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿ 2025-26ನೇ ಸಾಲಿನಲ್ಲಿ ಮುಗಿಯುವ ನಿರೀಕ್ಷೆ ಇದೆ. ಇದಕ್ಕೆ ಬೇಕಾಗುವ ₹82 ಕೋಟಿ ರಾಜ್ಯವೇ ಭರಿಸಲಿದೆ.
3 ಹೆಲಿಪೋರ್ಟ್ ನಿರ್ಮಾಣ
ಚಿಕ್ಕಮಗಳೂರು, ಮಡಿಕೇರಿ ಮತ್ತು ಹಂಪಿಯಲ್ಲಿ ಹೆಲಿಪೋರ್ಟ್ ನಿರ್ಮಾಣ ಸಂಬಂಧ ಬಜೆಟ್ ನಲ್ಲಿ ಪ್ರಕಟಿಸಲಾಗಿದೆ. ಕಾರ್ಯಸಾಧ್ಯತಾ ವರದಿ ಮತ್ತು ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಇಲ್ಲಿ ಭೂಸ್ವಾಧೀನಕ್ಕಾಗಿ ಹಣ ಬಿಡುಗಡೆಗೊಳಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಕರ್ನಾಟಕವು ವೈಮಾನಿಕ ವಲಯದಲ್ಲಿ ಈಗ 'ದಕ್ಷಿಣ ಏಷ್ಯಾದ ಎಂ.ಆರ್. ಓ. ರಾಜಧಾನಿ'ಯಾಗಿದೆ. ಇದಕ್ಕೆ ತಕ್ಕಂತೆ ಏರ್ ಇಂಡಿಯಾ, ಇಂಡಿಗೋ ಮತ್ತು ಲಾಕಿನ್ ಮಾರ್ಟಿನ್ ಕಂಪನಿಗಳು ರಾಜ್ಯದಲ್ಲಿ ತಮ್ಮ ಎಂ ಆರ್ ಒ ಘಟಕಗಳನ್ನು ಸ್ಥಾಪಿಸುತ್ತಿವೆ ಎಂದು ಹೇಳಿದರು.












Click it and Unblock the Notifications