ಮೋದಿ ಸಹಿ ಹಾಕಿದ ಚೆಕ್ ಹಂಚಿದ ಯುವ ಕಾಂಗ್ರೆಸ್ಸಿಗರು!

ಬೆಂಗಳೂರು, ಏ.3: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಕೊಟ್ಟ ಭರವಸೆ ಹುಸಿಯಾಗಿದೆ. ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತಂದು ಪ್ರತಿಯೊಬ್ಬ ನಾಗರಿಕರ ಖಾತೆಗೆ 15 ಲಕ್ಷ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಅದರೆ, ಈ ಸುಳ್ಳು ಹೇಳಿ ಅಧಕಾರ ಪಡೆದುಕೊಂಡು ಜನರಿಗೆ ಮೋಸ ಮಾಡಿದೆ ಎಂದು ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಅಧಿಕಾರ ಸಿಕ್ಕರೆ ನೂರು ದಿನಗಳಲ್ಳೇ ವಿದೇಶಿ ಬ್ಯಾಂಕ್‌ಗಳಲ್ಲಿರುವ 90 ಸಾವಿರ ಕೋಟಿ ರು,ಗೂ ಅಧಿಕ ಕಪ್ಪು ಹಣವನ್ನು ತಂದು ದೇಶದ ಎಲ್ಲಾ ನಾಗರೀಕರ ಖಾತೆಗಳಿಗೂ 15 ಲಕ್ಷದಂತೆ ಹಂಚುವುದಾಗಿ ನರೇಂದ್ರ ಮೋದಿ ಹೇಳಿದ್ದರು. ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ನಮ್ಮ ಖಾತೆಗೆ ಇನ್ನೂ ಹಣ ಬಂದಿಲ್ಲ ಯಾಕೆ ಎಂದು ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಆನಂದ ರಾವ್ ವೃತ್ತದ ಬಳಿಯ ಕಾಂಗ್ರೆಸ್ ಭವನದಲ್ಲಿ ಯುವ ಮುಖಂಡ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು ನಂತರ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರು, ಮೆರವಣಿಗೆಯಲ್ಲಿ ಅಶೋಕ ಹೊಟೇಲ್‌ ನತ್ತ ತೆರಳಿದರು.

ಬಿಜೆಪಿ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ನಮ್ಮ ಖಾತೆಗೆ ಇನ್ನೂ 15 ಲಕ್ಷ ಹಣ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಲು ಮುಂದಾದ ಕಾಂಗ್ರೆಸ್ಸಿಗರನ್ನು ಮಾರ್ಗ ಮಧ್ಯೆಯಲ್ಲೇ ಪೊಲೀಸರು ತಡೆಹಿಡಿದು ಬಂಧಿಸಲಾಯಿತು.

ಬಿಜೆಪಿ ನೀಡಿದ ಪೊಳ್ಳು ಭರವಸೆ: ಕಾಂಗ್ರೆಸ್ಸಿಗರು

ಬಿಜೆಪಿ ನೀಡಿದ ಪೊಳ್ಳು ಭರವಸೆ: ಕಾಂಗ್ರೆಸ್ಸಿಗರು

ಅಧಿಕಾರ ನೀಡಿ ನೂರೇ ದಿನಗಳಲ್ಲಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಪು ಹಣವನ್ನು ವಾಪಾಸ್ ತಂದು ದೇಶದ ಎಲ್ಲಾ ನಾಗರೀಕರ ಖಾತೆಗಳಿಗೆ ಹಂಚುತ್ತೇನೆ ಎಂದು ಹೇಳಿದ್ದರು. ದೇಶದ ಬಡವರ ಹಾಗೂ ಕೃಷಿಕರ ಹಿತರಕ್ಷಣೆಗೆ ಬದ್ಧನಾಗಿರುತ್ತೇನೆ ಎಂದಿದ್ದರು.

ಆದರೆ ಅಧಿಕಾರಕ್ಕೆ ಬಂದು ಮೂನ್ನೂರು ದಿನಗಳಾದರೂ ಇನ್ನೂ ಏಕೆ ನಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಬಂದಿಲ್ಲ ಎಂಬುದು ನಮ್ಮ ಪ್ರಶ್ನೆ,

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಿಜ್ವಾನ್ ಅರ್ಷದ್ ಮಾತನಾಡಿ

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಿಜ್ವಾನ್ ಅರ್ಷದ್ ಮಾತನಾಡಿ

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಿಜ್ವಾನ್ ಅರ್ಷದ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ದಿನ ಬೆಳಗಾಗುವುದರೊಳಗಾಗಿ ಎಲ್ಲರ ಬಾಳು ಬೆಳಗುವುದಾಗಿ ಹೇಳಿದ್ದ ಮೋದಿ ಈಗ ಏನು ಮಾಡಿದ್ದಾರೆ. 15 ಲಕ್ಷ ರೂ.ಗಳು ಎಲ್ಲಿವೆ. ಎಲ್ಲರಿಗೂ ಉದ್ಯೋಗ ಕೊಡುವುದಾಗಿ ಹೇಳಿದ್ದ ಮೋದಿಯವರಿಗೆ ಮಾತ್ರ ಈಗ ಪ್ರಧಾನಿ ಕೆಲಸ ಸಿಕ್ಕಿದೆ ಎಂದು ಲೇವಡಿ ಮಾಡಿದರು.

ಎಐಸಿಸಿ ಮುಖಂಡ ಸೂರಜ್ ಹೆಗ್ಡೆ ಮಾತನಾಡಿ,

ಎಐಸಿಸಿ ಮುಖಂಡ ಸೂರಜ್ ಹೆಗ್ಡೆ ಮಾತನಾಡಿ,

ಸರ್ಕಾರದ ಸ್ವತ್ತಾಗಿದ್ದ ಅಶೋಕ್ ಹೊಟೇಲನ್ನು ಹಿಂದಿನ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕಡಿಮೆ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡಿತ್ತು. ಈಗ ಅಲ್ಲೇ ಕುಳಿತು ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು. ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದಿನೇಶ್ ಗುಂಡೂರಾವ್ ಮಾತನಾಡಿ

ದಿನೇಶ್ ಗುಂಡೂರಾವ್ ಮಾತನಾಡಿ

ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಅತ್ಯುನ್ನತ ಭೂ ಸ್ವಾಧೀನ ಕಾಯ್ದೆಯನ್ನು ಮಾರ್ಪಡಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ, ಕಾರ್ಪೊರೇಟ್ ಗಳ ತಾಳಕ್ಕೆ ತಕ್ಕಂತೆ ಕಾಯ್ದೆ ಬದಲಾವಣೆ ಮಾಡಿದೆ.

ತಿದ್ದುಪಡಿ ಮಸೂದೆಯನ್ನು ಸಂಸತ್‌ನಲ್ಲಿ ಚರ್ಚೆಗೆ ಒಳಪಡಿಸದೆ ನೇರವಾಗಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿ ಬಡ ರೈತರನ್ನು ಬೀದಿ ಪಾಲು ಮಾಡಲು ಮುಂದಾಗಿದೆ ಎಂದು ಕಿಡಿಕಾರಿದರು.
ಮೋದಿ ನಮಗೂ ಪ್ರಧಾನಿ ಭೇಟಿಯಾಗಲು ಬಿಡಿ

ಮೋದಿ ನಮಗೂ ಪ್ರಧಾನಿ ಭೇಟಿಯಾಗಲು ಬಿಡಿ

ಮೋದಿ ಬಿಜೆಪಿಗೆ ಮಾತ್ರ ಪ್ರಧಾನಿಯಲ್ಲ, ನಮಗೂ ಅವರನ್ನು ಭೇಟಿ ಮಾಡುವ ಅಧಿಕಾರವಿದೆ, ಅವಕಾಶ ಮಾಡಿಕೊಡಿ, ಚೆಕ್ ವಿಷಯ ಮೋದಿಯನ್ನೇ ಕೇಳಿ ತಿಳಿದುಕೊಳ್ಳುತ್ತೇವೆ ಎಂದು ಕಾರ್ಯಕರ್ತರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ತಿಳಿಗೊಳಿಸಲು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಮೋದಿ ಸಹಿ ಹಾಕಿದ 15 ಲಕ್ಷ ರು ಚೆಕ್ ಹಂಚಿಕೆ

ಮೋದಿ ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ನಮ್ಮ ಖಾತೆಗೆ ಇನ್ನೂ ಹಣ ಬಂದಿಲ್ಲ ಯಾಕೆ ಎಂದು ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+