Karnataka Dam Water Level: ಮುಂದುವರಿದ ಭಾರೀ ಮಳೆ! ಜಲಾಶಯಗಳು ಭರ್ತಿ: ಇಂದಿನ ಮಟ್ಟ, ವಿವರ
Dam Water Level: ಕರ್ನಾಟಕ ರಾಜ್ಯಾದಲ್ಲಿ ಈವರೆಗೆ ಉತ್ತಮ ಮಳೆ ಆಗಿದೆ. ಅದರಲ್ಲೂ ವಿಶೇಷವಾಗಿ ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆ ದಾಖಲಾಗಿದೆ. ಕೊಡಗು, ಮೈಸೂರು, ತಲಕಾವೇರಿ, ಪಶ್ಚಿಮ ಘಟ್ಟಗಳು ಹಾಗೂ ಕೇರಳ ಗಡಿ ಭಾಗಗಳಲ್ಲಿ ಹೆಚ್ಚಿನ ಮಳೆ ಆಗಿದೆ. ಹೀಗಾಗಿ ರಾಜ್ಯದ ಹಲವು ಜಲಾಶಯಗಳು ಅವಧಿಗೂ ಮೊದಲೇ ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಇಂದು ಗುರುವಾರ ಎಲ್ಲೆಲ್ಲಿ ಹೆಚ್ಚು ಮಳೆ ಆಗಿದೆ. ಯಾವೆಲ್ಲ ಡ್ಯಾಂಗಳ ಒಳಹರಿವು ಏರಿಕೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.
ಕೊಡಗಿನ ತಲಕಾವೇರಿಯಲ್ಲಿ 31 ಜುಲೈ ರಂದು ಬೆಳಗ್ಗೆವರೆಗೆ 35.6 ಮಿಮೀ ಮಳೆ ಆಗಿದೆ. ಜುಲೈ ಸಂಚಿತ ಮಳೆ 2375.4 ಮಿಮೀ. ಮತ್ತು ವಾರ್ಷಿಕ ಮಳೆ 6309.2 ಮಿಮೀ ನಷ್ಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಅಷ್ಟೇ ಅಲ್ಲದೇ, ಭಾಗಮಂಡಲದಲ್ಲಿ ಇಂದು ಬೆಳಗ್ಗೆವರೆಗೆ 24.2 ಮಿಮೀ. ಮಳೆ ದಾಖಲಾಗಿದೆ. ಈ ಭಾಗದ ಜುಲೈ ಸಂಚಿತ ಮಳೆ 1686 ಮಿಮೀ ಆಗಿದ್ದು, ವಾರ್ಷಿಕ ಮಳೆ 4644 ಮಿಮೀನಷ್ಟು ಎಂದು ಹವಾಮಾನ ಕೇಂದ್ರ ತಿಳಿಸಿದೆ.

ಕೆಲವೆಡೆ ಮಳೆ ಕಡಿಮೆ ಆಗಿದ್ದು, ಮಲೆನಾಡಿನಲ್ಲಿ ಇಳಿಕೆ ಆಗಿಲ್ಲ. ಕೊಡಗು ಜಿಲ್ಲೆ ವ್ಯಾಪ್ತಿಯ ಸೂರ್ಲಬ್ಬಿಯಲ್ಲಿ 60 ಮಿ.ಮೀ, ಸಂಪಾಜೆ 60ಮಿ.ಮೀ, ಶಾಂತಳ್ಳಿ 38 ಮಿ.ಮೀ, ತಲಕಾವೇರಿ 35.6 ಮಿ.ಮೀ, ಮಡಿಕೇರಿ 31 ಮಿ.ಮೀ, ಭಾಗಮಂಡಲ 24.2 ಮಿ.ಮೀ, ಅಮ್ಮತ್ತಿ 20.5 ಮಿ.ಮೀ, ಶನಿವಾರಸಂತೆ 16 ಮಿ.ಮೀ, ಸೋಮವಾರಪೇಟೆ 14 ಮಿ.ಮೀ, ಬಾಳೆಲೆ 12.09 ಮಿ.ಮೀ, ನಾಪೋಕ್ಲು 12ಮಿ.ಮೀ, ಕೊಡ್ಲಿಪೇಟೆ 12 ಮಿ.ಮೀ, ಪೊನ್ನಂಪೇಟೆ 12 ಮಿ.ಮೀ, ಸುಂಟಿಕೊಪ್ಪ 8ಮಿ.ಮೀ, ಶ್ರೀಮಂಗಲ 7.2 ಮಿ.ಮೀ, ಹುದಿಕೆರೆ 7.1 ಮಿ.ಮೀ, ವಿರಾಜಪೇಟೆ 6.2 ಮಿ.ಮೀ ಮತ್ತು ಕುಶಾಲನಗರದಲ್ಲಿ 3ಮಿ.ಮೀ ಮಳೆ ಆಗಿದೆ.
ಹೀಗೆ ಮಳೆ ಮುಂದುವರಿ ಪರಿಣಾಮ ಕೃಷ್ಣ ರಾಜ ಸಾಗರ, ಕಬಿನಿ, ಹಾರಂಗಿ ಡ್ಯಾಂ, ಹೇಮಾವತಿ ಅಣೆಕಟ್ಟು, ಭದ್ರಾ, ಆಲಮಟ್ಟಿ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಏರಿಕೆ ಆಗಿದೆ. ನದಿಗಳು ತುಂಬಿ ಹರಿಯುತ್ತಿವೆ. ಅಣೆಕಟ್ಟುಗಳಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊಡ ಬಿಡಸಲಾಗುತ್ತಿದೆ.
ಹೇಮಾವತಿ ಅಣೆಕಟ್ಟು ವಿವರ
ಡ್ಯಾಂ ಒಟ್ಟು ಎತ್ತರ : 2922 ಅಡಿ
ನೀರು ತುಂಬಿರುವ ಪ್ರಮಾಣ : 2921 ಅಡಿ
ಒಟ್ಟು ನೀರು ಸಂಗ್ರಹ ಸಾಮರ್ಥ್ಯ : 37.10 ಟಿಎಂಸಿ
ಇಂದಿನ ನೀರು ಸಂಗ್ರಹ: 36.137
ಒಟ್ಟು ಒಳಹರಿವು: 9303 ಕ್ಯೂಸೆಕ್
ಇಂದಿನ ಹೊರಹರಿವು: 8125 ಕ್ಯೂಸೆಕ್
KRS ಡ್ಯಾಂ ನೀರು ಸಂಗ್ರಹದ ಮಟ್ಟ
ಡ್ಯಾಂ ಒಟ್ಟು ಎತ್ತರ: 124.80 ಅಡಿ
ಇಂದಿನ ನೀರು ಸಂಗ್ರಹ: 121.65 ಅಡಿ
ಕೆಆರ್‌ಎಸ್ ಒಟ್ಟು ನೀರು ಸಾಮರ್ಥ್ಯ: 49.452 ಟಿಎಂಸಿ
ಇಂದಿನ ನೀರು ಸಂಗ್ರಹ: 45.172 ಟಿಎಂಸಿ
ಇವತ್ತಿನ ಒಳಹರಿವು : 21,635 ಕ್ಯೂಸೆಕ್
ಒಟ್ಟು ಹೊರ ಹರಿವು: 13,881 ಕ್ಯೂಸೆಕ್












Click it and Unblock the Notifications