ಜನತಾ ದರ್ಶನ: ಕೃಷ್ಣಾ ಬಿಟ್ಟು ಸಿಎಂ ನಿವಾಸಕ್ಕೆ ಬರುತ್ತಿರುವ ಸಾರ್ವಜನಿಕರು
Recommended Video

ಬೆಂಗಳೂರು, ಜೂನ್ 11:ಎಚ್.ಡಿ ಕುಮಾರಸ್ವಾಮಿಯವರ ಜನತಾ ದರ್ಶನ ಗೃಹ ಕಚೇರಿ ಕೃಷ್ಣಾದಲ್ಲಿ ನಿಗದಿಯಾಗಿದ್ದರೂ ದಿನನಿತ್ಯ ನೂರಾರು ಸಾರ್ವಜನಿಕರು ಜೆಪಿನಗರದ ಖಾಸಗಿ ನಿವಾಸಕ್ಕೆ ತೆರಳುತ್ತಿದ್ದಾರೆ.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಿಗದಿಯಾಗಿದ್ದರೂ ಭಾನುವಾರದಿಂದಲೇ ಹಲವಾರು ಜನ ಜೆಪಿನಗರದ ನಿವಾಸಸುತ್ತ ಬಂದು ಮುಖ್ಯಮಂತ್ರಿಗಳ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಶಿರಾ ತಾಲೂಕಿನ ಅಂಗವಿಕಲ ವ್ಯಕ್ತಿಯೊಬ್ಬ ಕಳೆದ ರಾತ್ರಿಯೇ ನಿವಾಸದ ಎದುರು ಭೇಟಿಗಾಘಿ ಕಾಯುತ್ತಿದ್ದು, ಇದೇ ರೀತಿ ಹಲವಾರು ಜನರು ಕಾಯುತ್ತಿದ್ದಾರೆ.
ಇದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಹಲವಾರು ಜನರನ್ನು ಮನವಿ ಮಾಡಿ ಗೃಹ ಕಚೇರಿ ಕೃಷ್ಣಾಕ್ಕೆ ಹೋಗುವಂತೆ ಕೋರುತ್ತಿದ್ದಾರೆ. ಆದರೆ ಅನೇಕರು ತಮಗೆ ಬೆಂಗಳೂರಿನಲ್ಲಿ ಹೋಗುವುದಕ್ಕೆ ದಾರಿ ಗೊತ್ತಾಗುವುದಿಲ್ಲ ತಾವು ಇಲ್ಲಿಯೇ ಸಿಎಂ ಭೇಟಿ ಮಾಡಬೇಕು ಎಂದು ಪೊಲೀಸರನ್ನು ಬೇಡಿಕೊಳ್ಳುತ್ತಿದ್ದಾರೆ.

ಈ ರೀತಿಯ ಘಟನೆಗಳು ನಿತ್ಯ ಪುನರಾವರ್ತನೆಯಾಗುತ್ತಿದ್ದು, ಮುಖ್ಯಮಂತ್ರಿಗಳ ದರ್ಶನಕ್ಕಾಗಿ ಜನತಾ ದರ್ಶನ ಎಲ್ಲಿ ನಡೆಯುತ್ತದೆ ಎಂಬುದು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ, ಆದಾಗ್ಯೂ ಕೂಡ ಜೆಪಿನಗರ ನಿವಾಸದ ಸುತ್ತ ಜನರು ಕಾಯುತ್ತಲೇ ಇರುತ್ತಾರೆ.












Click it and Unblock the Notifications