Traffic Advisory: ಮೆಜೆಸ್ಟಿಕ್ ಸುತ್ತಮುತ್ತ ಹೋಗುವ ಮುನ್ನ ಇಲ್ಲಿ ಗಮನಿಸಿ
ಬೆಂಗಳೂರು, ಮೇ. 06 : ಲೋಕಸಭಾ ಚುಣಾವಣೆ ಹತ್ತಿರ ಬರುತ್ತಿದ್ದು, ಮೂರನೇ ಹಂತದ ಮತದಾನಕ್ಕಾಗಿ ಜನ ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳಲಿದ್ದಾರೆ. ರಾಜ್ಯದಲ್ಲಿ ಎರಡನೇಯ ಕೊನೆಯ ಹಂತದ ಮತದಾನ ಮೇ 7 ರಂದು ನಡೆಯಲಿದ್ದು, ಜೀವನ ನಿರ್ವಹಣೆಗಾಗಿ ಸಿಲಿಕಾನ್ ಸಿಟಿಗೆ ಬಂದಿರುವವರು ತಮ್ಮ ಹಕ್ಕು ಚಲಾಯಿಸಲು ವಾಪಸ್ ತೆರಳಲಿದ್ದಾರೆ.
ಮತದಾರರು ತಮ್ಮ ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಈಗಾಗಲೇ ರಾಜ್ಯ ಸಾರಿಗೆ ನಿಗಮಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಮೆಜೆಸ್ಟಿಕ್‌ನಿಂದ ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿದೆ. ಹುಬ್ಬಳ್ಳಿ ಡಿಪೋದಿಂದಲೂ ಹೆಚ್ಚುವರಿ ಬಸ್ಸುಗಳು ಸಂಚಾರ ನಡೆಸಲಿವೆ. ಹೀಗಾಗಿಯೇ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುವ ಸಾಧ್ಯತೆಯಿದೆ. ಈ ಕುರಿತು ಬೆಂಗಳೂರು ಸಾಂಚಾರಿ ಪೊಲೀಸರು ಸಂಚಾರ ಸಲಹೆ ಹಂಚಿಕೊಂಡಿದ್ದಾರೆ.

ಮೆಜೆಸ್ಟಿಕ್ ಸುತ್ತಮುತ್ತ ಪರ್ಯಾಯ ಮಾರ್ಗ ಬಳಸಿ
ಬೆಂಗಳೂರು ಸಂಚಾರಿ ಪೊಲೀಸರು ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಸಲಹೆ ಹಂಚಿಕೊಂಡಿದ್ದಾರೆ. "ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಕರ್ನಾಟಕ ರಾಜ್ಯದ 2ನೇ ಹಂತದ ಲೋಕಸಭಾ ಚುನಾವಣೆ ನಿಮಿತ್ತ ಸಾರ್ವಜನಿಕರು / ಪ್ರಯಾಣಿಕರು ಅವರ ಸ್ವಂತ ಊರುಗಳಿಗೆ ತೆರಳಲು ಮೆಜೆಸ್ಟಿಕ್/ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದು ಹಾಗೂ ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ವತಿಯಿಂದ ಹೆಚ್ಚುವರಿಯಾಗಿ ಬಸ್ ಬಿಟ್ಟಿದೆ.
ಮೆಜೆಸ್ಟಿಕ್ / ಕೆಂಪೇಗೌಡ ಬಸ್ ನಿಲ್ದಾಣದಿಂದ ಹೆಚ್ಚುವರಿಯಾಗಿ ಕೆ.ಎಸ್.ಆರ್.ಟಿ.ಸಿ. ಬಸ್‌ಗಳನ್ನು ಬಿಟ್ಟಿರುವ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು / ವಾಹನ ಸವಾರರು ಬದಲಿ ರಸ್ತೆ ಮಾರ್ಗವನ್ನು ಬಳಿಸಿಕೊಂಡು ತೆರಳುವಂತೆ ಈ ಮೂಲಕ ಕೋರಲಾಗಿದೆ" ಎಂದು ಪಟ್ಟಿ ಬಿಡುಗಡೆ ಮಾಡಿದೆ.
"TRAFFIC ADVISORY"
— DCP TRAFFIC WEST (@DCPTrWestBCP) May 5, 2024
"ಸಂಚಾರ ಸಲಹೆ"@BlrCityPolice @Jointcptraffic @blrcitytraffic pic.twitter.com/FUCDiPTy2v
ಬದಲಿ ಅಥವಾ ಪರ್ಯಾಯ ಮಾರ್ಗಗಳು ಹೀಗಿವೆ
1. ಜೆ.ಸಿ. ರಸ್ತೆ ಮತ್ತು ರಾಜಾರಾಮಮೋಹನ್ ರಾಯ್ ರಸ್ತೆ ಕಡೆಯಿಂದ ಮೈಸೂರು ಬ್ಯಾಂಕ್ ಮೂಲಕ ರಾಜಾಜಿನಗರಕ್ಕೆ ಹೋಗುವವರು ಬದಲಿ ಮಾರ್ಗವಾದ ಪ್ಯಾಲೇಸ್ ರಸ್ತೆ, ಚಾಲುಕ್ಯ ಸರ್ಕಲ್, ರೇಸ್ ಕೋರ್ಸ್ ರಸ್ತೆ ಮೂಲಕ ತೆರಳಬೇಕು.
2) ರಾಜಾರಾಮಮೋಹನ್ ರಾಯ್ ರಸ್ತೆ ಮಾಗಡಿ ರಸ್ತೆಗೆ ಕಡೆಗೆ ಹೋಗುವವರು ಹಡ್ನನ್ ಸರ್ಕಲ್, ಕೆ.ಜಿ.ರಸ್ತೆಗೆ ಬರುವ ಬದಲು ಎನ್.ಆರ್. ವೃತ್ತ, ಟೌನ್ ವೃತ್ತ, ಮಾರ್ಕೆಟ್ ಸರ್ಕಲ್ ರಾಯನ್ ಸರ್ಕಲ್, ಸಿರ್ಸಿ ಸರ್ಕಲ್ ಮೂಲಕ ಮಾಗಡಿ ರಸ್ತೆಗೆ ಹೋಗಬೇಕು.
ರಾಜ್ಯದ ಉತ್ತರ ಕರ್ನಾಟಕ ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಮೇ ಏಳರಂದು ನಡೆಯಲಿದೆ. ಉತ್ತರ ಕರ್ನಾಟಕದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.












Click it and Unblock the Notifications