Food Post viral: ಬೆಂಗಳೂರಿನ ಈ ಹೋಟೆಲ್‌ನಲ್ಲಿ ಕಡಿಮೆ ಬೆಲೆಗೆ ಇಡ್ಲಿ, ವಡಾ, ದೋಸೆ ಲಭ್ಯ: ಎಲ್ಲಿ?
ಬೆಂಗಳೂರು, ಜುಲೈ 19: ಇಂದಿನ ದುಬಾರಿ ಕಾಲದಲ್ಲಿ ಎಲ್ಲವುಗಳ ಬೆಲೆ ಗಗನಕ್ಕೇರಿದೆ. ಕಡಿಮೆ ಬೆಲೆಗೆ ಹೊರಗಡೆ ಆಹಾರ ಸಿಗುವುದು ತುಂಬಾ ಅಪರೂಪ. ಸಿಕ್ಕರೂ ಶುಚಿ-ರುಚಿ ಕೊರತೆ ಕಂಡು ಬರುತ್ತದೆ. ಒಂದು ಟೀಗೆ 12-20ರೂ.ವರೆಗೆ ಇದೆ. ಹಸಿವು ನೀಗಿಸಿಕೊಳ್ಳಲು ಅನಿವಾರ್ಯವಾಗಿ ಒಂದೊತ್ತಿನ ತಿಂಡಿಗೆ 50-100ರೂ. ಬೇಕಾಗುತ್ತದೆ.
ಆದರೆ ಬೆಂಗಳೂರಿನಲ್ಲಿ ಇಲ್ಲಿ ಅತೀ ಕಡಿಮೆ ಬೆಲೆಗೆ ಉಪಹಾರ ಸಿಗುತ್ತಿರುವುದು ನಿಜಕ್ಕೂ ಗ್ರಾಹಕರಿಗೆ ಹರ್ಷ ಸುದ್ದಿಯೇ ಆಗಿದೆ. ಈ ಕುರಿತು ಹೋಟೆಲ್ ತಿಂಡಿ, ಮೆನು ಪೋಟೋ ಹಂಚಿಕೊಳ್ಳಲಾಗಿದೆ.

ಅಲ್ಪ ಪ್ರಮಾಣದ ಆಹಾರಕ್ಕೆ ಹೆಚ್ಚು ಬೆಲೆಗಳನ್ನು ಕಂಡು ಜನರು ದೂರುತ್ತಾರೆ. ಆದರೆ, ಬೆಂಗಳೂರಿನ ಸೌತ್ ಇಂಡಿಯನ್ ರೆಸ್ಟೊರೆಂಟ್‌ನಲ್ಲಿ ಅಗ್ಗದ ಬೆಲೆಗೆ ಆಹಾರ ಪದಾರ್ಥಗಳನ್ನು ಕೊಡುತ್ತಿರುವುದನ್ನು ನೋಡಿದ ಮಹಿಳೆ ಆಶ್ಚರ್ಯದಿಂದ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಾಮೇಶ್ವರಂ ಕೆಪೆಗಿಂತಲೂ ಉತ್ತಮ ಆಹಾರ ಎಂದ ನಟ್ಟಿಗರು
ಸಹಿಲಿ ಟೋಟಾಲೆ ಎಂಬ್ಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹೋಟೆಲ್ ಆಹಾರ ಜೊತೆಗೆ ಮೆನುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಅವರು ಪಾಕಪದ್ಧತಿಗೆ ಹೆಸರುವಾಸಿಯಾದ ಬೆಂಗಳೂರಿನ ರಾಮೇಶ್ವರಂ ಕೆಫೆಯೊಂದಿಗೆ ಹೋಲಿಸಿದ್ದಾರೆ.
ಇಡ್ಲಿ, ವಡೆ, ದೋಸೆ ಬೆಲೆ ಕೇಳಿ ಶಾಕ್
ಪೋಸ್ಟ್‌ನಲ್ಲಿ ಅವರು ಕಡಿಮೆ ಬೆಲೆಗೆ ತಿಂಡಿ ಸಿಗುವ ಮಸ್ತ್ ಜಾಗ 'ಜಯನಗರದಲ್ಲಿರುವ ಬೆಂಗಳೂರಿನ ತಾಜಾ ತಿಂಡಿ ರೆಸ್ಟೋರೆಂಟ್' ಅನ್ನು ಬಹಿರಂಗಪಡಿಸಿದ್ದಾರೆ. ಅವರು ಹಂಚಿಕೊಂಡಿ ಮೆನುವಿನಲ್ಲಿ 'ರೆಸ್ಟೋರೆಂಟ್‌ನಲ್ಲಿ ಒಂದೇ ಒಂದು ಇಡ್ಲಿ ಮತ್ತು ವಡಾ ಬೆಲೆ ₹ 10, ಮಸಾಲೆ ದೋಸೆ ₹ 20 ಬೆಲೆ ನಮೂದಿಸಲಾಗಿದೆ. ಇಷ್ಟು ಕಡಿಮೆ ಬೆಲೆಗೆ ತಿಂಡಿ ಸಿಗುತ್ತಾ ಎಂದು ನೆಟ್ಟಿಗರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ. .

ಟೋಟಾಲೆ ಅವರು ಕೆಲವು ದಿನಗಳ ಹಿಂದಷ್ಟೇ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇದು ಸುಮಾರು ಐದು ಲಕ್ಷ ವೀವ್ ಪಡೆದುಕೊಂಡಿದೆ. ಇದಕ್ಕೆ ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಪೋಸ್ಟ್‌ಗೆ ನೆಟ್ಟಿಗರು ಹೇಳಿದ್ದೇನು?
ಈ ಜಯನಗರದ ಹೋಟೆಲ್ ರಾಮೇಶ್ವರ ಹೋಟೆಲ್‌ಗಿಂತ ಉತ್ತಮವಾಗಿದೆ. ನೀವು ತುಂಬಾ ಅದೃಷ್ಟವಂತರು ಬೆಲೆಗಳು ಹೆಚ್ಚಿರುವ ವೇಳೆ ಕಡಿಮೆ ಬೆಲೆಗೆ ಆಹಾರ ಸವಿದಿದ್ದೀರಿ. ಗೋವಾದಲ್ಲಿ ನಾವು ಹೊಸ QSR ಔಟ್‌ಲೆಟ್‌ಗಳಲ್ಲಿ ದಕ್ಷಿಣ ಭಾರತೀಯ ಆಹಾರವನ್ನು ಹೆಚ್ಚು ದರದಲ್ಲಿ ತಿಂದಿದ್ದೇವೆ. ಅಲ್ಲಿ ಒಂದು ದೋಸೆ ಬೆಲೆ ₹120- ₹150 ಆದರೆ ಒಂಚೂರು ರುಚಿ ಇಲ್ಲದೆ ಆಹಾರ ಅದಾಗಿತ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮುಂಬೈನ ತಿನಿಸುಗಳು ಮತ್ತು ಬೆಲೆ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲಿ ಮಸಾಲಾ ದೋಸೆ ದರಗಳು - ಶ್ರವಣ ಭವನದಲ್ಲಿ ₹200, ಹಲ್ದಿರಾಮ್ ನಲ್ಲಿ ₹250, ದೆಹಲಿ/ಮುಂಬೈನ ರಾಮೇಶ್ವರಂ ನಲ್ಲಿ ₹120. ಮತ್ತು ಅವು ತಕ್ಕ ಮಟ್ಟಿನ ರುಚಿ ಹೊಂದಿರುತ್ತವಷ್ಟೇ. ಉಡುಪಿ ಉಪಹಾರದಂತಹ ದರ್ಶಿನಿಗಳುಗಳಲ್ಲಿ ದೋಸೆಗೆ ₹50-80 ಕೊಟ್ಟರೂ ಅತ್ಯುತ್ತಮ ರುಚಿ ಇರುತ್ತವೆ ಎಂದು ನಾಲ್ಕನೆಯ ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಶಾಖಾಹಾರಿಗಳು ಇಲ್ಲಿಗೆ ಭೇಟಿ ಕೊಡಲೇಬೇಕು
ತಾಜಾ ತಿಂಡಿ ರೆಸ್ಟೋರೆಂಟ್ ಇದು ಬೆಂಗಳೂರಿನಲ್ಲಿ ನನ್ನ ನೆಚ್ಚಿನ ದಕ್ಷಿಣ ಭಾರತದ ಆಹಾರ ಸಿಗುವ ಸ್ಥಳವಾಗಿದೆ. ನಾನು ಅಲ್ಲಿಗೆ ಹೋಗಿದ್ದೇನೆ. ಇದು ಶಾಖಾಹಾರಿಗಳಿಗೆ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ ಎಂದು ಇನ್ನೊಬ್ಬ ಸಾಮಾಜಿಕ ಬಳಕೆದಾರರು ಹೇಳಿದ್ದಾರೆ.
ನೀವು ಜಯನಗರದ ಅಕ್ಕ ಪಕ್ಕ ಇದ್ದಲ್ಲಿ ಒಮ್ಮೆ ಈ ತಾಜಾ ತಿಂಡಿ ರೆಸ್ಟೋರೆಂಟ್ ಗೆ ತೆರಳಿ ಕಡಿಮೆ ಬೆಲೆಗೆ ದೋಸೆ, ಇಡ್ಲಿ, ವಡೆ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಸವಿಯಬಹುದಾಗಿದೆ. ಇದು ಕಾಲೇಜು ವಿದ್ಯಾರ್ಥಿಗಳಿಗೆ, ಆಟೋ, ಕ್ಯಾಬ್ ಚಾಲಕರಿಗೆ ಫೇವರೇಟ್ ಹೋಟೆಲ್ ಆಗಿದೆ.
ಇಂತಹ ಮಳೆಗಾಲದಲ್ಲಿ ಆಗಾಗ ಟೀ ಕುಡಿಯುವವರು, ಸ್ನಾಕ್ಸ್ ಜೊತೆಗೆ ಇನ್ನಿತರ ತಿಂಡಿ ಸವಿಯುವವರು ಅದರಲ್ಲೂ ಜಯನಗರ ಬಸವಗುಡಿ ವ್ಯಾಪ್ತಿಯ ಸಾರ್ವಜನಿಕರು, ಆಹಾರ ಪ್ರಿಯರಿಗೆ ವರ್ಷಗಳಿಂದಲೂ ಈ ಹೋಟೆಲ್ ಕಡಿಮೆ ಬೆಲೆಗೆ ಆಹಾರ ನೀಡುತ್ತಿದೆ.












Click it and Unblock the Notifications