ಜಲಮಂಡಳಿ ಅಪೂರ್ಣ ಕಾಮಗಾರಿ, ಸವಾರರ ಪರದಾಟ

ಬೆಂಗಳೂರು, ಆ.21 : ಬೆಂಗಳೂರಿನಲ್ಲಿ ರಸ್ತೆಯನ್ನು ಏಕೆ ಅಗೆದಿರುತ್ತಾರೆ? ಎಂಬುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮತ್ತು ಜಲಮಂಡಳಿಗೆ ಮಾತ್ರ ತಿಳಿದಿರುತ್ತದೆ. ಆದರೆ, ಅಪೂರ್ಣ ಕಾಮಗಾರಿಗಳಿಂದ ವಾಹನಗಳು ಸಿಕ್ಕಿಹಾಕಿಕೊಂಡು ತಾಸುಗಟ್ಟಲೇ ಟ್ರಾಫಿಕ್ ಜಾಮ್‌ ಉಂಟಾಗುವುದು ಮಾಮೂಲು. ಗುರುವಾರವೂ ನಿಟ್ಟೂರು ಶ್ರೀನಿವಾಸರಾವ್ ರಸ್ತೆಯಲ್ಲಿ ವಾಹನಸವಾರರು ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್‌ನಿಂದಾಗಿ ಪರದಾಡಿದರು.

ನಿಟ್ಟೂರು ಶ್ರೀನಿವಾಸರಾವ್ ರಸ್ತೆಯಲ್ಲಿ ಬೆಂಗಳೂರು ಜಲಮಂಡಳಿಯ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿತ್ತು. ಕಾಮಗಾರಿ ಮುಗಿಸಿ ಅಗೆದ ರಸ್ತೆಯ ಗುಂಡಿಗೆ ಸ್ವಲ್ಪ ಮಣ್ಣು ತುಂಬಿ ಬಿಟ್ಟಿದ್ದರು. ಬುಧವಾರ ರಾತ್ರಿ ಸುರಿದ ಮಳೆಗೆ ಆ ಮಣ್ಣು ಕೊಚ್ಚಿಹೋಗಿದೆ. ಗುರುವಾರ ಬೆಳಗ್ಗೆ ವಾಹನ ಸಂಚಾರ ಆರಂಭವಾದಾಗ ಕೆಎಸ್ಆರ್‌ಟಿಸಿ ಬಸ್ಸೊಂದು ಆ ಹಳ್ಳದಲ್ಲಿ ಸಿಲುಕಿ ಸಂಚಾರ ದಟ್ಟಣೆ ಉಂಟಾಗಿತ್ತು.

ಬಸ್ಸು ಸಿಲುಕಿಕೊಂಡಿದ್ದರಿಂದ ರಸ್ತೆಯಲ್ಲಿನ ಸಂಚಾರಿಸುವ ವಾಹನ ಸವಾರರು ಪರದಾಡುವಂತಾಯಿತು. ಹೆಚ್ಚು ವಾಹನ ದಟ್ಟಣೆ ಇರುವ ಸೌತ್‌ ಎಂಡ್ ವೃತ್ತದಿಂದ ಬರುವ ವಾಹನಗಳು ಈ ರಸ್ತೆಯಲ್ಲಿ ಸಾಗುವುದರಿಂದ ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಚಿತ್ರಗಳಲ್ಲಿ ನೋಡಿ ಟ್ರಾಫಿಕ್ ಜಾಮ್

ಜಲಮಂಡಳಿ ಕಾಮಗಾರಿ ತಂದ ಅವ್ಯವಸ್ಥೆ

ಜಲಮಂಡಳಿ ಕಾಮಗಾರಿ ತಂದ ಅವ್ಯವಸ್ಥೆ

ಬೆಂಗಳೂರು ಜಲಮಂಡಳಿ ಕೈಗೊಂಡಿರುವ ಕಾಮಗಾರಿಯಿಂದಾಗಿ ಗುರುವಾರ ನಿಟ್ಟೂರು ಶ್ರೀನಿವಾಸರಾವ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ರಸ್ತೆಯ ಗುಂಡಿಗೆ ಮಣ್ಣು ತುಂಬಿರಲಿಲ್ಲ

ರಸ್ತೆಯ ಗುಂಡಿಗೆ ಮಣ್ಣು ತುಂಬಿರಲಿಲ್ಲ

ಜಲಮಂಡಳಿ ಕೈಗೊಂಡಿದ್ದ ಕಾಮಗಾರಿಯನ್ನು ಮುಗಿಸಿತ್ತು. ಆದರೆ, ತಗೆದ ಹಳ್ಳಕ್ಕೆ ಸಂಪೂರ್ಣವಾಗಿ ಮಣ್ಣು ಭರ್ತಿ ಮಾಡಿರಲಿಲ್ಲ.

ವರುಣ ದೇವನ ಕೃಪೆಯೂ ಕಾರಣ

ವರುಣ ದೇವನ ಕೃಪೆಯೂ ಕಾರಣ

ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಹಾಕಿದ್ದ ಸ್ವಲ್ಪ ಮಣ್ಣು ಸಹ ಕೊಚ್ಚಿ ಹೋಗಿತ್ತು. ಇದರಿಂದಾಗಿ ವಾಹನಗಳು ಹಳ್ಳದಲ್ಲಿ ಸಿಕ್ಕಿಹಾಕಿಕೊಂಡು, ಪರದಾಡುವಂತಾಯಿತು.

ಸಿಕ್ಕಿಬಿದ್ದ ಕೆಎಸ್ಆರ್‌ಟಿಸಿ ಬಸ್

ಸಿಕ್ಕಿಬಿದ್ದ ಕೆಎಸ್ಆರ್‌ಟಿಸಿ ಬಸ್

ಜಲಮಂಡಳಿ ತೆಗೆದಿದ್ದ ಹಳ್ಳದಲ್ಲಿ ಕೆಎಸ್ಆರ್‌ಟಿಸಿ ಬಸ್ ಗುರುವಾರ ಸಿಕ್ಕಿಹಾಕಿಕೊಂಡಿದ್ದರಿಂದ ತಾಸುಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಕ್ರೇನ್ ಸಹಾಯದಿಂದ ಬಸ್ ತೆರವು

ಕ್ರೇನ್ ಸಹಾಯದಿಂದ ಬಸ್ ತೆರವು

ಹಳ್ಳದಲ್ಲಿ ಸಿಲುಕಿದ್ದ ಬಸ್ಸನ್ನು ಮೇಲೆತ್ತಲು ಕ್ರೇನ್ ತರಿಸಬೇಕಾಯಿತು. ಕ್ರೇನ್ ಆಗಮಿಸಿ ಬಸ್ಸು ತೆರವುಗೊಳ್ಳುವ ತನಕ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+