ದ್ರಾಕ್ಷಿ ಬೆಳೆಗೆ ಕೋಲ್ಡ್ ಸ್ಟೋರೆಜ್‌ಗಳ ಅಲಭ್ಯತೆಯಿಂದ ರಾಜ್ಯಕ್ಕೆ ಸಾವಿರಾರು ಕೋಟಿ ನಷ್ಟ; ಜೆಡಿಎಸ್ ಆತಂಕ
ರಾಜ್ಯದಲ್ಲಿ ವರ್ಷಕ್ಕೆ ಬೆಳೆಯುವ ದ್ರಾಕ್ಷಿಯಲ್ಲಿ 73% ನಷ್ಟು ವಿಜಯಪುರ ಜಿಲ್ಲೆಯೊಂದರಿಂದಲೇ ಬರುತ್ತಿದೆ. ಕೋಲ್ಡ್ ಸ್ಟೋರೆಜ್ ಗಳಿಲ್ಲದಿರುವುದರಿಂದ ರೈತರು ದ್ರಾಕ್ಷಿಯನ್ನು ತಮ್ಮ ಜಿಲ್ಲೆಯಿಂದ ನೆರೆ ರಾಜ್ಯಕ್ಕೆ ಕಳಿಸುತ್ತಿದ್ದಾರೆ.
ಬೆಂಗಳೂರು, ಫೆಬ್ರವರಿ. 23: "ದ್ರಾಕ್ಷಿಗಳನ್ನು ಸಂಗ್ರಹಿಸಿಡಲು ರಾಜ್ಯದಲ್ಲಿ ಅಗತ್ಯವಾಗಿರುವ ಕೋಲ್ಡ್ ಸ್ಟೋರೆಜ್‌ಗಳ ಅಲಭ್ಯತೆಯಿಂದಾಗಿ ನಮ್ಮ ರಾಜ್ಯವು ಸಾವಿರಾರು ಕೋಟಿ ರೂಪಾಯಿಗಳ ವ್ಯಾಪಾರ - ವಹಿವಾಟು ಕಳೆದುಕೊಳ್ಳುತ್ತಿದೆ. ಇದರಿಂದಾಗಿ ದ್ರಾಕ್ಷಿ ಬೆಳೆಗಾರರು ಅನಿವಾರ್ಯವಾಗಿ ಹಣ್ಣನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ" ಎಂದು ಜಾತ್ಯಾತೀತ ಜನತಾದಳ ಅಸಮಾಧಾನ ವ್ಯಕ್ತಪಡಿಸಿದೆ.
ದ್ರಾಕ್ಷಿಗಳನ್ನು ಸಂಗ್ರಹಿಸಿಡಲು ಅಗತ್ಯವಾಗಿರುವ ಕೋಲ್ಡ್ ಸ್ಟೋರೆಜ್ ಗಳ ಅಲಭ್ಯತೆಯಿಂದಾಗಿ ನಮ್ಮ ರಾಜ್ಯವು ಸಾವಿರಾರು ಕೋಟಿ ರೂ. ಗಳ ವ್ಯಾಪಾರ-ವಹಿವಾಟು ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಬೆಳೆಗಾರರು ಅನಿವಾರ್ಯವಾಗಿ ಹಣ್ಣನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ.1/4 pic.twitter.com/C0MU0e67Wn
— Janata Dal Secular (@JanataDal_S) February 23, 2023
ಈ ಬಗ್ಗೆ ಸರಣಿ ಜಾತ್ಯಾತೀತ ಜನತಾದಳ ತನ್ನ ಅಧೀಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. "ವಿಜಯಪುರದ ನಾಗಪಟ್ಟಣದ ಜೆಡಿಎಸ್ ಶಾಸಕ ದೇವಾನಂದ್ ಚೌಹಾಣ್ ಅವರು ಈ ಸಂಬಂಧ ಅಧಿವೇಶನದಲ್ಲಿ ಪ್ರಶ್ನೆ ಎತ್ತಿದ ನಂತರ ಈ ಮಾಹಿತಿ ಬಹಿರಂಗವಾಗಿದೆ. ತೋಟಗಾರಿಕೆ ಸಚಿವ ಮುನಿರತ್ನ ಅವರು ದ್ರಾಕ್ಷಿಯೊಂದರಿಂದ 4,000 ಕೋಟಿಯಷ್ಟು ವ್ಯಾಪಾರ - ವಹಿವಾಟು ರಾಜ್ಯದಿಂದ ಕೈತಪ್ಪಿಹೋಗುತ್ತಿದೆ ಎಂದಿದ್ದಾರೆ" ಎಂದಿದೆ.

"ರಾಜ್ಯದಲ್ಲಿ ವರ್ಷಕ್ಕೆ ಬೆಳೆಯುವ ದ್ರಾಕ್ಷಿಯಲ್ಲಿ 73% ನಷ್ಟು ವಿಜಯಪುರ ಜಿಲ್ಲೆಯೊಂದರಿಂದಲೇ ಬರುತ್ತಿದೆ. ಕೋಲ್ಡ್ ಸ್ಟೋರೆಜ್ ಗಳಿಲ್ಲದಿರುವುದರಿಂದ ರೈತರು ದ್ರಾಕ್ಷಿಯನ್ನು ತಮ್ಮ ಜಿಲ್ಲೆಯಿಂದ ನೆರೆ ರಾಜ್ಯಕ್ಕೆ ಕಳಿಸುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ದೇವಾನಂದ್ ಚೌಹಾಣ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಈ ಕಡೆ ಗಮನಹರಿಸಬೇಕಿದೆ" ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಜಾತ್ಯಾತೀತ ಜನತಾದಳ ಆಗ್ರಹಿಸಿದೆ.
"ಇಷ್ಟು ದೊಡ್ಡ ಮೊತ್ತದ ವ್ಯಾಪಾರ ನಮ್ಮ ರಾಜ್ಯದಲ್ಲೆ ನಡೆದರೆ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಳ್ಳಬಹುದು. ಬೆಳೆಗಾರರಿಗೆ ಹೆಚ್ಚಿನ ಆದಾಯ ಸಿಗುತ್ತದೆ. ರಾಜ್ಯ ಸರ್ಕಾರದ ಖಜಾನೆಗೆ ತೆರಿಗೆ ಹರಿದು ಬರಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಇಷ್ಟೊತ್ತಿಗಾಗಲೇ, ಕೋಲ್ಡ್ ಸ್ಟೋರೆಜ್ ಗಳನ್ನು ನಿರ್ಮಿಸಬೇಕಿತ್ತು" ಎಂದು ಭಾರತೀಯ ಜನತಾ ಪಕ್ಷ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಇನ್ನು, ಬುಧವಾರ ಲಾಲ್‌ಬಾಗ್‌ನಲ್ಲಿರುವ ಹಾಪ್‌ಕಾಮ್ಸ್ ಪ್ರಧಾನ ಕಚೇರಿಯಲ್ಲಿ 'ದ್ರಾಕ್ಷಿ - ಕಲ್ಲಂಗಡಿ ಮಾರಾಟ ಮೇಳ- 2023' ಉದ್ಘಾಟಿಸಲಾಗಿದೆ. ತೋಟಗಾರಿಕೆ ಸಚಿವ ಮುನಿರತ್ನ ಮೇಳಕ್ಕೆ ಚಾಲನೆ ನೀಡಿದ್ದಾರೆ. ಚಿಕ್ಕಬಳ್ಳಾಪುರ, ವಿಜಯಪುರ, ಬಾಗಲಕೋಟೆ, ಕೋಲಾರ, ಕೊಪ್ಪಳ ಭಾಗದ ಎಲ್ಲಾ ರೈತರಿಂದ ಟನ್ ಗಟ್ಟಲೆ ದ್ರಾಕ್ಷಿ, ಕಲ್ಲಂಗಡಿಯನ್ನು ಖರೀದಿ ಮಾಡಲಾಗಿದೆ. ಸುಮಾರು 13 ವಿಧದ ದ್ರಾಕ್ಷಿಗಳು ಮತ್ತು ನಾಲ್ಕು ವಿಧದ ಕರಬೂಜುಗಳು ಮೇಳದಲ್ಲಿ ಲಭ್ಯವಿವೆ.












Click it and Unblock the Notifications