ನಟ ದರ್ಶನ್ ಆರ್‌ಸಿಬಿ ಕಪ್ ಗೆಲ್ಲೋವರ್ಗೂ ಜೈಲಿನಲ್ಲಿರಲಿ-ನೆಟ್ಟಿಗರು
Actor Darshan Thoogudeep: ಮೊನ್ನೆಯಷ್ಟೇ ಐಸಿಸಿ ವಿಶ್ವಕಪ್ 2024ರ ಫೈನಲ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಭಾರತರ ತಂಡ ಗೆದ್ದು ಬೀಗಿದೆ. ಇನ್ನೂ ಈ ಪಂದ್ಯವನ್ನು ಗೆಲ್ಲುವುದಕ್ಕೆ ನಟ ದರ್ಶನ್ ಕಾರಣ ಎನ್ನುವ ಟ್ರೋಲ್ ವಿಡಿಯೋಗಳು ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಮತ್ತೊಂದೆಡೆ ಇದೀಗ ಆರ್‌ಸಿಬಿ ಗೆಲ್ಲೋವರ್ಗೂ ನಟ ದರ್ಶನ್ ಜೈಲಿನಲ್ಲೇ ಇರಲಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಟೀಂ ಇಂಡಿಯಾ ಟಿ-20 ವಿಶ್ವಕಪ್ ಗೆಲ್ಲಲು ನಟ ದರ್ಶನ್ ಕಾರಣ ಎನ್ನುವ ವಿಡಿಯೋಗಳು ಇದೀಗ ಎಲ್ಲೆಡೆ ಹರಿದಾಡುತ್ತಿವೆ. ಇದೀಗ ಇದರ ಬೆನ್ನಲ್ಲೇ ಆರ್‌ಸಿಬಿ ಗೆಲ್ಲೋವರ್ಗೂ ನಟ ದರ್ಶನ್ ಜೈಲಿನಲ್ಲೇ ಇರಲಿ ಎನ್ನುವ ಮಾತುಗಳು ಕೇಳಿಬರುತ್ತಿವೆ. ಭಾರತ ಕಳೆದ ಬಾರಿ 2011ರಲ್ಲಿ ವಿಶ್ವಕಪ್ ಗೆದ್ದಿತ್ತಿ. ಆಗಲೂ ನಟ ದರ್ಶನ್ ಜೈಲು ಸೇರಿದ್ದರು. ಇದೀಗ ಮತ್ತೆ 2024ರಲ್ಲಿ ವಿಶ್ವಕಪ್ ಗೆದ್ದಿದ್ದು, ಈ ಬಾರಿಯೂ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಆದ್ದರಿಂದ ವಿಶ್ವಕಪ್ ಗೆಲ್ಲೆಲ್ಲು ನಟ ದರ್ಶನ್ ಕಾರಣ ಎಂದು ಟ್ರೋಲ್ ಆಗಿತ್ತು.

2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ನಟ ದರ್ಶನ್ ಜೈಲು ಸೇರಿದ್ದರು. ಇದೀಗ 2024ರಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಈ ಎರಡು ಬಾರಿಯೂ ಟೀ ಇಂಡಿಯಾ ವಿಶ್ವಕಪ್ ಗೆದ್ದಿದೆ. ಆದ್ದರಿಂದ ಆರ್‌ಸಿಬಿ ಕಪ್ ಗೆಲ್ಲೋವರ್ಗೂ ಮತ್ತೆ ಜೈಲಿನಲ್ಲಿರಲಿ ಎಂದು ನಟ್ಟಿಗರು ಹೇಳುತ್ತಿದ್ದಾರೆ.
ಖ್ಯಾತ ಸಂಗೀತ ಗಾಯಕಿ ಪೋಸ್ಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ಬಗ್ಗೆ ಗಾಯಕಿ, ಸಂಗೀತ ನಿರ್ದೇಶಕಿ ಶಮಿತಾ ಮಲ್ನಾಡ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಚಿನ್ನ ಕುದಿವ ಕುಲುಮೆಯಲ್ಲಿದೆ, ಕಲ್ಮಶ ಕಳೆದು ಅಪರಂಜಿಯಾಗಿ, ಶುದ್ಧವಾಗಿ ಬರಲು ಸಮಯ ಬೇಕೆಂದು," ತನ್ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದರ್ಶನ್ ಪ್ರಕರಣದ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಶಮಿತಾ ಮಲ್ನಾಡ್ ಅವರು, "ಮನಸೇ ಮನಸೇ.. ಸೋಲೋ ಗೆಲುವೋ.. ನೋವೋ ನಲಿವೋ.. ಏಳೋ ಬೀಳೋ.. ಕಲ್ಲೋ ಮುಳ್ಳೋ.. ಜೀವನದ ಹಾದಿ ಸುಲಭವಲ್ಲ. ಯಶಸ್ಸಿನ ಹಾದಿ ಸುಗಮವಲ್ಲ. ಹಸಿವು, ಅವಮಾನ, ನೋವುಂಡು ಯಶಸ್ಸು ಗಳಿಸಿದ ಹೆಸರು ದರ್ಶನ್ ತೂಗುದೀಪ," ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, "ಸಹಚರ, ಗೆಳೆಯ, ಸೋದರ, ಎಷ್ಟೋ ಜನರಿಗೆ ಸಹಾಯ ಹಸ್ತ ನೀಡಿ ಜೀವನವಾಗಿದ್ದವರು. ಒಳ್ಳೆಯ ಕೆಲಸಗಳಿಗೆ ಕೈಚಾಚಿದ್ದವರು. ಜಾರಿ ಬಿದ್ದಾಗ ಆಳಿಗೊಂದು ಕಲ್ಲಾಗೋದು ಬೇಡ. ಅವರ ಅಭಿನಯ, ಭೇದವಿಲ್ಲದ ಪ್ರೀತಿ, ಸರಳತೆ, ಸ್ನೇಹ ಅಭಿಮಾನದ ಸಿಹಿ ಉಂಡವರು ನಾವು, ಅಭಿಮಾನಿಯಾಗಿ ಸಿನಿಮಾ ಅಭಿನಯ ನೋಡಿ ಅತ್ತು, ನಕ್ಕು, ಚಪ್ಪಾಳೆ ಶಿಳ್ಳೆ ಹೊಡೆದು ಸಂಭ್ರಮಿಸಿದವರು ನಾವು," ಎಂದು ಹೇಳಿಕೊಂಡಿದ್ದಾರೆ.
"ಆರಡಿ ದೇಹವ ಮೂರಡಿ ಬಗ್ಗಿಸಿ ತಗ್ಗಿ ನಮ್ಮೊಂದಿಗೆ ವಿನಯದಿ ಮಾತಾಡುವಾಗ ಹೆಮ್ಮೆ ಪಟ್ಟವರು ನಾವು. ತಪ್ಪಾಗಿದೆಯೋ ಇಲ್ಲವೋ.. ಏನಾಗಿದೆ ಎಂದು ಅರಿಯದವರು ನಾವು. ಹಣಕ್ಕೆ ಬಗ್ಗದೆ ಪ್ರೀತಿಗೆ ಬಗ್ಗಿದವರು ಅವರು, ತಪ್ಪಾಗಿದ್ದರೆ ನ್ಯಾಯಾಂಗ ಇದೆ. ಕಾನೂನಿದೆ ಶಿಕ್ಷೆ ಇದೆ," ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, "ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಹಾಗೂ ಹಲವು ನೊಂದ ಕುಟುಂಬಗಳಿಗೆ ನಮ್ಮೆಲ್ಲರ ಸಾಂತ್ವನ ನೆರವು, ಆಸರೆ, ನ್ಯಾಯ ಬೇಕಿದೆ. ಹಾಗೆಯೇ ಸಾಮಾಜಿ ಜಾಲತಾಣವನ್ನು ಒಳ್ಳೆಯ ವಿಚಾರದ ಚರ್ಚೆಗಷ್ಟೇ ಬಳಸಿ," ಎಂದು ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ, ಮಾಧ್ಯಮವನ್ನು ಒಳಿತಿಗಾಗಿ ಉಪಯೋಗಿಸಿ, ಎಲ್ಲರ ಮೇಲೆ ಗೌರವವಿರಲಿ, ಕಾಮೆಂಟ್ಸ್, ಪೋಸ್ಟ್ ಮೇಲೆ ಹಿಡಿತವಿರಲಿ. ದರ್ಶನ್ ಅಣ್ಣಾ, ಕನ್ನಡದ ಕುಟುಂಬ, ಚಲನಚಿತ್ರದ ಕುಟುಂಬ ನಮ್ಮ ಕುಟುಂಬ, ಕಲಾವಿದರ ಕುಟುಂಬ, ಏನೇ ಆದರೂ ನಮ್ಮ ಮನೆಯವರ ಜೊತೆ ನಾವು ಯಾವಾಗಲೂ ಜೊತೆ ಇರುತ್ತೇವೆ. ಹಾಗೆ ಪ್ರೀತಿ ಅಭಿಮಾನ ಬದಲಾಗದು. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಬೇಕು ಎಂದು ಬರೆದುಕೊಂಡಿದ್ದಾರೆ.
ಚಿನ್ನ ಕುದಿವ ಕುಲುಮೆಯಲ್ಲಿದೆ, ಕಲ್ಮಶ ಕಳೆದು ಅಪರಂಜಿ ಆಗಿ ಶುದ್ಧವಾಗಿ ಬರಲು ಸಮಯ ಬೇಕು. ಸಮಾಧಾನದಿಂದ ದರ್ಶನ್ ಅಣ್ಣಾ ಅವರಿಗಾಗಿ ಪ್ರಾರ್ಥಿಸೋಣ, ಹಾರೈಸೋಣ ಅಂತಾ ಬರೆದುಕೊಂಡು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಇದೀಗ ಭಾರೀ ವೈರಲ್ ಆಗುತ್ತಿದೆ.












Click it and Unblock the Notifications